Menstrual Health: ಹವಾಮಾನ ಬದಲಾವಣೆಯು ಮುಟ್ಟಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇಲ್ಲಿದೆ ಮಾಹಿತಿ

ವಿಶ್ವಸಂಸ್ಥೆಯ ವರದಿಯ ಪ್ರಕಾರ, ನೈಸರ್ಗಿಕ ವಿಪತ್ತುಗಳ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಮುಟ್ಟಿನ ಆರೋಗ್ಯದಲ್ಲಿ ಹೆಚ್ಚಿನ ಅಪಾಯಗಳನ್ನು ಅನುಭವಿಸುತ್ತಾರೆ. ಇದಕ್ಕನುಗುಣವಾಗಿ ಅಂಫಾನ್ ಚಂಡಮಾರುತವು ತಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ಭಾರತೀಯ ಮಹಿಳೆಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Menstrual Health: ಹವಾಮಾನ ಬದಲಾವಣೆಯು ಮುಟ್ಟಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇಲ್ಲಿದೆ ಮಾಹಿತಿ
climate change affect menstrual health
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: May 31, 2023 | 4:26 PM

ನೈಸರ್ಗಿಕ ವಿಪತ್ತುಗಳ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಮುಟ್ಟಿನ ಆರೋಗ್ಯದಲ್ಲಿ ಹೆಚ್ಚಿನ ಅಪಾಯಗಳನ್ನು ಅನುಭವಿಸುತ್ತಾರೆ. ಇದಕ್ಕನುಗುಣವಾಗಿ ಅಂಫಾನ್ ಚಂಡಮಾರುತವು ತಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ಭಾರತೀಯ ಮಹಿಳೆಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. 2020 ರಲ್ಲಿ ಸೂಪರ್ ಸೈಕ್ಲೋನ್ ಅಂಫಾನ್ ಭಾರತದ ಕರಾವಳಿಗೆ ಅಪ್ಪಳಿಸಿದಾಗ, 28 ವರ್ಷದ ಸುಚಿತಾ ಜನಾ ತನ್ನ ಕುಟುಂಬದೊಂದಿಗೆ ಸರ್ಕಾರಿ ಶಿಬಿರದಲ್ಲಿ ಆಶ್ರಯ ಪಡೆದ 800 ಕ್ಕೂ ಹೆಚ್ಚು ಜನರಲ್ಲಿ ಒಬ್ಬರಾಗಿದ್ದರು. ಅವರು ಇಕ್ಕಟ್ಟಾದ ಶಾಲೆಯ ಆಶ್ರಯ ತಾಣದಲ್ಲಿ ಕೇವಲ 20 ದಿನಗಳ ಕಾಲ ಉಳಿದರೂ, ಆಕೆಯ ಅಗ್ನಿಪರೀಕ್ಷೆ ಮಾತ್ರ ತಿಂಗಳುಗಳವರೆಗೆ ಮುಂದುವರಿಯಿತು. ಚಂಡಮಾರುತದ ನಂತರ ಜನಾ ಅವರಲ್ಲಿ ಯೋನಿ ಸೋಂಕು ಕಂಡು ಬಂತು ಎಂದು ವರದಿ ತಿಳಿಸಿದೆ.

“ಈ ಸೋಂಕು 6-7 ತಿಂಗಳುಗಳ ಕಾಲ ನನ್ನನ್ನು ಕಾಡಿತು. ನನಗೆ ತೀವ್ರವಾದ ಸಂವೇದನೆ ಮತ್ತು ವಾಸನೆ ಅನುಭಾವಕ್ಕೆ ಬರುತ್ತಿತ್ತು.” ಎಂದು ಪಶ್ಚಿಮ ಬಂಗಾಳ ರಾಜ್ಯದ ಕರಾವಳಿ ಭಾಗದಲ್ಲಿರುವ 24 ದಕ್ಷಿಣ ಪರಗಣ ಜಿಲ್ಲೆಯ ಪಥರ್ ಪ್ರತಿಮಾ ಬ್ಲಾಕ್ನ ಖೇತ್ರಮೋಹನ್ಪುರ ಗ್ರಾಮದ ನಿವಾಸಿ ಜನಾ ಹೇಳಿದ್ದಾರೆ. ಜನಾ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಆಶ್ರಯ ತಾಣದಲ್ಲಿ ಚಂಡಮಾರುತದಿಂದ ರಕ್ಷಣೆ ಕೋರಿದ ನೂರಾರು ಜನರಿಗೆ ಕೇವಲ ನಾಲ್ಕು ಶೌಚಾಲಯಗಳಿದ್ದು ಪುರುಷರು ಮತ್ತು ಮಹಿಳೆಯರು ಇಬ್ಬರೂ ಒಂದೇ ಶೌಚಾಲಯಗಳನ್ನು ಬಳಸುತ್ತಿದ್ದರು. “ತುಂಬಾ ಕೊಳಕುಯಾಗಿದ್ದ ಶೌಚಾಲಯವನ್ನು ಬಳಸಲು ನಾವು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗಿತ್ತು” ಎಂದು ಹೇಳುತ್ತಾರೆ, “ಜೊತೆಗೆ ಇಲ್ಲಿ ನೀರಿನ ಲಭ್ಯತೆಯು ದೊಡ್ಡ ಸಮಸ್ಯೆಯಾಗಿತ್ತು ಏಕೆಂದರೆ ಎಲ್ಲರಿಗೂ ಸೇರಿ ಕೇವಲ ಒಂದು ಕೊಳವೆ ಬಾವಿ ಇದ್ದಿದ್ದರಿಂದ ಅದು ನಮಗೆ ಸಾಲುತ್ತಿರಲಿಲ್ಲ. ನಾವು ಮೊದಲು ನೀರಿಗಾಗಿ ನಂತರ ಶೌಚಾಲಯಗಳನ್ನು ಬಳಸಲು ಸಾಲಿನಲ್ಲಿ ನಿಲ್ಲುತ್ತಿದ್ದೆವು. ಇದು ನಮ್ಮ ದಿನನಿತ್ಯದ ಗಂಟೆಗಳನ್ನು ಕಸಿದುಕೊಳ್ಳುತ್ತಿತ್ತು.” ಎಂದಿದ್ದಾರೆ.

ಚಂಡಮಾರುತದ ಸಮಯದಲ್ಲಿ, ಜನಾ ತನ್ನ ಋತುಚಕ್ರದ ದಿನ ಬಂದಾಗ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಮತ್ತು ಆಶ್ರಯ ಪಡೆದ ಜಾಗದಲ್ಲಿ ತೊಳೆಯಲು ಅಥವಾ ಒಣಗಿಸಲು ಸ್ಥಳವಿಲ್ಲದ ಕಾರಣ ಅವಳು ಹಲವಾರು ದಿನಗಳವರೆಗೆ ಬಟ್ಟೆಯ ತುಂಡುಗಳನ್ನು ಬಳಸುತ್ತಿದ್ದಳು ಎನ್ನಲಾಗಿದೆ. ಜೊತೆಗೆ ಬ್ಲಾಕ್ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಶಿಫಾರಸು ಮಾಡಿದ ಔಷಧಿಗಳು ಜನಾಗೆ ಸಹಾಯ ಮಾಡದಿದ್ದಾಗ, ಅವರು ರಾಜ್ಯದ ರಾಜಧಾನಿ ಕೋಲ್ಕತ್ತಾದ ವೈದ್ಯರನ್ನು ಸಂಪರ್ಕಿಸಿದ್ದರಂತೆ ಆದರೆ ಅವರು ಅದೆಷ್ಟೋ ನದಿಗಳನ್ನು ದಾಟಿ ಆರು ಗಂಟೆಗಳ ಪ್ರಯಾಣದ ನಂತರ ಆಗಮಿಸುತ್ತಿದ್ದರಂತೆ. ಜಾನಾ ಅವರಂತೆ, ಅಸ್ಸಾಂನ ನಗಾಂವ್ ಜಿಲ್ಲೆಯ ನಿವಾಸಿ 32 ವರ್ಷದ ಮಾಮು ದಾಸ್ ಕೂಡ ಕಳೆದ ವರ್ಷ ಅಸ್ಸಾಂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಿದಾಗ ಅಸಮರ್ಪಕ ನೈರ್ಮಲ್ಯ ಸೌಲಭ್ಯಗಳು ಮತ್ತು ಮುಟ್ಟಿನ ಉತ್ಪನ್ನಗಳ ಕಳಪೆ ಲಭ್ಯತೆಯ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ. ದಾಸ್ ಅವರ ಕುಟುಂಬವು ಪ್ರವಾಹದಿಂದಾಗಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಾಗ, ಅದು ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಖರೀದಿಸಾಲು ಸಹ ಸಾಧ್ಯವಾಗಿಲ್ಲ ಆದರೆ ಅವರು ಅಂಗಡಿಯವರಿಂದ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಸಾಲವಾಗಿ ತೆಗೆದುಕೊಳ್ಳುತ್ತಿದ್ದರಂತೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ವಿಶ್ವ ಮುಟ್ಟಿನ ನೈರ್ಮಲ್ಯ ದಿನ: ಪ್ರತೀ ಮಹಿಳೆ ತಿಳಿದುಕೊಳ್ಳಬೇಕಾದ ಸಂಗತಿಗಳು ಇಲ್ಲಿವೆ

ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಮುಟ್ಟಿನ ಆರೋಗ್ಯ:

ಪ್ರವಾಹ, ಚಂಡಮಾರುತಗಳಂತಹ ನೈಸರ್ಗಿಕ ವಿಪತ್ತುಗಳು, ದೊಡ್ಡ ಪ್ರಮಾಣದ ಸ್ಥಳಾಂತರಗಳಿಗೆ ಕಾರಣವಾಗುತ್ತವೆ. ಸ್ಥಳಾಂತರಗೊಂಡ ಆ ಸಮಯದಲ್ಲಿ ಋತುಚಕ್ರದ ಆರೋಗ್ಯವು ಮಹಿಳೆಯರನ್ನು ಭಾದಿಸುತ್ತದೆ. ಶೌಚಾಲಯಗಳು, ಸ್ಯಾನಿಟರಿ ನ್ಯಾಪ್ಕಿನ್ಗಳ ಲಭ್ಯತೆ, ಸೋಂಕಿನ ಅಪಾಯ ಇತ್ಯಾದಿ, ಆಶ್ರಯ ಶಿಬಿರಗಳಲ್ಲಿ ಮಹಿಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. “ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಆರೋಗ್ಯ ಶಿಬಿರಗಳಲ್ಲಿ, ದೀರ್ಘಕಾಲದ ಕಾಯಿಲೆ ಅಂಟಿಕೊಳ್ಳುತ್ತದೆ, ಆದ್ದರಿಂದ ಮಹಿಳೆಯರು ಸಾಮಾನ್ಯವಾಗಿ ಮುಟ್ಟಿನ ಆರೋಗ್ಯ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಾರೆ” ಎಂದು ಆರೋಗ್ಯ ಕಾರ್ಯಕರ್ತ ಶೋಭನ್ ಮುಖರ್ಜಿ ಹೇಳಿದ್ದಾರೆ.

“ವಿಪತ್ತಿನ ಒತ್ತಡದಿಂದಾಗಿ, ಮಹಿಳೆಯರ ಋತುಚಕ್ರವೂ ಇದ್ದಕ್ಕಿದ್ದಂತೆ ನಿಂತುಹೋಗುತ್ತದೆ. ಕೆಲವೊಮ್ಮೆ, ಅವರು ತಿಂಗಳುಗಳವರೆಗೆ ತಮ್ಮ ಋತು ಚಕ್ರವನ್ನು ತಪ್ಪಿಸಿಕೊಳ್ಳುತ್ತಾರೆ. ಜೊತೆಗೆ ಚಂಡಮಾರುತ, ಪ್ರವಾಹಗಳಂತಹ ವಿಪತ್ತುಗಳ ನಂತರ ಮೂತ್ರನಾಳದ ಸೋಂಕುಗಳು, ಯೋನಿ ಸೋಂಕುಗಳು ಇತ್ಯಾದಿಗಳ ಪ್ರಮಾಣವು ಸಾಮಾನ್ಯವಾಗಿ ಹೆಚ್ಚಾಗುತ್ತದೆ, ಏಕೆಂದರೆ ಮಹಿಳೆಯರಿಗೆ ಸರಿಯಾದ ಮುಟ್ಟಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ” ಎಂದು ಅವರು ಡಿಡಬ್ಲ್ಯೂಗೆ ತಿಳಿಸಿದ್ದಾರೆ.

ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹವಾಮಾನ ಬದಲಾವಣೆಯು ಋತುಸ್ರಾವದ ಸಮಯವನ್ನು ಅಥವಾ ಮೊದಲ ಮುಟ್ಟಿನ ಸಮಯವನ್ನು ಬದಲಾಯಿಸುವ ಮೂಲಕ ಮಹಿಳೆಯರಿಗೆ ಅಪಾಯಗಳನ್ನು ಹೆಚ್ಚಿಸಬಹುದು. ಕಳೆದ ವರ್ಷ ವಿಶ್ವಸಂಸ್ಥೆಯ ವರದಿಯು “ಹವಾಮಾನ ಬದಲಾವಣೆಯಿಂದಾಗಿ ವಿಪರೀತ ಹವಾಮಾನ ಘಟನೆಗಳು ಮಹಿಳೆಯರು ಮತ್ತು ಹುಡುಗಿಯರ ಮೇಲೆ ಹಾಗೂ ಅವರ ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದ ಮೇಲೆ ಅಸಮಾನ್ಯವಾಗಿ ಪರಿಣಾಮ ಬೀರುತ್ತವೆ” ಎಂದು ತೋರಿಸಿ ಕೊಟ್ಟಿದೆ.

ಹವಾಮಾನ ಬದಲಾವಣೆಗೆ ಕಾರಣ:

2020 ಮತ್ತು 2021 ರಲ್ಲಿ, ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ ಋತುಗಳಿಂದ ಪ್ರಭಾವಿತವಾದ ಪ್ರವಾಹ, ಚಂಡಮಾರುತಗಳು ವಿಪತ್ತು ಸ್ಥಳಾಂತರಕ್ಕೆ ಮುಖ್ಯ ಕಾರಣಗಳಾಗಿವೆ. ಭಾರತದ ಪೂರ್ವ ಕರಾವಳಿಯು ಉಷ್ಣವಲಯದ ಚಂಡಮಾರುತಗಳಿಗೆ ಹೆಚ್ಚು ಒಳಗಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವು ಹೆಚ್ಚು ತೀವ್ರವಾಗಿ ಬೆಳೆದಿವೆ. ಈ ಹೆಚ್ಚಿದ ತೀವ್ರತೆಯ ಹಿಂದಿನ ಕಾರಣ, ಹವಾಮಾನ ಬದಲಾವಣೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಜಿನೀವಾ ಮೂಲದ ಆಂತರಿಕ ಸ್ಥಳಾಂತರ ಮೇಲ್ವಿಚಾರಣಾ ಕೇಂದ್ರದ 2021 ರ ವರದಿಯ ಪ್ರಕಾರ, ಭಾರತದ ಪೂರ್ವ ಕರಾವಳಿಯನ್ನು ವರ್ಗ 5 ಚಂಡಮಾರುತವಾಗಿ ಅಪ್ಪಳಿಸಿದ ಅಂಫಾನ್, ಭಾರತದಲ್ಲಿ 2.4 ದಶಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿತು. ಅಂಫಾನ್ ಚಂಡಮಾರುತವು ಮೇ ತಿಂಗಳಲ್ಲಿ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್ ಮತ್ತು ಭೂತಾನ್ನಾದ್ಯಂತ ಸುಮಾರು ಐದು ಮಿಲಿಯನ್ ಸ್ಥಳಾಂತರಕ್ಕೆ ಕಾರಣವಾಯಿತು. ಇದು ಜಾಗತಿಕವಾಗಿ ವರ್ಷದ ಅತಿದೊಡ್ಡ ವಿಪತ್ತಿನಿಂದಾಗಿ ಸ್ಥಳಾಂತರ ಮಾಡಿದ ಘಟನೆಯಾಗಿದೆ.

“ಹೆಚ್ಚಿದ ತಾಪಮಾನದೊಂದಿಗೆ, ವಾತಾವರಣದ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ, ಅದಕ್ಕಾಗಿಯೇ ಚಂಡಮಾರುತಗಳು ತಮ್ಮ ಶಕ್ತಿಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಮಳೆಯ ಅನಿಯಮಿತ ವಾಗಿರುವುದನ್ನು ನಾವು ಈಗ ನೋಡುತ್ತಿದ್ದೇವೆ, ಇದು ಪ್ರವಾಹಕ್ಕೆ ಅತಿ ದೊಡ್ಡ ಕಾರಣವಾಗಿದೆ ಎಂದು ಹವಾಮಾನ ತಜ್ಞೆ ಮತ್ತು ಭುವನೇಶ್ವರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ಕೂಲ್ ಆಫ್ ಅರ್ಥ್, ಓಷಿಯನ್ ಅಂಡ್ ಕ್ಲೈಮೇಟ್ ಸೈನ್ಸಸ್ನ ನಿವೃತ್ತ ಪ್ರಾಧ್ಯಾಪಕ ಉಮಾ ಚರಣ್ ಮೊಹಾಂತಿ ಹೇಳಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್