ಬೇಸಿಗೆ ಕಾಲದಲ್ಲಿ ಬಾಳೆಹಣ್ಣು ಕಪ್ಪು ಬಣ್ಣಕ್ಕೆ ತಿರುಗದೆ, ತಾಜಾವಾಗಿಡಲು ಈ ಸಲಹೆಗಳನ್ನು ಅನುಸರಿಸಿ

|

Updated on: May 31, 2023 | 4:24 PM

ಬಾಳೆಹಣ್ಣನ್ನು ಹೆಚ್ಚು ದಿನ ಸಂಗ್ರಹಿಸಿಡಲು ಆಗುವುದಿಲ್ಲ. ಹಣ್ಣುಗಳು ಬೇಗನೆ ಹಾಳಾಗುತ್ತವೆ. ಹೆಚ್ಚಿನ ತಾಪಮಾನದಿಂದಾಗಿ ಬಾಳೆಹಣ್ಣು ತ್ವರಿತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೊಳೆಯಲು ಪ್ರಾರಂಭಿಸುತ್ತದೆ. ಕೊನೆಗೆ ಅದನ್ನು ಬಿಸಾಡುವುದನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ.

ಬೇಸಿಗೆ ಕಾಲದಲ್ಲಿ ಬಾಳೆಹಣ್ಣು ಕಪ್ಪು ಬಣ್ಣಕ್ಕೆ ತಿರುಗದೆ, ತಾಜಾವಾಗಿಡಲು ಈ ಸಲಹೆಗಳನ್ನು ಅನುಸರಿಸಿ
ಬೇಸಿಗೆ ಕಾಲದಲ್ಲಿ ಬಾಳೆಹಣ್ಣನ್ನು ತಾಜಾವಾಗಿಡಲು ಈ ಸಲಹೆಗಳನ್ನು ಅನುಸರಿಸಿ
Follow us on

ಬಾಳೆಹಣ್ಣು ವರ್ಷವಿಡೀ ಲಭ್ಯವಿರುವ ಅಪರೂಪದ ಹಣ್ಣು! ಅದಕ್ಕಾಗಿಯೇ ಅನೇಕ ಜನರ ಮನೆಯಲ್ಲಿ ಯಾವುದೇ ಹಣ್ಣುಗಳಿಲ್ಲ ಅಂದರೂ ಬಾಳೆಹಣ್ಣು ಕಂಡುಬರುತ್ತದೆ. ಬಾಳೆಹಣ್ಣುಗಳು ಅಗ್ಗವಾಗಿದ್ದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಾತಾವರಣ ತಂಪಾಗಿರುವಾಗ ಮತ್ತು ಶೀತ ಮತ್ತು ಜ್ವರದಿಂದ ಬಳಲುತ್ತಿರುವಾಗ ಬಾಳೆಹಣ್ಣು ತಿನ್ನಬಾರದು ಎಂದು ವೈದ್ಯರು ಹೇಳುತ್ತಾರೆ. ಆದರೆ ಕೆಲವರು ಡಜನ್ ಗಟ್ಟಲೆ ಬಾಳೆಹಣ್ಣು ಖರೀದಿಸುತ್ತಾರೆ. ಅನೇಕರಿಗೆ ಪ್ರತಿದಿನ ಬಾಳೆಹಣ್ಣು ತಿನ್ನುವ ಅಭ್ಯಾಸವಿದೆ. ಆದರೆ ಈ ಬೇಸಿಗೆಯಲ್ಲಿ ಬಾಳೆಹಣ್ಣುಗಳು ಬೇಗನೆ ಬಣ್ಣ ಬದಲಾಯಿಸುತ್ತವೆ. ಅವು ಕಪ್ಪಾಗುತ್ತವೆ ಮತ್ತು ಒಂದೆರಡು ದಿನದಲ್ಲಿಯೇ ಹಾಳಾಗುತ್ತವೆ. ಬಾಳೆಹಣ್ಣುಗಳನ್ನು ತಾಜಾವಾಗಿಡಲು ಮತ್ತು ಬಣ್ಣ ಕಪ್ಪಾಗುವುದನ್ನು ತಡೆಯಲು ಈ ಸಲಹೆಗಳನ್ನು ಅನುಸರಿಸಿ.

ಈಗ ಬೇಸಿಗೆ ಕಾಲವಾಗಿರುವುದರಿಂದ ಬಾಳೆಹಣ್ಣನ್ನು ಹೆಚ್ಚು ದಿನ ಸಂಗ್ರಹಿಸಿಡಲು ಆಗುವುದಿಲ್ಲ. ಹಣ್ಣುಗಳು ಬೇಗನೆ ಹಾಳಾಗುತ್ತವೆ. ಹೆಚ್ಚಿನ ತಾಪಮಾನದಿಂದಾಗಿ ಬಾಳೆಹಣ್ಣು ತ್ವರಿತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೊಳೆಯಲು ಪ್ರಾರಂಭಿಸುತ್ತದೆ. ಕೊನೆಗೆ ಅದನ್ನು ಬಿಸಾಡುವುದನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ. ಇಷ್ಟು ಹಣ ಖರ್ಚು ಮಾಡಿದ ಬಾಳೆಹಣ್ಣನ್ನು ಬಿಸಾಡಲು ಯಾರೂ ಇಷ್ಟಪಡುವುದಿಲ್ಲ. ಅದಕ್ಕಾಗಿ ಬಾಳೆಹಣ್ಣನ್ನು ಬಿಸಾಡದೆ ತಾಜಾವಾಗಿ ಇಡುವುದು ಹೇಗೆ ಎಂದು ತಿಳಿಯಿರಿ.

ಬಾಳೆಹಣ್ಣನ್ನು ಪ್ರತ್ಯೇಕವಾಗಿ ಇರಿಸಿ: ಅನೇಕ ಜನರು ಇತರ ಹಣ್ಣುಗಳೊಂದಿಗೆ ಬಾಳೆಹಣ್ಣನ್ನು ಒಟ್ಟಿಗೆ ಇಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದನ್ನು ಮೊದಲು ಬದಲಾಯಿಸಬೇಕು. ಬಾಳೆಹಣ್ಣುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಇತರ ಹಣ್ಣುಗಳೊಂದಿಗೆ ಸಂಗ್ರಹಿಸಿಡಬಾರದು. ಬಾಳೆಹಣ್ಣುಗಳನ್ನು ನೇತು ಹಾಕಬೇಕು. ಅಂಗಡಿಗಳಲ್ಲಿ ಬಾಳೆಹಣ್ಣು ನೇತಾಡುವುದನ್ನು ನೀವು ನೋಡಿರಬಹುದು. ಬಾಳೆಹಣ್ಣುಗಳನ್ನು ಅವುಗಳ ಕಾಂಡಗಳೊಂದಿಗೆ ಪ್ರತ್ಯೇಕ ಸ್ಟ್ಯಾಂಡ್‌ಗಳಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಬಾಳೆಹಣ್ಣುಗಳು 4-5 ದಿನಗಳವರೆಗೆ ಕೆಡದೆ ತಾಜಾವಾಗಿರುತ್ತವೆ.

ವಿನೇಗರ್​​ ಹಾಕಿ ತೊಳೆಯಿರಿ: ಬಾಳೆಹಣ್ಣುಗಳು ಬೇಗನೆ ಹಾಳಾಗುವುದನ್ನು ತಡೆಯಲು ಅಡುಗೆ ವಿನೆಗರ್‌ನೊಂದಿಗೆ ತೊಳೆಯಬೆಕು ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ. ನೀವೂ ಈ ಟ್ರಿಕ್ ಅನ್ನು ಪ್ರಯತ್ನಿಸಲು ಬಯಸಿದರೆ ಬಾಳೆಹಣ್ಣನ್ನು ವಿನೆಗರ್ ಮತ್ತು ನೀರಿನಿಂದ ತೊಳೆಯಿರಿ.

ಪ್ಲಾಸ್ಟಿಕ್‌ನಲ್ಲಿ ಸುತ್ತಿ: ಬಾಳೆಹಣ್ಣು ಕೊಳೆಯುವುದನ್ನು ತಡೆಯಲು ಅವುಗಳನ್ನು ಪ್ರತ್ಯೇಕವಾಗಿ ಪ್ಲಾಸ್ಟಿಕ್ ಹೊದಿಕೆಯಲ್ಲಿ ಸುತ್ತುವುದು ಉತ್ತಮ ಮಾರ್ಗವಾಗಿದೆ. ಇದನ್ನು ಮಾಡುವಾಗ, ಬಾಳೆಹಣ್ಣಿನ ಕಾಂಡದ ತುದಿಯಲ್ಲಿ ಮಾತ್ರ ಪ್ಲಾಸ್ಟಿಕ್ ಅನ್ನು ಕಟ್ಟಲು ಮರೆಯದಿರಿ. ಹೀಗೆ ಮಾಡುವುದರಿಂದ ಬಾಳೆಹಣ್ಣನ್ನು 4-5 ದಿನಗಳವರೆಗೆ ತಾಜಾವಾಗಿಡಲು ಸಾಧ್ಯವಾಗುತ್ತದೆ.

ಬಾಳೆಹಣ್ಣು ಖರೀದಿಸುವಾಗ ಇದನ್ನು ನೆನಪಿಟ್ಟುಕೊಳ್ಳಿ: ಬೇಸಿಗೆಯಲ್ಲಿ ಬಾಳೆಹಣ್ಣುಗಳನ್ನು ಖರೀದಿಸುವಾಗ ಅವು ಹೆಚ್ಚು ಹಣ್ಣಾಗಿಲ್ಲ ಎಂಬುದನ್ನು ಪರಿಶೀಲಿಸಿ. ಏಕೆಂದರೆ ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣು ಒಂದೆ ದಿನದೊಳಗೆ, ಬೇಗನೆ ಹಾಳಾಗುತ್ತದೆ. ಅದೇ ರೀತಿ ಸ್ವಲ್ಪ ಮಾಗಿದ ಬಾಳೆಹಣ್ಣನ್ನು ಕೊಂಡರೆ ನಾಲ್ಕೈದು ದಿನ ಫ್ರೆಶ್ ಆಗಿಡಬಹುದು. ಯಾವಾಗಲೂ ಸ್ವಲ್ಪ ಗಟ್ಟಿಯಾಗಿರುವ ಬಾಳೆಹಣ್ಣುಗಳನ್ನು ಖರೀದಿಸಿ. ಇದು ಸಂಗ್ರಹಿಸಲು ಸುಲಭವಾಗಿದೆ.