Sleep: ಮಗುವಿನಂತೆ ಸುಖವಾಗಿ ನಿದ್ರಿಸಲು ಸಹಾಯ ಮಾಡಲಿವೆ ಈ ಆಹಾರಗಳು

| Updated By: ನಯನಾ ರಾಜೀವ್

Updated on: Jul 06, 2022 | 12:58 PM

ಸುಖನಿದ್ರೆಯು ದೇವರು ಕೊಟ್ಟ ವರವಿದ್ದಂತೆ ಸಾಮಾನ್ಯವಾಗಿ ಎಲ್ಲರಿಗೂ ಈ ವರ ದಕ್ಕುವುದಿಲ್ಲ. ರಾತ್ರಿ ಮಲಗಿದರೆ ಬೆಳಗ್ಗೆಯೇ ಏಳುವವರು ಕೆಲವೇ ಕೆಲವು ಮಂದಿ, ಬಹುತೇಕ ಮಂದಿಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಲೇ ಇರುತ್ತದೆ. ಮೆಲಟೋನಿನ್ ಅಥವಾ ಸ್ಲೀಪ್ ಹಾರ್ಮೋನ್​ಗಳು ನಿದ್ರೆಯನ್ನು ಉತ್ತಮಗೊಳಿಸುತ್ತದೆ. ಈ ಹಾರ್ಮೋನ್​ಗಳು ಬೆಳಕಿಗೆ ಪ್ರತಿಕ್ರಿಯಿಸುತ್ತವೆ

Sleep: ಮಗುವಿನಂತೆ ಸುಖವಾಗಿ ನಿದ್ರಿಸಲು ಸಹಾಯ ಮಾಡಲಿವೆ ಈ ಆಹಾರಗಳು
Sleep
Follow us on

ಸುಖನಿದ್ರೆಯು ದೇವರು ಕೊಟ್ಟ ವರವಿದ್ದಂತೆ ಸಾಮಾನ್ಯವಾಗಿ ಎಲ್ಲರಿಗೂ ಈ ವರ ದಕ್ಕುವುದಿಲ್ಲ. ರಾತ್ರಿ ಮಲಗಿದರೆ ಬೆಳಗ್ಗೆಯೇ ಏಳುವವರು ಕೆಲವೇ ಕೆಲವು ಮಂದಿ, ಬಹುತೇಕ ಮಂದಿಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಲೇ ಇರುತ್ತದೆ. ಮೆಲಟೋನಿನ್ ಅಥವಾ ಸ್ಲೀಪ್ ಹಾರ್ಮೋನ್​ಗಳು ನಿದ್ರೆಯನ್ನು ಉತ್ತಮಗೊಳಿಸುತ್ತದೆ. ಈ ಹಾರ್ಮೋನ್​ಗಳು ಬೆಳಕಿಗೆ ಪ್ರತಿಕ್ರಿಯಿಸುತ್ತವೆ.

ಒಂದೊಮ್ಮೆ ನೀವು ಕತ್ತಲೆಯ ಕೋಣೆಯಲ್ಲಿದ್ದರೆ ಹಾರ್ಮೋನ್​ಗಳ ಪ್ರಭಾವ ಕಡಿಮೆ ಇರುತ್ತದೆ, ಬೆಳಕಿನಲ್ಲಿದ್ದರೆ ಈ ಹಾರ್ಮೋನ್​ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ. ಆರೋಗ್ಯಯುತ ಆಹಾರ ಸೇವನೆ, ವ್ಯಾಯಾಮವೂ ಕೂಡ ನಿಯಮಿತವಾಗಿ ಮಾಡಲೇಬೇಕಿದೆ.

ಉತ್ತಮ ನಿದ್ರೆಗೆ ಸಹಾಯಕವಾಗುವ ಆಹಾರಗಳಿವು
ಹಾಲು: ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ, ಹಸುವಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಮೆಲಟೋನಿನ್ ಅಂಶವಿದ್ದು, ಯಾವುದೇ ತೊಂದರೆ ಇಲ್ಲದೆ ರಾತ್ರಿ ಆರಾಮದಾಯಕವಾಗಿ ನೀವು ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಕೂಡ ಮೆಲಟೋನಿನ್ ಅಂಶವು ಹೆಚ್ಚಾಗಿರಲಿದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ಹಾಗೂ ಮೆಗ್ನೀಶಿಯಂ ಅಂಶವು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

ನಟ್ಸ್: ಬಾದಾಮಿ, ಪಿಸ್ತ, ಗೋಡಂಬಿ ಸೇರಿದಂತೆ ಎಲ್ಲಾ ಬಗೆಯ ನಟ್ಸ್​ಗಳು ಮೆಲಟೋನಿನ್ ಹಾಗೂ ಮೆಗ್ನೀಶಿಯಂ ಅಂಶವನ್ನು ಒಳಗೊಂಡಿರುವ ಕಾರಣ ರಾತ್ರಿ ಇವುಗಳನ್ನು ಸೇವಿಸಬೇಕು.

ಮೊಟ್ಟೆಗಳು: ಮೊಟ್ಟೆಯಲ್ಲಿ ಪ್ರೋಟಿನ್, ಐರನ್ ಹಾಗೂ ಉತ್ತಮ ಕೊಬ್ಬು ಇದ್ದು, ಸುಖನಿದ್ರೆಗೆ ಸಹಾಯ ಮಾಡುತ್ತದೆ. ಅಲ್​ಝೈಮರ್, ಪಾರ್ಕಿನ್​ಸನ್, ದೃಷ್ಟಿದೋಷಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಇಡಲಿದೆ.

ಮೀನು ಸೇವನೆ: ಸಾಲ್ಮನ್, ಸಾರ್ಡಿನೆಸ್, ಟ್ರೌಟ್​ನಲ್ಲಿ ಒಮೆಗಾ ಫ್ಯಾಟಿ ಆಸಿಡ್​ಗಳಿರಲಿದ್ದು, ಮೆಲಾಟಿನ್​ ಅನ್ನು ಒಳಗೊಂಡಿರುತ್ತದೆ. ಉತ್ತಮ ನಿದ್ರೆ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು, ತೂಕ ಇಳಿಕೆಗೆ ಸಹಾಯ ಮಾಡುತ್ತದೆ.