ಕೊರೋನಾ ಮಹಾಮಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಕೊವಿಡ್ ಎರಡನೇ ಅಲೆ ಇನ್ನೇನು ಮುಗಿಯಲಿದೆ ಅನ್ನುವಷ್ಟರಲ್ಲಿ 3ನೇ ಅಲೆಯ ಮತ್ತಷ್ಟು ಅಪಾಯಕಾರಿಯಾಗಿರಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಜನರು ಕೂಡ ಇನ್ನಷ್ಟು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಇದಾಗ್ಯೂ ಜನರು ಈ ಕುರಿತಂತೆ ನಿರ್ಲಕ್ಷ್ಯ ತೋರುತ್ತಿದ್ದು, ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಟಿವಿ9 ನೆಟ್ವರ್ಕ್ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. ಟಿವಿ9 ನೆಟ್ವರ್ಕ್ ಮತ್ತು ಬಿಸ್ಲೆರಿ ಕಂಪೆನಿ ಹ್ಯಾಂಡ್ ಪ್ಯೂರಿಫೈಯರ್ #HaathSafeRakho ಅಭಿಯಾನಯನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ ಜನರಲ್ಲಿ ಕೊರೋನಾ ಮಹಾಮಾರಿಯ ಕುರಿತಾದ ಜಾಗೃತಿ ಮೂಡಿಸಲು ಮುಂದಾಗಿದೆ.
ಈ ಅಭಿಯಾನದ ಮೂಲಕ ಕೋವಿಡ್ ಸುರಕ್ಷತೆಯ ಸಂದೇಶವನ್ನು ಮನೆ ಮನೆಗೆ ತಲುಪಿಸುವ ಗುರಿಯನ್ನು ಹೊಂದಿದ್ದು, ವಿಶೇಷವಾಗಿ ಕೈ ಸ್ವಚ್ಛೆಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯನ್ನು ತಿಳಿಸಲಿದೆ. ಕೊರೊನಾವೈರಸ್ ಬಗ್ಗೆ ಹೆಚ್ಚಿನ ಜನರು ನಿರ್ಲಕ್ಷ್ಯ ತೋರಲಾರಂಭಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲು #HaathSafeRakho (ಕೈ ಸ್ವಚ್ಛವಾಗಿಟ್ಟುಕೊಳ್ಳಿ) ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ವ್ಯಾಕ್ಸಿನೇಷನ್ ಮೊದಲು ಹಾಗೂ ನಂತರ ಕೈಗಳನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬೇಕೆಂಬ ಸುರಕ್ಷಾ ಅಭಿಯಾನವಾಗಿದೆ. ಕೋವಿಡ್ ಸುರಕ್ಷತೆಯ ಸಂದೇಶವನ್ನು ಮೊದಲು ಮನೆ ಮನೆಗೆ ತಲುಪಿಸುವ ಗುರಿಯನ್ನು ಈ ಅಭಿಯಾನ ಹೊಂದಿದ್ದು, ಪ್ರತಿಯೊಬ್ಬರು ಪ್ರತಿ ಸಂದರ್ಭದಲ್ಲೂ ಕೈಗಳ ಸ್ವಚ್ಛವಾಗಿಟ್ಟುಕೊಂಡು ಹೇಗೆ ಕೊರೋನಾದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಈ ಅಭಿಯಾನ ತಿಳಿಸಲಿದೆ.
ಚುಚ್ಚು ಮದ್ದಿನ (ವ್ಯಾಕ್ಸಿನೇಷನ್) ಬಳಿಕ ಕೂಡ ಕೊರೋನಾ ವಿರುದ್ದ ಸುರಕ್ಷತೆ ಅತ್ಯವಶ್ಯಕ ಎಂಬ ಸಂದೇಶವನ್ನು ಬಲಪಡಿಸಲು ಜುಲೈ 16, ಶುಕ್ರವಾರದಿಂದ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅದರಂತೆ ಪ್ರಮುಖ 11 ನಗರಗಳಲ್ಲಿ 11 ದಿನಗಳ ಕಾಲ ಒಟ್ಟು 450ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ತಲುಪಲಿದೆ. ಈ ಕೇಂದ್ರಗಳಲ್ಲಿ ಲಸಿಕೆ ಪಡೆಯುತ್ತಿರುವ ಜನರಿಗೆ ಎಲ್ಲಾ ಪ್ರಮುಖ ಮಾಹಿತಿಗಳನ್ನು ತಿಳಿಸಿ, ಜಾಗೃತಿ ಮೂಡಿಸಲಾಗುತ್ತದೆ.
ಈ ಬಗ್ಗೆ ಮಾತನಾಡಿರುವ ಬಿಸ್ಲೆರಿ ಇಂಟರ್‌ನ್ಯಾಷನಲ್‌ನ ಮಾರ್ಕೆಟಿಂಗ್ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್‌ನ ನಿರ್ದೇಶಕಿ ಅಂಜನಾ ಘೋಷ್ ಅವರು, “ಗ್ರಾಹಕರಲ್ಲಿ ಹೆಚ್ಚಿನ ಜಾಗೃತಿ ಮೂಡಿದ್ದು, ವೈಯಕ್ತಿಕವಾಗಿ ಸ್ವಚ್ಛತೆ ವಿಷಯದಲ್ಲಿ ಭಾರಿ ಬೆಳವಣಿಗೆ ಕಂಡುಬಂದಿದೆ. ಸ್ವಚ್ಛತೆ ವಿಷಯದಲ್ಲಿ ಜಾಗೃತಿ ಹೊಂದಿದ್ದರೂ ಗ್ರಾಹಕರು ಉತ್ತಮವಾದ ಸುವಾಸನೆಯ ಉತ್ಪನ್ನವನ್ನು ಬಯಸುತ್ತಾರೆ. ಆದರೆ ಅಂತಹ ಉತ್ಪನ್ನಗಳು ಸುವಾಸನೆ ನೀಡುತ್ತದೆ ಹೊರತು ವೈರಸ್ಗಳಿಂದ ರಕ್ಷಣೆ ನೀಡುವುದಿಲ್ಲ. ಇವೆಲ್ಲವನ್ನು ಪರಿಗಣಿಸಿ ಹಲವು ವೈಶಿಷ್ಟ್ಯಗಳೊಂದಿಗೆ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್ ಅತ್ಯುತ್ತಮ ಉತ್ಪನ್ನವನ್ನು ಪರಿಚಯಿಸಿತು. ಇದೀಗ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್ ಪ್ಯಾನ್ ಇಂಡಿಯಾ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದ್ದು, ಕಿರಾಣಿ ಅಂಗಡಿಗಳು, , ಸ್ಟೇಷನರಿ ಅಂಗಡಿ, ಔಷಧ ಅಂಗಡಿ, ಪಾನ್ ಅಂಗಡಿ, ಕಾಸ್ಮೆಟಿಕ್ಸ್ ಶಾಪ್, ಸಲೊನ್ನಲ್ಲಿ, ಸೂಪರ್ ಮಾರುಕಟ್ಟೆಗಳಲ್ಲಿ, ಡಿ-ಮಾರ್ಟ್, ರಿಲಯನ್ಸ್ ಫ್ರೆಶ್, ರಿಲಯನ್ಸ್ ಸ್ಮಾರ್ಟ್, ಜಿಯೋ ಮಾರ್ಟ್ ಮತ್ತು ಮೋರ್ ರಿಟೇಲ್ ಲಿಮಿಟೆಡ್‌ನಲ್ಲಿದೆ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್ ಲಭ್ಯವಿದೆ. ಅಲ್ಲದೆ, www.shop.bisleri.com ಮೂಲಕ ಆನ್‌ಲೈನ್‌ನಲ್ಲೂ ಇವುಗಳನ್ನು ಖರೀದಿಸಬಹುದು. ” ಎಂದು ತಿಳಿಸಿದ್ದಾರೆ.
ಖ್ಯಾತ ವೈದ್ಯರೊಂದಿಗಿನ ವರ್ಚುವಲ್ ಚರ್ಚಾ ವೇದಿಕೆ ಮೂಲಕ #HaathSafeRakho ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮಾಜಿ ಕೇಂದ್ರ ಸಚಿವ ಮತ್ತು ಗೌತಮ್ ಬುದ್ಧನಗರದ ಸಂಸದ ಡಾ.ಮಹೇಶ್ ಶರ್ಮಾ, ಕೈಲಾಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಸಿಎಂಡಿ ಆಗಿರುವ ಪದ್ಮಶ್ರೀ ಡಾ.ಡಿ.ಎಸ್.ರಾಣಾ, ಸರ್ ಗಂಗಾ ರಾಮ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಅಧ್ಯಕ್ಷರು, ಬಿಸ್ಲೆರಿ ಇಂಟರ್‌ನ್ಯಾಷನಲ್‌ನ ಮಾರ್ಕೆಟಿಂಗ್ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್‌ನ ನಿರ್ದೇಶಕಿ ಅಂಜನಾ ಘೋಷ್ ಮತ್ತು ಏಮ್ಸ್ ಸಮುದಾಯ ಪ್ರಾಧ್ಯಾಪಕ ಡಾ. ಸಂಜಯ್ ಕೆ ರೈ ಅವರು ಈ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ನೋಯ್ಡಾ, ದೆಹಲಿ, ಮುಂಬೈ, ಥಾಣೆ, ಪುಣೆ, ನವಿ ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಸೇರಿದಂತೆ 11 ನಗರಗಳಲ್ಲಿ ಈ ಅಭಿಯಾನವನ್ನು ನಡೆಸಲಾಗಿದ್ದು, ಹೆಚ್ಚಿನ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
“ಸರ್ಕಾರದ ವ್ಯಾಕ್ಸಿನೇಷನ್ ಡ್ರೈವ್ ವೇಗವನ್ನು ಹೆಚ್ಚಿಸುತ್ತಿದ್ದು, ಅದರ ಜೊತೆಗೆ ಕೈಗಳ ಸ್ವಚ್ಛೆ ಕಾಪಾಡಿಕೊಳ್ಳುವ ಮೂಲಕ ಭವಿಷ್ಯದ ಅಲೆಗಳನ್ನು ತಡೆಗಟ್ಟಲು ಜನರನ್ನು ಪ್ರೇರೇಪಿಸಬೇಕಿದೆ. ಇದೇ ಉದ್ದೇಶದೊಂದಿಗೆ #HaathSafeRakho ಅಭಿಯಾನದಲ್ಲಿ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್ ಜೊತೆ ಪಾಲುದಾರರಾಗಿರುವ ಬಗ್ಗೆ ಖುಷಿಯಿದೆ. ಕೋವಿಡ್ ಸಂಧರ್ಭದಲ್ಲಿ ಜಾಗೃತಿ ಮೂಡಿಸುವ ಈ ಅಭಿಯಾನವು ಮಹತ್ವದ್ದಾಗಿದೆ ಎಂದು ನಾವು ಭಾವಿಸುತ್ತೇವೆ” ಎಂದು ಟಿವಿ 9 ನೆಟ್‌ವರ್ಕ್‌ನ ಸಿಒಒ, ಸ್ಟುಡಿಯೋ 9 (ಡಿಜಿಟಲ್ ಮತ್ತು ಬ್ರಾಡ್‌ಕಾಸ್ಟಿಂಗ್) ರಕ್ತಿಮ್ ದಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!