AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲೂ ರಾತ್ರಿ ಬೆವರುವುದು ಮಾರಣಾಂತಿಕ ಕಾಯಿಲೆಗಳ ಸಂಕೇತ

ಚಳಿಯ ನಡುವೆಯೂ ಕೆಲವರು ರಾತ್ರಿ ಸಮಯದಲ್ಲಿ ಬೆವರಿನಿಂದ ಒದ್ದೆಯಾಗಿ ಎಚ್ಚರಗೊಳ್ಳುತ್ತಾರೆ ಎಂದರೆ ನಂಬುತ್ತೀರಾ? ಹೌದು ಕೆಲವರಿಗೆ ಎಷ್ಟೇ ಚಳಿ ಇರಲಿ ರಾತ್ರಿ ಸಮಯದಲ್ಲಿ ಬೆವರುತ್ತಾರೆ. ಅದಲ್ಲದೆ ಈ ರೀತಿ ಲಕ್ಷಣ ಪದೇ ಪದೇ ಕಂಡುಬರುತ್ತಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ. ಶೀತ ವಾತಾವರಣ ಇದ್ದಾಗಲೂ ಕೂಡ ರಾತ್ರಿ ಸಮಯದಲ್ಲಿ ಬೆವರುವುದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾಗಿ ಈ ರೀತಿಯ ಸಮಸ್ಯೆಗಳು ಕಂಡುಬರುತ್ತಿದ್ದರೆ ತಕ್ಷಣ ತಜ್ಞರನ್ನು ಸಂಪರ್ಕಿಸಿ. ಅದಕ್ಕೂ ಮೊದಲು ಈ ರೀತಿಯ ಲಕ್ಷಣಗಳು ಯಾಕಾಗಿ ಕಂಡು ಬರುತ್ತದೆ? ಇದರ ಸಂಕೇತವೇನು? ಎಂಬುದನ್ನು ತಿಳಿದುಕೊಳ್ಳಿ.

ಚಳಿಗಾಲದಲ್ಲೂ ರಾತ್ರಿ ಬೆವರುವುದು ಮಾರಣಾಂತಿಕ ಕಾಯಿಲೆಗಳ ಸಂಕೇತ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Dec 05, 2024 | 12:20 PM

Share

ಚಳಿಗಾಲ ಆರಂಭವಾಗಿದ್ದು, ಶೀತದ ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಕೆಲವೆಡೆ ರಾತ್ರಿ ಸಮಯದಲ್ಲಿ ಮಾತ್ರವಲ್ಲ ಬೆಳಗ್ಗಿನ ಸಮಯದಲ್ಲಿಯೂ ಕೊರೆಯುವ ಚಳಿಯಿಂದ ಜನರು ರಗ್ಗುಗಳನ್ನು ಹೊದ್ದು ಬೆಚ್ಚಗೆ ಮಲಗುವಂತಾಗಿದೆ. ಆದರೆ ಇಷ್ಟೆಲ್ಲಾ ಚಳಿಯ ನಡುವೆಯೂ ಕೆಲವರು ರಾತ್ರಿ ಸಮಯದಲ್ಲಿ ಬೆವರಿನಿಂದ ಒದ್ದೆಯಾಗಿ ಎಚ್ಚರಗೊಳ್ಳುತ್ತಾರೆ ಎಂದರೆ ನಂಬುತ್ತೀರಾ? ಹೌದು ಕೆಲವರಿಗೆ ಎಷ್ಟೇ ಚಳಿ ಇರಲಿ ರಾತ್ರಿ ಸಮಯದಲ್ಲಿ ಬೆವರುತ್ತಾರೆ. ಅದಲ್ಲದೆ ಈ ರೀತಿ ಲಕ್ಷಣ ಪದೇ ಪದೇ ಕಂಡುಬರುತ್ತಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ. ಶೀತ ವಾತಾವರಣ ಇದ್ದಾಗಲೂ ಕೂಡ ರಾತ್ರಿ ಸಮಯದಲ್ಲಿ ಬೆವರುವುದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾಗಿ ಈ ರೀತಿಯ ಸಮಸ್ಯೆಗಳು ಕಂಡುಬರುತ್ತಿದ್ದರೆ ತಕ್ಷಣ ತಜ್ಞರನ್ನು ಸಂಪರ್ಕಿಸಿ. ಅದಕ್ಕೂ ಮೊದಲು ಈ ರೀತಿಯ ಲಕ್ಷಣಗಳು ಯಾಕಾಗಿ ಕಂಡು ಬರುತ್ತದೆ? ಇದರ ಸಂಕೇತವೇನು? ಎಂಬುದನ್ನು ತಿಳಿದುಕೊಳ್ಳಿ.

ಚಳಿಗಾಲದ ರಾತ್ರಿಯಲ್ಲಿಯೂ ಬೆವರುವುದರ ಹಿಂದೆ ಹಲವಾರು ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಾರ್ಮೋನುಗಳ ಅಸಮತೋಲನ, ಸೋಂಕು, ಅಥವಾ ತುಂಬಾ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಈ ಸಮಸ್ಯೆಗೆ ಸಾಮಾನ್ಯ ಕಾರಣಗಳಾಗಿವೆ. ಆದರೆ ಈ ಸಮಸ್ಯೆ ನಿರಂತರವಾಗಿ ಮುಂದುವರಿದರೆ, ಇವು ಕೆಲವು ಗಂಭೀರ ಕಾಯಿಲೆಗಳ ಲಕ್ಷಣವಾಗಿರಬಹುದು. ಹಾಗಾದರೆ ಅವು ಯಾವವು ಎಂಬುದನ್ನು ತಿಳಿದುಕೊಳ್ಳಿ.

ಟಿಬಿ (ಕ್ಷಯ): ರಾತ್ರಿ ಸಮಯದಲ್ಲಿ ಬೆವರುವುದು ಟಿಬಿಯ ಆರಂಭಿಕ ಲಕ್ಷಣವಾಗಿರಬಹುದು. ಹಾಗಾಗಿ ಪದೇ ಪದೇ ಈ ರೀತಿಯ ಸಮಸ್ಯೆ ಕಂಡು ಬಂದರೆ ತಜ್ಞರನ್ನು ಸಂಪರ್ಕಿಸಿ. ಇಲ್ಲವಾದಲ್ಲಿ ಈ ಸೋಂಕು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಇದು ಅಪಾಯಕಾರಿಯೂ ಆಗಬಹುದು.

ಹಾಡ್ಗ್ಕಿನ್ ಲಿಂಫೋಮಾ ಕ್ಯಾನ್ಸರ್: ಇದು ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ರಾತ್ರಿ ಹೆಚ್ಚು ಹೆಚ್ಚು ಬೆವರು ಬಂದು ಒದ್ದೆಯಾಗುವುದು ಈ ರೋಗದ ಮುನ್ಸೂಚನೆ ಆಗಿರಬಹುದು. ಇದರ ಆರಂಭಿಕ ಲಕ್ಷಣಗಳಲ್ಲಿ ತೂಕ ನಷ್ಟ ಮತ್ತು ಜ್ವರವೂ ಸೇರಿವೆ.

ಹೈಪರ್ ಥೈರಾಯ್ಡಿಸಮ್: ಅತಿಯಾಗಿ ಕೆಲಸ ಮಾಡಿದಾಗಲೂ ರಾತ್ರಿ ಸಮಯದಲ್ಲಿ ಬೆವರು ಬರಬಹುದು. ಈ ಸ್ಥಿತಿಯು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಋತುಬಂಧ ಅಥವಾ ಹಾರ್ಮೋನುಗಳ ಬದಲಾವಣೆಗಳು: ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಶೀತದಲ್ಲಿಯೂ ಬೆವರುವಂತೆ ಮಾಡುತ್ತದೆ.

ಹೃದಯ ಸಂಬಂಧಿತ ಸಮಸ್ಯೆಗಳು: ರಾತ್ರಿಯಲ್ಲಿ ಬೆವರುವುದು ಹೃದಯಾಘಾತದಂತಹ ಹೃದಯ ಸಮಸ್ಯೆಗಳ ಸಂಕೇತವಾಗಿದೆ. ಇದು ಆಗಾಗ ಕಂಡುಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು.

ಇದನ್ನೂ ಓದಿ: ಕ್ಯಾನ್ಸರ್ ಬರಬಾರದು ಎಂದರೆ ಈ ಹಣ್ಣು ತಿನ್ನುವುದನ್ನು ಮರೆಯಬೇಡಿ

ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು?

ಚಳಿಗಾಲದ ರಾತ್ರಿಯಲ್ಲಿ ಪದೇ ಪದೇ ಬೆವರುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಇದಲ್ಲದೆ, ಪ್ರತಿನಿತ್ಯ ಸಮತೋಲಿತ ಆಹಾರವನ್ನು ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ಹೈಡ್ರೇಟ್ ಆಗಿರುವುದನ್ನು ಮರೆಯಬೇಡಿ. ಒತ್ತಡವನ್ನು ಕಡಿಮೆ ಮಾಡಲು ಯೋಗ ಅಥವಾ ಧ್ಯಾನದ ಸಹಾಯ ತೆಗೆದುಕೊಳ್ಳಿ. ಅಲ್ಲದೆ ರಾತ್ರಿ ಸಮಯದಲ್ಲಿ ತಂಪಾದ ನೀರನ್ನು ಕುಡಿಯುವುದು ಒಳ್ಳೆಯದು. ಜೊತೆಗೆ ಮಲಗುವಾಗ ಸಡಿಲವಾದ, ಹಗುರವಾದ, ಹತ್ತಿ ಅಥವಾ ಲಿನಿನ್ ಪೈಜಾಮಾವನ್ನು ಧರಿಸಿ. ವಾಕಿಂಗ್, ಈಜು, ನೃತ್ಯ, ಬೈಸಿಕಲ್ ಇತ್ಯಾದಿಗಳ ಮೂಲಕ ಪ್ರತಿದಿನ ವ್ಯಾಯಾಮ ಮಾಡಿ. ಹಗುರವಾಗಿರುವ ಹೊದಿಕೆಗಳನ್ನು ಬಳಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ