ದೈನಂದಿನ ಜೀವನದಲ್ಲಿ ನಾವೆಲ್ಲರೂ ನಮ್ಮ ಕಚೇರಿ, ಸ್ನೇಹಿತರ ಬಳಗ, ಬಂಧುಬಳಗ, ಮದುವೆ ಕಾರ್ಯ ಮತ್ತು ಇತರ ವಿಷಯಗಳಲ್ಲಿ ತುಂಬಾ ನಿರತರಾಗಿದ್ದೇವೆ.. ನಾವು ನಮ್ಮ ಬಗ್ಗೆ ನಮ್ಮ ದೇಹದ ದೇಖರೇಖಿ ಬಗ್ಗೆ ನೋಡಿಕೊಳ್ಳುವುದನ್ನು ಮರೆತುಬಿಡುತ್ತೇವೆ. ಎಷ್ಟೋ ದಿನ ಆ ಕಡೆ ವರ್ಕ್ ಔಟ್ ಮಾಡುವುದೂ ಇಲ್ಲ; ಈ ಕಡೆ ಫಾಸ್ಟ್ ಫುಡ್ ಗಳಿಗೆ ಬಿದ್ದು, ದಿನವೂ ಜಂಕ್ ಫುಡ್ ತಿನ್ನುವುದು ಅಭ್ಯಾಸವಾಗಿಬಿಡುತ್ತದೆ. ಇವೆಲ್ಲವೂ ನಮ್ಮ ದೇಹದ ಮೇಲೆ ಖಚಿತವಾಗಿ ಪರಿಣಾಮ ಬೀರುತ್ತವೆ. ನಮ್ಮ ದೇಹದ ನರಗಳೂ ದುರ್ಬಲವಾಗುತ್ತವೆ. ರಕ್ತನಾಳಗಳು ದುರ್ಬಲವಾದಾಗ.. ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದಿಲ್ಲ. ಇದರಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.
ಆದರೆ ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳುವ ಮೂಲಕ ನಿಮ್ಮ ನರಗಳನ್ನು ನೈಸರ್ಗಿಕವಾಗಿ ಬಲಪಡಿಸಬಹುದು. ನಿಮ್ಮ ಆಹಾರದಲ್ಲಿ ನೀವು ಯಾವ ವಸ್ತುಗಳನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ತಿಳಿಯಿರಿ. ನರಗಳಿಗೆ ಯಾವುದೇ ಗಾಯಬವಾಗದಂತೆ, ಮಧುಮೇಹ ಭಾದಿಸದಂತೆ, ಆಹಾರ ಪದ್ಧತಿಯಲ್ಲಿ ವ್ಯತ್ಯಯವಾಗದಂತೆ, ಪೋಷಕಾಂಶಗಳ ಕೊರತೆ ಕಾಡದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ನರಗಳು ದುರ್ಬಲವಾಗುತ್ತವೆ. ಅದರೊಂದಿಗೆ ಯಾವುದೇ ಸಣ್ಣ ಭಾರ ಎತ್ತಿದರೂ ಕೈ ನಡುಗುವುದು, ಸ್ವಲ್ಪ ದೂರ ನಡೆದರೆ ಸಾಕು ಕಾಲು ನಡುಗುವುದು, ಕೆಲಸ ಮಾಡಲು ಆಗದಿರುವುದು, ಸೆಳೆತ, ತೀವ್ರ ಆಯಾಸ, ಸ್ನಾಯು ನೋವು ಹೀಗೆ ಹಲವು ಸಮಸ್ಯೆಗಳು ಕಾಡುತ್ತವೆ.
ಡ್ರೈ ಫ್ರೂಟ್ಸ್ ಬೀಜಗಳನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಖಚಿತವಾಗಿ ಇದು ನಿಮ್ಮ ನರಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಒಣ ಹಣ್ಣುಗಳು ಮೆಗ್ನೀಸಿಯಮ್ನ ಉತ್ತಮ ಮೂಲವಾಗಿದೆ, ಇದು ನಿಮ್ಮ ದೇಹದ ನರಗಳಿಗೆ ಬಹಳ ಮುಖ್ಯವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಬಾದಾಮಿ, ಗೋಡಂಬಿ, ವಾಲ್ ನಟ್ ಇತ್ಯಾದಿಗಳನ್ನು ಸೇರಿಸಿಕೊಳ್ಳಬೇಕು.
ಮೀನು ತಿನ್ನಬಹುದು
ಒಮೆಗಾ 3 ಕೊಬ್ಬಿನಾಂಶಗಳು ನರಗಳಿಗೆ ಬಹಳ ಮುಖ್ಯ. ಇದರಿಂದ ನರಗಳು ಬಲಗೊಳ್ಳುತ್ತವೆ. ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಂಶಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ಮೀನುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು, ನರಗಳನ್ನು ಬಲಪಡಿಸಲು ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಹಸಿರು ತರಕಾರಿಗಳು
ಹಸಿರು ತರಕಾರಿಗಳು (ಗ್ರೀನ್ಸ್) ಅನೇಕ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಬಿ, ಸಿ, ಇ, ಮೆಗ್ನೀಸಿಯಂ, ತಾಮ್ರ, ಫೋಲೇಟ್, ಕ್ಯಾಲ್ಸಿಯಂ ಹಸಿರು ತರಕಾರಿಗಳಲ್ಲಿ ಕಂಡುಬರುತ್ತವೆ, ಇದು ನಿಮ್ಮ ನರಗಳ ದೌರ್ಬಲ್ಯವನ್ನು ತಡೆಗಟ್ಟುತ್ತದೆ. ಅದಕ್ಕೇ ಅವುಗಳನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಬೇಕು.