ರಿಯಾಲಿಟಿ ಶೋ ನೋಡಿ ಸಾಧನೆ ಮಾಡ್ತೀವಿ ಎಂದು ಬಳ್ಳಾರಿ ತೊರೆದಿದ್ದ ಬಾಲಕಿಯರು ಬೆಂಗಳೂರಿನಲ್ಲಿ ಪತ್ತೆ

ರಿಯಾಲಿಟಿ ಶೋ ನೋಡಿ ಸಾಧನೆ ಮಾಡ್ತೀವಿ ಎಂದು ಬಳ್ಳಾರಿ ತೊರೆದಿದ್ದ ಬಾಲಕಿಯರು ಬೆಂಗಳೂರಿನಲ್ಲಿ ಪತ್ತೆ
ರಿಯಾಲಿಟಿ ಶೋ ನೋಡಿ ಸಾಧನೆ ಮಾಡ್ತೀವಿ ಎಂದು ಬಳ್ಳಾರಿ ತೊರೆದಿದ್ದ ಬಾಲಕಿಯರು ಬೆಂಗಳೂರಿನಲ್ಲಿ ಪತ್ತೆ

ಬಾಲಕಿಯರು, ನಾವು ಏನಾದರೂ ಸಾಧನೆ ಮಾಡಿ ಬರ್ತಿವಿ, ನಮ್ಮ ಬಗ್ಗೆ ಚಿಂತಿಸಬೇಡಿ ಎಂದು ಪೋಷಕರ ಮೊಬೈಲ್ನಲ್ಲಿ ಆಡಿಯೋ ಮಾಡಿ ಮನೆ ಬಿಟ್ಟಿದ್ದರು. ಆಡಿಯೋ ಕೇಳಿಸಿಕೊಂಡು ಪೋಷಕರು ಊರೆಲ್ಲಾ ಹುಡುಕಾಡಿದ್ದರು.

TV9kannada Web Team

| Edited By: Ayesha Banu

Apr 27, 2022 | 11:32 AM

ಬೆಂಗಳೂರು: ಬಳ್ಳಾರಿಯಲ್ಲಿ ನಾಪತ್ತೆಯಾಗಿದ್ದ ನಾಲ್ವರು ಬಾಲಕಿಯರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ರಿಯಾಲಿಟಿ ಶೋ ವೀಕ್ಷಿಸಿ ಊರು ತೊರೆದಿದ್ದ ನಾಲ್ವರು ಬಾಲಕಿಯರನ್ನು 12 ಗಂಟೆಯೊಳಗೆ ಪತ್ತೆ ಮಾಡಲಾಗಿದೆ. ಬೆಂಗಳೂರಿನಲ್ಲಿ KSRTC ಸಿಬ್ಬಂದಿ ಬಾಲಕಿಯರನ್ನು ರಕ್ಷಣಿಸಿದ್ದಾರೆ. ಬಾಲಕಿಯರು, ನಾವು ಏನಾದರೂ ಸಾಧನೆ ಮಾಡಿ ಬರ್ತಿವಿ, ನಮ್ಮ ಬಗ್ಗೆ ಚಿಂತಿಸಬೇಡಿ ಎಂದು ಪೋಷಕರ ಮೊಬೈಲ್ನಲ್ಲಿ ಆಡಿಯೋ ಮಾಡಿ ಮನೆ ಬಿಟ್ಟಿದ್ದರು. ಆಡಿಯೋ ಕೇಳಿಸಿಕೊಂಡು ಪೋಷಕರು ಊರೆಲ್ಲಾ ಹುಡುಕಾಡಿದ್ದರು. ಬಳ್ಳಾರಿಯ ಪಾರ್ವತಿನಗರದ ಮನೆಯಿಂದ ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಕಾಣೆಯಾಗಿದ್ದವರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.

ಬಾಲಕಿಯರನ್ನು ರಕ್ಷಿಸಿದ ಕೆಎಸ್ಆರ್ಟಿಸಿ ಸಿಬ್ಬಂದಿ ಊರು ಬಿಟ್ಟು ಬಂದಿದ್ದ 6ರಿಂದ12 ವರ್ಷದ ನಾಲ್ವರು ಬಾಲಕಿಯರನ್ನು ಗಮನಿಸಿದ ಕೆಎಸ್ಆರ್ಟಿಸಿ ಬಸ್ ಕಂಡೆಕ್ಟರ್ ಹಾಗೂ ಡ್ರೈವರ್ ಬಾಲಕಿಯರ ಬಳಿ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ಅವರು ಮನೆ ಬಿಟ್ಟು ಬಂದಿರೋದು ತಿಳಿದಿದೆ. ಕೂಡಲೇ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಬಾಲಕಿಯರನ್ನು ಕರೆದುಕೊಂಡು ಹೋಗಲಾಗಿದೆ. ಪೊಲೀಸರಿಗೆ ಮಕ್ಕಳನ್ನೊಪ್ಪಿಸಿ ಸಿಬ್ಬಂದಿ ತಮ್ಮ ಕೆಲಸಕ್ಕೆ ತೆರಳಿದ್ದಾರೆ. ಬಳಿಕ ಉಪ್ಪಾರಪೇಟೆ ಪೊಲೀಸರು ಪೋಷಕರಿಗೆ ಕರೆ ಮಾಡಿ ಬಾಲಕಿಯರು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೋಷಕರು ರಾತ್ರೋ ರಾತ್ರಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಿಗ್ಗೆ 8 ಗಂಟೆಗೆ ಪೋಷಕರ ಮಡಿಲಿಗೆ ಮಕ್ಕಳನ್ನೊಪ್ಪಿಸಲಾಗಿದೆ. ಕುಟುಂಬಸ್ಥರು ಕೆಎಸ್ಆರ್ಟಿಸಿ ಚಾಲಕ, ಕಂಡಕ್ಟರ್ ಗೆ ಧನ್ಯವಾದ ತಿಳಿಸಿದ್ದಾರೆ ಹಾಗೂ ಉಪ್ಪಾರಪೇಟೆ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಸದ್ಯ ಮಕ್ಕಳ ಜೊತೆ ಬಳ್ಳಾರಿಗೆ ಹೊರಟಿದ್ದಾರೆ.

ಘಟನೆ ವಿವರ 6ರಿಂದ12 ವರ್ಷದ ನಾಲ್ವರು ಬಾಲಕಿಯರು ರಿಯಾಲಿಟಿ ಶೋ ವೀಕ್ಷಿಸಿ ನಾವು ಏನಾದ್ರು ಸಾಧನೆ ಮಾಡಬೇಕು ಎಂದು ಮನಸ್ಸು ಮಾಡಿ ಬಳ್ಳಾರಿಯ ತಮ್ಮ ಮನೆಯನ್ನು ತೊರೆದಿದ್ದರು. ಮಧ್ಯಾಹ್ನ 3.30ರ ಸುಮಾರಿಗೆ ನಾಪತ್ತೆಯಾಗಿದ್ದರು. ಪೋಷಕರು ತಮ್ಮ ಮೊಬೈಲ್​ನಲ್ಲಿದ್ದ ಆಡಿಯೋ ಕೇಳಿಸಿಕೊಂಡ ನಂತರ ಗಾಬರಿಯಾಗಿ ಊರೆಲ್ಲಾ ಹುಡುಕಾಡಿ ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಡಿಸುತ್ತಿದ್ದರು. ಸದ್ಯ ಮಕ್ಕಳು ನಾಪತ್ತೆಯಾದ 12ಗಂಟೆ ಒಳಗೆ ಮಕ್ಕಳು ಪತ್ತೆಯಾಗಿದ್ದಾರೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಪೋಷಕರಿಗೆ ಕರೆ ಮಾಡಿ ಮಕ್ಕಳನ್ನು ಒಪ್ಪಿಸಿದ್ದಾರೆ. ಆತಂಕದಲ್ಲಿದ್ದ ಪೋಷಕರು ಸದ್ಯ ನಿಟ್ಟುಸಿರುಬಿಟ್ಟಿದ್ದಾರೆ.

ಇದನ್ನೂ ಓದಿ: ತುಮಕೂರಿನಲ್ಲಿ ದಲಿತರ ಬೀದಿಗೆ ದೇವರನ್ನ ಕಳುಹಿಸಲು ಹಿಂದೇಟು! ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ನಿಮ್ಮ ಟೈಮ್​ಲೈನ್: ಭಾರತದ ಭಾರಜೀವಿ ರಿಜ್ವಾನಾ ಬಾನು ‘ಬ್ಯಾಡ್ಜ್ ನಂಬರ್ ಹದಿನಾರು‘

Follow us on

Related Stories

Most Read Stories

Click on your DTH Provider to Add TV9 Kannada