ಚಳಿಗಾಲದಲ್ಲಿ ಮಲಬದ್ಧತೆ ಮತ್ತು ಪೈಲ್ಸ್‌ನಿಂದ ಮುಕ್ತಿ ಪಡೆಯಲು ಈ ಹಣ್ಣು ಸೇವಿಸಿ

ಚಳಿಗಾಲದಲ್ಲಿ ಹೆಚ್ಚಿನ ಬಿಸಿ ಆಹಾರ ಮತ್ತು ಕಡಿಮೆ ನೀರಿನ ಸೇವನೆಯಿಂದ ಮಲಬದ್ಧತೆ, ಅಜೀರ್ಣ ಸಮಸ್ಯೆಗಳು ಹೆಚ್ಚಾಗುತ್ತವೆ. ಪೇರಲೆ ಹಣ್ಣು ಈ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ. ಇದು ನಾರಿನಂಶದಿಂದ ಸಮೃದ್ಧವಾಗಿದ್ದು, ಮಲಬದ್ಧತೆ ಮತ್ತು ಪೈಲ್ಸ್‌ ನಿವಾರಣೆಗೆ ಸಹಾಯ ಮಾಡುತ್ತದೆ. ಪೇರಲೆಯಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದ್ದು, ಹೃದಯದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಚಳಿಗಾಲದಲ್ಲಿ ಮಲಬದ್ಧತೆ ಮತ್ತು ಪೈಲ್ಸ್‌ನಿಂದ ಮುಕ್ತಿ ಪಡೆಯಲು ಈ ಹಣ್ಣು ಸೇವಿಸಿ
Constipation

Updated on: Dec 05, 2024 | 4:53 PM

ಚಳಿಗಾಲದಲ್ಲಿ ಹೆಚ್ಚು ಬಿಸಿಯಾದ ಆಹಾರ ಸೇವನೆ ಮತ್ತು ಕಡಿಮೆ ನೀರು ಕುಡಿಯುವುದರಿಂದ ಸಾಕಷ್ಟು ಜನರಲ್ಲಿ ಮಲಬದ್ಧತೆ, ಗ್ಯಾಸ್, ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ನಿಮಗೂ ಇದೇ ರೀತಿಯ ಸಮಸ್ಯೆ ಇದ್ದರೆ, ನೀವು ಮಲಬದ್ಧತೆ ಅಥವಾ ಪೈಲ್ಸ್ ರೋಗಿಗಳಾಗಿದ್ದರೆ, ಖಂಡಿತವಾಗಿಯೂ ಈ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ದಿನಕ್ಕೊಮ್ಮೆ ಇದನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.

ದೀರ್ಘಕಾಲದ ಮಲಬದ್ಧತೆಯಿಂದ ಮುಕ್ತಿ:

ದೀರ್ಘಕಾಲದ ಮಲಬದ್ಧತೆಯನ್ನೂ ನಿವಾರಿಸುವ ಶಕ್ತಿ ಪೇರಲೆ ಹಣ್ಣಿಗಿದೆ. ಪೇರಲೆ ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಉತ್ತಮ ಹಣ್ಣು ಎಂದು ಪರಿಗಣಿಸಲಾಗುತ್ತದೆ. ನೀವು ಪ್ರತಿದಿನ 1 ಪೇರಲೆ ಹಣ್ಣು ತಿನ್ನುವುದರಿಂದ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಪೇರಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಸೇವಿಸಿ:

ನಾರಿನಂಶದಿಂದ ಸಮೃದ್ಧವಾಗಿರುವ ಪೇರಲೆ, ಪೈಲ್ಸ್‌ಗೆ ಅತ್ಯಂತ ಪರಿಣಾಮಕಾರಿ ಹಣ್ಣು ಎಂದು ಪರಿಗಣಿಸಲಾಗಿದೆ. ಮಾಗಿದ ಪೇರಲೆ ಹಣ್ಣಿಗೆ ಸ್ವಲ್ಪ ಉಪ್ಪನ್ನು ಹಚ್ಚಿ ಕೂಡ ತಿನ್ನಬಹುದು. ಇದು ರುಚಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲೂ ರಾತ್ರಿ ಬೆವರುವುದು ಮಾರಣಾಂತಿಕ ಕಾಯಿಲೆಗಳ ಸಂಕೇತ

ಪೇರಲೆ ಚಳಿಗಾಲದಲ್ಲಿ ಅತ್ಯಂತ ಪ್ರಯೋಜನಕಾರಿ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಕೊರತೆಯಿದ್ದಲ್ಲಿ ಪೇರಲೆ ಸೇವಿಸಬೇಕು. ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ಇದ್ದು, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದಲ್ಲದೇ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಹಣ್ಣು ಎಂದು ಪರಿಗಣಿಸಲಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ