ಮಧುಮೇಹ ಶುರುವಾದರೆ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಒಂದಷ್ಟು ಆಹಾರ, ಹಣ್ಣು, ತರಕಾರಿಗಳನ್ನು ಬಿಡಲೇಬೇಕು. ಹಾಗೇ, ಇನ್ನೊಂದಷ್ಟು ಹಣ್ಣು, ತರಕಾರಿಗಳನ್ನು ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಲೇಬೇಕು. ಅದರಲ್ಲೂ ಕೊರೊನಾ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮಧುಮೇಹಿಗಳು ಇನ್ನಷ್ಟು ಜಾಗರೂಕರಾಗಿ ಇರಬೇಕು.
ಡಯಾಬಿಟಿಸ್ ಇರುವವರು ದೈಹಿಕ ವ್ಯಾಯಾಮಗಳನ್ನು ಮಾಡಬೇಕು. ಆದರೆ ಇದೀಗ ಕೊರೊನಾ ಜಾಸ್ತಿ ಆಗಿದ್ದರಿಂದ ಹೊರಗೆಲ್ಲೂ ಹೋಗಲು ಭಯ. ಹಾಗಾಗಿ ಅನಿವಾರ್ಯವಾಗಿ ಆಹಾರದಲ್ಲೇ ಇನ್ನಷ್ಟು ಡಯಟ್ ಅಳವಡಿಸಿಕೊಳ್ಳುವುದು ಒಳಿತು. ದೇಹದಲ್ಲಿ ರಕ್ತದ ಅಂಶ ಸಮತೋಲನ ಮಾಡುವ ಧಾನ್ಯಗಳು, ಹಣ್ಣು, ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಬೇಕು. ಅದರಲ್ಲೂ ಮುಖ್ಯವಾಗಿ ಮೆಂತೆ (ಮೆಂತ್ಯ) ಮಧುಮೇಹ ರೋಗಕ್ಕೆ ಅತ್ಯುತ್ತಮವಾದ ಮದ್ದು.
ಮೆಂತ್ಯ ಸೋಡಿಯಂ, ಜಿಂಕ್, ಫಾಸ್ಪರಸ್, ಫೋಲಿಕ್ ಆ್ಯಸಿಡ್, ಐರನ್, ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಪೋಟ್ಯಾಷಿಯಂ, ವಿಟಮಿನ್ ಎ, ಬಿ ಮತ್ತು ಸಿಗಳು ಸೇರಿ ಹೇರಳವಾಗಿ ಖನಿಜಾಂಶಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಯಥೇಚ್ಛವಾಗಿ ಫೈಬರ್, ಪ್ರೋಟಿನ್, ಸಕ್ಕರೆ, ಪಿಷ್ಟದ ಅಂಶಗಳೂ ಮೆಂತ್ಯದಲ್ಲಿವೆ. ಈ ಎಲ್ಲ ಕಾರಣಗಳಿಂದಾಗಿ ಮೆಂತ್ಯ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ ಜತೆ, ತೂಕವನ್ನೂ ಕಡಿಮೆ ಮಾಡುತ್ತದೆ. ಮೆಂತ್ಯ ಬರೀ ಮಧುಮೇಹಕ್ಕಷ್ಟೇ ಅಲ್ಲದೆ, ಉಳಿದ ಕೆಲವು ಕಾಯಿಲೆಗಳ ವಿರುದ್ಧವೂ ಹೋರಾಡುತ್ತದೆ.
ಮೆಂತೆಯನ್ನು ಹೇಗೆ ಸೇವಿಸಬಹುದು?
ಮೆಂತ್ಯದ ಸೊಪ್ಪು ಕೂಡ ಡಯಾಬಿಟಿಸ್ಗೆ ಒಳ್ಳೆಯದ ಮದ್ದು. ಇದರ ಪಲ್ಯ, ಸಾಂಬಾರ್ಗಳನ್ನೂ ಮಾಡಬಹುದು. ಅದರ ಹೊರತಾಗಿ ಮೆಂತ್ಯದ ಕಾಳನ್ನೂ ಕೂಡ ಬಳಕೆ ಮಾಡಬಹುದಾಗಿದೆ. ನಿತ್ಯದ ಆಹಾರದಲ್ಲಿ ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಿ. ಅಲ್ಲದೆ, ಈ ಕಾಳುಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಗ್ಗೆ ತಿನ್ನಬಹುದು.
ಮೊಳಕೆ ಬರಿಸಿ ತಿನ್ನಬಹುದು
ಉಳಿದ ಕಾಳುಗಳಂತೆ ಮೆಂತ್ಯವನ್ನೂ ಸಹ ಮೊಳಕೆ ಬರಿಸಿ ಸೇವನೆ ಮಾಡಬಹುದು. ಇದರಿಂದ ಅನೇಕ ರೀತಿಯ ಉಪಯೋಗಗಳು ಇವೆ. ರಾತ್ರಿ ಮಲಗುವ ಮೊದಲು ಮೆಂತೆಯನ್ನು ನೀರಿನಲ್ಲಿ ನೆನೆ ಹಾಕಿ. ಮರುದಿನ ಬೆಳಗ್ಗೆ ನೀರನ್ನು ಚೆಲ್ಲಿ, ಒಂದು ಕಾಟನ್ ಬಟ್ಟೆಯಲ್ಲಿ ಕಟ್ಟಿಡಿ. ಹಾಗೆ ಮಾಡಿಟ್ಟ ಒಂದು ದಿನದಲ್ಲಿ ಮೆಂತೆ ಕಾಳುಗಳಿಗೆ ಮೊಳಕೆ ಬಂದಿರುತ್ತದೆ. ಹಾಗಂತ ಇದನ್ನು ಒಂದೇ ಬಾರಿ ಜಾಸ್ತಿ ಸೇವನೆ ಮಾಡಬಾರದು.
ಮೆಂತ್ಯದ ನೀರು
ಮೆಂತ್ಯವನ್ನು ನೆನೆಸಿದ ನೀರು ಕೂಡ ಆರೋಗ್ಯಕ್ಕೆ ತುಂಬ ಒಳ್ಳೆಯದು. ಒಂದು ಗ್ಲಾಸ್ ನೀರಿಗೆ, ಒಂದು ಸ್ಪೂನ್ ಮೆಂತೆಯನ್ನು ಹಾಕಿ ಒಂದು ರಾತ್ರಿ ನೆನೆಸಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.
ಮೆಂತ್ಯ ಸೊಪ್ಪಿನ ಬಳಕೆ
ಆಗಲೇ ಹೇಳಿದಂತೆ ಮೆಂತ್ಯದ ಸೊಪ್ಪಿನ ಸೇವನೆ ತುಂಬ ಒಳ್ಳೆಯದು. ಮೆಂತ್ಯ ಸೊಪ್ಪಿನಲ್ಲಿ 4-ಹೈಡ್ರಾಕ್ಸಿಸೋಲ್ಯೂಸಿನ್ ಅಂಶವಿದ್ದು, ಮಧುಮೇಹ ನಿಯಂತ್ರಣದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನೀವು ಈ ಸೊಪ್ಪನ್ನು, ವಿವಿಧ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿ ತಿನ್ನಬಹುದು. ಪರೋಟಾಗಳನ್ನು ಮಾಡಬಹುದು. ಹಾಗೇ, ಅನ್ನ, ಓಟ್ಸ್ ಜತೆಗೂ ಸೇವಿಸಬಹುದು.
ಇದನ್ನೂ ಓದಿ: Health Tips: ದುಡ್ಡು ಖರ್ಚು ಮಾಡದೇ, ಜಿಮ್ಗೆ ಹೋಗದೇ ಫಿಟ್ ಆಗಿ ಇರುವುದು ಹೇಗೆ?
ಲಸಿಕೆ ಪಡೆದಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಏಕೆ ಬಂತು ಕೊರೊನಾ: ರಾಜ್ಯ ಕಾಂಗ್ರೆಸ್ ಪ್ರಶ್ನೆ
ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ನಿಧನ! ಚಿತ್ರರಂಗದ ಸಂತಾಪ
(fenugreek benefits for diabetes Diet)