Friendship Value: ಕೇವಲ ಪ್ರೀತಿ ಮಾತ್ರವಲ್ಲ ಸ್ನೇಹವೆಂಬುದು ಕೂಡ ಒಂದು ಮಾಯೆಯೇ, ಮಾನಸಿಕ ಆರೋಗ್ಯವನ್ನು ಸುಧಾರಿಸುವ ಬೂಸ್ಟರ್

|

Updated on: Feb 14, 2023 | 4:11 PM

ಪ್ರತಿಯೊಬ್ಬ ಸ್ನೇಹಿತನೂ ನಿಮ್ಮ ಜೀವನದಲ್ಲಿ ಪ್ರಮುಖಪಾತ್ರವಹಿಸುತ್ತಾರೆ, ನಿಮ್ಮ ಖುಷಿ ಇರಲಿ, ನಿಮ್ಮ ನೋವಿರಲಿ, ನಿಮ್ಮ ಗೆಲುವಿರಲಿ, ನಿಮ್ಮ ಸೋಲಿರಲಿ ಎಲ್ಲವನ್ನೂ ನಿಮ್ಮಂತೆಯೇ ಸಮಾನವಾಗಿ ಸ್ವೀಕರಿಸಿ, ಎಲ್ಲಾ ಏಳು-ಬೀಳಿನಲ್ಲಿ ಕುಟುಂಬಕ್ಕಿಂತ ಮೊದಲು ಸ್ನೇಹಿತ ನಿಲ್ಲುತ್ತಾನೆ.

Friendship Value: ಕೇವಲ ಪ್ರೀತಿ ಮಾತ್ರವಲ್ಲ ಸ್ನೇಹವೆಂಬುದು ಕೂಡ ಒಂದು ಮಾಯೆಯೇ, ಮಾನಸಿಕ ಆರೋಗ್ಯವನ್ನು ಸುಧಾರಿಸುವ ಬೂಸ್ಟರ್
ಸ್ನೇಹ
Image Credit source: Inc. Magazine
Follow us on

ಪ್ರತಿಯೊಬ್ಬ ಸ್ನೇಹಿತನೂ ನಿಮ್ಮ ಜೀವನದಲ್ಲಿ ಪ್ರಮುಖಪಾತ್ರವಹಿಸುತ್ತಾರೆ, ನಿಮ್ಮ ಖುಷಿ ಇರಲಿ, ನಿಮ್ಮ ನೋವಿರಲಿ, ನಿಮ್ಮ ಗೆಲುವಿರಲಿ, ನಿಮ್ಮ ಸೋಲಿರಲಿ ಎಲ್ಲವನ್ನೂ ನಿಮ್ಮಂತೆಯೇ ಸಮಾನವಾಗಿ ಸ್ವೀಕರಿಸಿ, ಎಲ್ಲಾ ಏಳು-ಬೀಳಿನಲ್ಲಿ ಕುಟುಂಬಕ್ಕಿಂತ ಮೊದಲು ಸ್ನೇಹಿತ ನಿಲ್ಲುತ್ತಾನೆ.
ಸ್ನೇಹವೆಂಬುದು ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಸಹಾಯ ಮಾಡುತ್ತದೆ. ಮಾಧ್ಯಮ ವರದಿಗಳ ಪ್ರಕಾರ, 5 ವಿವಿಧ ವಿಶ್ವವಿದ್ಯಾಲಯಗಳು ಈ ಅಧ್ಯಯನಕ್ಕಾಗಿ 900 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ. ಈ ಸಮಯದಲ್ಲಿ ಕೋವಿಡ್ ನಡೆಯುತ್ತಿತ್ತು. ಲಾಕ್‌ಡೌನ್‌ಗೆ ಮುನ್ನ, ಲಾಕ್‌ಡೌನ್ ಸಮಯದಲ್ಲಿ ಮತ್ತು ಲಾಕ್‌ಡೌನ್ ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಲಾಗಿದೆ. ಅಧ್ಯಯನ ಮಾಡುವಾಗ, ಸಂಶೋಧಕರು ಕೆಲವು ಅಂಶಗಳನ್ನು ಸಹ ಮಾಡಿದರು. ಆ ಅಂಶಗಳ ಸಹಾಯದಿಂದ, ಇವರಲ್ಲಿ ರಾತ್ರಿಯಲ್ಲಿ ಆತಂಕ, ಸಂಪರ್ಕ, ಖಿನ್ನತೆ, ನಡವಳಿಕೆ ಬದಲಾವಣೆ ಇವೆಲ್ಲಾ ಸಮಸ್ಯೆಗಳಿದ್ದವು.

ಯಾರೊಂದಿಗೂ ಮಾತನಾಡದೇ ಇರುವುದು, ಒಂಟಿಯಾಗಿರುವುದು, ಮೌನವಾಗಿರುವುದು, ಬೇರೆಯವರ ಅಭಿಪ್ರಾಯವನ್ನು ಕೇಳದೇ ಇರುವುದು, ತಮಾಷೆ ಮಾಡಿದರೆ ಗಂಭೀರವಾಗಿ ತೆಗೆದುಕೊಳ್ಳುವುದು ಇವೆಲ್ಲಾ ಸಮ್ಯೆಗಳು ಕೂಡ ಇದ್ದವು. ಸ್ನೇಹಿತರ ಜತೆ ಕಾಲ ಕಳೆಯುವ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಉಳಿದೆಲ್ಲಾ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿತ್ತು.

ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ. ಅದೇ ರೀತಿ ಸ್ನೇಹವೂ ಒಂದು ರೀತಿಯಲ್ಲಿ ಮಾಯೆಯಂದೇ ಹೇಳಬಹುದು, ಮೊದಲ ನೋಟದಲ್ಲಿ ಪ್ರೀತಿ ಹುಟ್ಟಬಹುದು. ಆದರೆ ಮೊದಲ ನೋಟದಲ್ಲೇ ಸ್ನೇಹ ಹುಟ್ಟುವುದಿಲ್ಲ. ಎರಡು ಸಮಾನ ಜೀವಗಳು ಪರಸ್ಪರ ಕಷ್ಟ ಸುಖಗಳಿಗೆ ಸ್ಪಂಧಿಸಿದಾಗ ಮಾತ್ರ ಸ್ನೇಹ ಹುಟ್ಟುವುದು.

ಮತ್ತಷ್ಟು ಓದಿ:National Hugging Day 2023: ಅಪ್ಪುಗೆಯಿಂದಾಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಒಂದು ಬಾರಿ ಹುಟ್ಟಿದ ಸ್ನೇಹವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಅದಕ್ಕಾಗಿ ಪರಸ್ಪರ ತ್ಯಾಗ ಬಲಿದಾನಕ್ಕೂ ಸಿದ್ಧರಾಗಿರಬೇಕು. ಪ್ರೀತಿ ಶಾಶ್ವತವಾಗದಿದ್ದರೂ ಸ್ನೇಹ ನಿರಂತರ. ಸ್ನೇಹ ಸಾಗರವೆಂಬುದು ಅತ್ಯಂತ ಆಳವಾದದ್ದು. ಮೊಗೆದಷ್ಟೂ ನಮಗೆ ಅಲ್ಲಿಂದ ಆನಂದ, ತೃಪ್ತಿ, ನೆಮ್ಮದಿ, ಸಂತೋಷ ಎಂಬ ಅನೇಕ ಮುತ್ತು ರತ್ನಗಳು ದೊರಕುವುದರಲ್ಲಿ ಸಂದೇಹವಿಲ್ಲ.

ಆದರೆ ಬೇಕು ಎಂದಾಗಲೆಲ್ಲ ನಮಗೆ ಸುಲಭವಾಗಿ ದಕ್ಕುವ ಪದಾರ್ಥವಲ್ಲ. ಇದು ಅನೇಕ ವರುಷಗಳ ಫಲ. ಸ್ನೇಹದ ವಿಷಯದಲ್ಲಿ ಒಬ್ಬೊಬ್ಬರದ್ದು ಒಂದೊದು ರೀತಿಯ ಅನುಭವವಿರುವುದು.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ