ಈ ಬೇಸಿಗೆಯ ಬಿಸಿ ತಾಪಮಾನವು ಅನೇಕ ರೀತಿಯ ಕಾಯಿಲೆಗಳನ್ನು ಉಂಟುಮಾಡುತ್ತದೆ. ಶಾಖಕ್ಕೆ ದೇಹವು ನಿರ್ಜಲೀಕರಣವಾಗುತ್ತದೆ ಮತ್ತು ಹೊಟ್ಟೆ ಸಂಬಂಧಿ ಕಾಯಿಲೆಗಳು ಹೀಗೆ ಅನೇಕ ಕಾಯಿಲೆಗಳು ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಹಣ್ಣು, ತರಕಾರಿಗಳು ಹಾಗೂ ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು. ಮುಖ್ಯವಾಗಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
ಬೇಸಿಗೆಯ ತಾಪಮಾನದ ಕಾರಣದಿಂದ ಬೆಂಗಳೂರು ನಗರದಲ್ಲಿ ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಜಠರ ಕರುಳಿನ ಕಾಯಿಲೆಯಾಗಿದ್ದು, ವಿಷಪೂರಿತ ಅಥವಾ ಕಲುಷಿತ ಆಹಾರ ಸೇವನೆ ಮತ್ತು ಬೇಸಿಗೆಯ ಹವಾಮಾನವು ಇದಕ್ಕೆ ಪ್ರಮುಖ ಕಾರಣವಾಗಿದೆ. ಹಾಗೂ ಮಕ್ಕಳ ತಜ್ಞ ಡಾ. ಶಿವಪ್ರಕಾಶ ಸೋಸಲೆ ಅವರು ತಮ್ಮ ಚಿಕಿತ್ಸಾಲಯದಲ್ಲಿ ಶೇಕಡಾ 40 ರಿಂದ 50 ರಷ್ಟು ಈ ಪ್ರರಣಗಳು ಕಂಡುಬಂದಿದೆ ಎಂದು ಹೇಳಿದ್ದಾರೆ.
ಅವರ ಚಿಕಿತ್ಸಾಲಯದಲ್ಲಿ ಶೇಕಡಾ 40 ರಿಂದ 50 ರಷ್ಟು ಒಪಿಡಿ ರೋಗಿಗಳು ಗ್ಯಾಸ್ಟ್ರೋಎಂಟರೈಟಿಸ್ಗೆ ಹೋಲುವ ಕಾಯಿಲೆಯ ದೂರುಗಳೊಂದಿಗೆ ಬರುತ್ತಾರೆ. 25 ಪ್ರಕರಣಗಳಲ್ಲಿ 10 ರಿಂದ 12 ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳು ಇರುತ್ತವೆ. ಈ ಕಾಯಿಲೆಯಿಂದ ಮಕ್ಕಳಿಗೆ ಅತಿಸಾರ, ಹೊಟ್ಟೆಸೆಳೆತ ಮತ್ತು ವಾಂತಿ ಬರುತ್ತದೆ. ಈ ಪ್ರಕರಣದ ಹೆಚ್ಚಳವು 10 ದಿನಗಳ ಹಿಂದೆ ಪ್ರಾರಂಭವಾಯಿತು. ಎಂದು ಮಕ್ಕಳ ತಜ್ಞ ಡಾ. ಶಿವಪ್ರಕಾಶ ಸೋಸಲೆ ಹೇಳುತ್ತಾರೆ.
ಬಿಸಿ ಶಾಖದ ವಾತಾವರಣದಲ್ಲಿ ಈ ಪ್ರಕರಣದ ಏರಿಕೆಯನ್ನು ನಿರೀಕ್ಷಿಸಲಾಗಿತ್ತು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಈ ಶಾಖದ ವಾತಾವರಣದಲ್ಲಿ ಬ್ಯಾಕ್ಟೀರಿಯಗಳು ತ್ವರಿತವಾಗಿ ಹೆಚ್ಚಳವಾಗುತ್ತಿವೆ. ಅಲ್ಲದೆ ಹೆಚ್ಚಿನ ಜನರು ಬೇಸಿಗೆಯಲ್ಲಿ ಪ್ರಯಾಣ ಮಾಡುತ್ತಾರೆ ಹಾಗೂ ಹೊರಗಡೆ ಊಟ ಮಾಡುತ್ತಾರೆ. ಹೆಚ್ಚಿನ ಪ್ರಕರಣಗಳು ವಿಷಪೂರಿತ ಆಹಾರದ ಸೇವನೆಯ ಕಾರಣದಿಂದಾಗಿವೆ. ನೀವು ಸೋಮವಾರದ ದಿನದಂದು ಈ ಪ್ರಕರಣಗಳನ್ನು ಹೆಚ್ಚಾಗಿ ಕಾಣುತ್ತೇವೆ ಏಕೆಂದರೆ ಜನರು ವಾರಾಂತ್ಯದಲ್ಲಿ ಹೆಚ್ಚಾಗಿ ಹೊರಗಡೆ ತಿನ್ನುತ್ತಾರೆ ಎಂದು ಮಕ್ಕಳ ವೈದ್ಯ ರಜತ್ ಆತ್ರೇಯ ಹೇಳುತ್ತಾರೆ.
ಫೆಬ್ರವರಿ ತಿಂಗಳಲ್ಲಿ ಗ್ಯಾಸ್ಟ್ರೋಎಂಟರೈಟಿಸ್ನ ಕೆಲವೇ ಪ್ರಕರಣಗಳು ಕಂಡುಬAದಿದ್ದವು. ಆದರೆ ಈಗ ಅದು ಶೇಕಡಾ 25 ರಷ್ಟು ಹೆಚ್ಚಾಗಿದೆ ಎಂದು ಡಾ. ಆತ್ರೇಯ ಹೇಳುತ್ತಾರೆ. ಹಾಗೂ ಮಾರ್ಚ್ನಲ್ಲಿ ನಾಲ್ಕೈದು ಟೈಫಾಯಿಡ್ ಪ್ರಕರಣಗಳು ಕಂಡುಬಂದಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಕ್ಕಳು ಎದುರಿಸುವ ಕಾಯಿಲೆಗಳು ಮತ್ತು ಅವುಗಳನ್ನು ನಿರ್ವಹಿಸಲು ಸಲಹೆಗಳು ಇಲ್ಲಿವೆ
ಜನರು ಐಸ್‌ಕ್ರೀಮ್ ಹಾಗೂ ಪೇಸ್ಟ್ರಿ ಸೇವನೆಯನ್ನು ತಪ್ಪಿಸಬೇಕು ಏಕೆಂದರೆ ಅವರು ಕಲುಷಿತ ಕೈಗಳಿಂದ ಅವುಗಳನ್ನು ಸ್ಪರ್ಶಿಸಬಹುದು. ಇದು ಆಹಾರದಲ್ಲಿ ಬ್ಯಾಕ್ಟೀರಿಯಾವನ್ನು ಉಂಟುಮಾಡಬಹುದು. ಯಾವುದೇ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಡುವ ಬದಲು ತ್ವರಿತವಾಗಿ ತಿನ್ನಬೇಕು, ಜೊತೆಗೆ ಹೊರಗಿನ ಕಲುಷಿತ ಆಹಾರಗಳನ್ನು ಸೇವಿಸಬಾರದು ಎಂದು ಡಾ. ಆತ್ರೇಯ ಹೇಳುತ್ತಾರೆ.
ಗ್ಯಾಸ್ಟರೋಎಂಟರೈಟಿಸ್‌ನ ಹೆಚ್ಚಿನ ಪ್ರಕರಣಗಳು ಯಾವಾಗಿಯೇ ಶಮನವಾದರೂ, ಜ್ವರ ಮತ್ತು ಮಲದಲ್ಲಿ ರಕ್ತ ಬರುವ ಪ್ರಕರಣಗಳಿದ್ದರೆ, ಅಂತಹ ರೋಗಿಗಳಿಗೆ ಪ್ರತಿಜೀವಕಗಳ ಅಗತ್ಯವಿರುತ್ತದೆ ಎಂದು ಡಾ. ಆತ್ರೇಯ ಹೇಳುತ್ತಾರೆ. ಬಿಎಮ್‌ಸಿಆರ್‌ಐ ನ ಪ್ರೊಫೆಸರ್ ಡಾ. ಅಶೋಕ್ ಎಂ.ಎಲ್ ಅವರು ಇತ್ತೀಚಿಗೆ ಪ್ರತಿದಿನ ಗ್ಯಾಸ್ಟ್ರೋಎಂಟರೈಟಿಸ್ ಹೊಂದಿರುವ ಒಬ್ಬ ವಯಸ್ಕ ರೋಗಿಯನ್ನು ನೋಡುತ್ತಾರೆ ಹಾಗೂ ವಾರಕ್ಕೆ ಒಂದು ಟೈಫಾಯಿಡ್ ಪ್ರರಕಣವನ್ನು ನೋಡುತ್ತಾರಂತೆ. ಜನರು ಬಿಸಿ ಮಾಡಿದ ನೀರನ್ನು ಮಾತ್ರ ಕುಡಿಯಬೇಕು ಮತ್ತು ಹೊರಗಿನ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ವಿಶೇಷವಾಗಿ ಬೀದಿ ಬದಿಗಳಲ್ಲಿ ಕತ್ತರಿಸಿಟ್ಟ ಹಣ್ಣುಗಳನ್ನು ಎಂದು ಅವರು ಹೇಳುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:35 pm, Sun, 2 April 23