ಕೂದಲು ತೆಳುವಾಗುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ನಿಮ್ಮ ಆಹಾರದ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಆರೋಗ್ಯಕರ ಜೀವನಕ್ಕಾಗಿ ಪೌಷ್ಟಿಕ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಆದರೆ ನೀವು ನಿರ್ದಿಷ್ಟವಾದ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರೆ, ನೀವು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬುದು ಚೆನ್ನಾಗಿ ತಿಳಿದಿರಬೇಕು. ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಬಂದಾಗ, ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರ ನಿಮಗೆ ಈ ಸಮಸ್ಯೆಗೆ ಪರಿಹಾರ ನೀಡಲಿದೆ. ಹಾಗಾದರೆ ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ತಿಳಿದುಕೊಳ್ಳಬೇಕಾ? ತಜ್ಞರು ಕೂದಲಿನ ಬೆಳವಣಿಗೆಗೆ ನೀವು ಸೇವಿಸಬೇಕಾದ ಎಲ್ಲಾ ಆಹಾರಗಳ ಬಗೆಗಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನವದೆಹಲಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಜ್ಯೋತಿ ಖನಿಯೋಜ್ ಅವರು ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ವಿವರವಾಗಿ ಹಂಚಿಕೊಂಡಿದ್ದು, ಆ ಬಗ್ಗೆ ಇಲ್ಲಿದೆ ಮಾಹಿತಿ.
ವಿಟಮಿನ್ ಬಿ ಯಲ್ಲಿ ಅನೇಕ ಜೀವಸತ್ವಗಳಿವೆ, ಇದು ಕೂದಲಿನ ಬೆಳವಣಿಗೆ ಮತ್ತು ಉತ್ತಮ ಕೂದಲಿನ ಆರೋಗ್ಯಕ್ಕೆ ನಿರ್ದಿಷ್ಟವಾಗಿ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಏಕೆಂದರೆ ಬಿ ಜೀವಸತ್ವಗಳಾದ ಬಿ 7 (ಬಯೋಟಿನ್), ಫೋಲೇಟ್ ಮತ್ತು ಬಿ 12 ಕೂದಲಿನ ಕೋಶಗಳು ಸೇರಿದಂತೆ ಹೊಸ ಕೋಶಗಳ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ಖನಿಯೋಜ್ ಹೇಳುತ್ತಾರೆ. ಬಯೋಟಿನ್ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಅದರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಫೋಲೇಟ್ ಮತ್ತು ಬಿ 12ಗೆ ಸಂಬಂಧಿಸಿದಂತೆ, ಅವು ಕೆಂಪು ರಕ್ತ ಕಣಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಇವು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಕೂದಲಿನ ಕಣ ಕಣಗಳಿಗೂ ಸಾಗಿಸುತ್ತವೆ, ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಹಾಗಾದರೆ ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರಗಳು ಯಾವುದು? ನಿಮ್ಮ ಕೂದಲ ಬೆಳವಣಿಗೆಗೆ ಯಾವ ಉತ್ಪನ್ನ ಸಹಕಾರಿಯಾಗಲಿದೆ? ಇಲ್ಲಿದೆ ಮಾಹಿತಿ.
ವಿಟಮಿನ್ ಬಿ ಯ ಪ್ರಯೋಜನಗಳನ್ನು ಪಡೆಯಲು ನೀವು ಈ ಆಹಾರಗಳನ್ನು ನಿಮ್ಮ ಊಟದ ಭಾಗವಾಗಿ ಮಾಡಿಕೊಳ್ಳಬಹುದು. ನಿಮಗಾಗಿ ಕೆಲವು ಆಹಾರ ಆಯ್ಕೆಗಳ ಪಟ್ಟಿ ಇಲ್ಲಿವೆ!
ಕ್ಯಾಲ್ಸಿಯಂನಿಂದ ಮೂಳೆಗಳ ಬಲ ಹೆಚ್ಚಾಗುತ್ತದೆ ಎಂಬುದು ನಿಮಗೆ ತಿಳಿದಿರಬಹುದು. ಅಂತಹ ಗುಣ ಹೊಂದಿರುವ ಹಾಲು ಮತ್ತು ಡೈರಿ ಉತ್ಪನ್ನಗಳು ಹೆಚ್ಚಾಗಿ ಹೆಸರುವಾಸಿಯಾಗಿವೆ. ಜೊತೆಗೆ ಅವು ಕೂದಲಿನ ಆರೋಗ್ಯಕ್ಕೆ ಅತ್ಯಗತ್ಯವಾದ ಬಯೋಟಿನ್ ಅನ್ನು ಸಹ ಒದಗಿಸುತ್ತವೆ. ಹಾಗಾಗಿ ನಿಮಗೆ ಇಷ್ಟವಿದ್ದಲ್ಲಿ ವಿಧ ವಿಧವಾದ ಮನೆಯಲ್ಲಿಯೇ ಮಾಡಿದ ರುಚಿರುಚಿಯಾದ ಹಾಲಿನ ಸ್ವೀಟ್, ಪಾಯಸಗಳನ್ನು ಸವಿಯಬಹುದು.
ಮೊಟ್ಟೆಗಳನ್ನು ವಿಭಿನ್ನ ರೀತಿಯ ಆಹಾರಗಳಲ್ಲಿ ಸೇವಿಸುವುದರ ಜೊತೆಗೆ ಅವುಗಳಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮೊಟ್ಟೆಗಳಲ್ಲಿ ಬಯೋಟಿನ್ ಸೇರಿದಂತೆ ಬಿ ಜೀವಸತ್ವಗಳ ಉತ್ತಮ ಮೂಲವಾಗಿದೆ. ಇದು ಕೂದಲಿನ ಬೆಳವಣಿಗೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಪಾಲಕ್ ಮತ್ತು ಕೇಲ್ ನಂತಹ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ ಏಕೆಂದರೆ ಅವುಗಳಲ್ಲಿ ಫೋಲೇಟ್ ಸಮೃದ್ಧವಾಗಿದೆ, ಇದು ಕೂದಲಿನ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸಾಲ್ಮನ್ ಮತ್ತು ಬಂಗುಡೆ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಬಿ 12 ಅಧಿಕವಾಗಿದ್ದು, ಇದು ಕೂದಲಿನ ಬೆಳವಣಿಗೆ ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: Hair Care Tips: ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಈ ಎರಡು ಪದಾರ್ಥ ಇದ್ದರೆ ಸಾಕು
ಬೇಳೆ ಕಾಳುಗಳು ಮತ್ತು ಬೀನ್ಸ್ ಕೂದಲಿನ ಬೆಳವಣಿಗೆಗೆ ಮುಖ್ಯವಾದ ಫೋಲೇಟ್ ಸೇರಿದಂತೆ ಬಿ ಜೀವಸತ್ವಗಳನ್ನು ಒದಗಿಸುತ್ತವೆ.
ಕೂದಲಿನ ಬೆಳವಣಿಗೆಗೆ ಬಾದಾಮಿ ಅಥವಾ ಸೂರ್ಯಕಾಂತಿ ಬೀಜಗಳನ್ನು ಸೇವಿಸಿ. ಇಂತಹ ಆರೋಗ್ಯಕರ ಬೀಜಗಳಲ್ಲಿ ಬಯೋಟಿನ್ ಮತ್ತು ಇತರ ಬಿ ಜೀವಸತ್ವಗಳು ಸಮೃದ್ಧವಾಗಿರುತ್ತವೆ.
ಬ್ರೌನ್ ರೈಸ್ ಮತ್ತು ಓಟ್ಸ್ ಕೂದಲಿನ ಬೆಳವಣಿಗೆಗೆ ಉತ್ತಮ ಆಯ್ಕೆಯಾಗಿವೆ ಏಕೆಂದರೆ ಇದರಲ್ಲಿಯೂ ಕೂದಲನ್ನು ಬಲಪಡಿಸುವ ಬಿ ಜೀವಸತ್ವಗಳು ಒಳಗೊಂಡಿರುತ್ತವೆ.
ಕಿತ್ತಳೆ ಮತ್ತು ನಿಂಬೆಹಣ್ಣುಗಳಲ್ಲಿ ಫೋಲೇಟ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಕೂದಲಿನ ಆರೋಗ್ಯಕ್ಕಾಗಿ ಬಿ ಜೀವಸತ್ವಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ನಿಮ್ಮ ದೈನಂದಿನ ಆಹಾರದಲ್ಲಿ ಈ ಆಹಾರಗಳನ್ನು ಸೇರಿಸಿ ಎಂದು ತಜ್ಞರು ಹೇಳುತ್ತಾರೆ. ನೀವು ಹಾಲು ಅಥವಾ ಡೈರಿ ಉತ್ಪನ್ನಗಳನ್ನು ಉಪಾಹಾರದ ಭಾಗವಾಗಿ ಸೇವಿಸಬಹುದು ಅಥವಾ ಅವುಗಳನ್ನು ಸ್ವೀಟ್, ಪಾಯಸ, ಮಿಲ್ಕ್ ಶೇಕ್ ಗಳಲ್ಲಿ ಸೇರಿಸಬಹುದು. ಇನ್ನು, ಮೊಟ್ಟೆಗಳನ್ನು ಉಪಾಹಾರದಲ್ಲಿ ಸೇವಿಸಬಹುದು ಅಥವಾ ಸಲಾಡ್ ಗಳಲ್ಲಿ ಸೇರಿಸಿಕೊಳ್ಳಬಹುದು. ಹಸಿರು ತರಕಾರಿಗಳು, ಮೀನು, ದ್ವಿದಳ ಧಾನ್ಯಗಳು ಮತ್ತು ಬೀಜಗಳನ್ನು ಸಲಾಡ್ ಗಳಲ್ಲಿ, ಸ್ಟಿರ್-ಫ್ರೈಗಳು ಅಥವಾ ವಿವಿಧ ಆಹಾರಗಳಲ್ಲಿ ಸೇರಿಸಿ ಕೊಳ್ಳಬಹುದು. ಜೊತೆಗೆ ಸಂಪೂರ್ಣ ಧಾನ್ಯಗಳನ್ನು ಊಟದ ಭಾಗವಾಗಿ ಅಥವಾ ಸೈಡ್ ಡಿಶ್ ಗಳಾಗಿ ಸೇವಿಸಬಹುದು.. ಸಿಟ್ರಸ್ ಹಣ್ಣುಗಳಿಗೆ ಸಂಬಂಧಿಸಿದಂತೆ, ಅವುಗಳನ್ನು ಲಘು ಆಹಾರವಾಗಿ ತೆಗೆದುಕೊಳ್ಳಬಹುದು ಅಥವಾ ಸಸಲಾಡ್ ಗಳು ಅಥವಾ ಹಣ್ಣಿನ ರಸಗಳಲ್ಲಿ ಸೇರಿಸಬಹುದು. ಆದರೆ ಬಯೋಟಿನ್ ನಂತಹ ಕೆಲವು ಬಿ ಜೀವಸತ್ವಗಳ ಅತಿಯಾದ ಸೇವನೆಯು ಜೀರ್ಣಕಾರಿ ಅಸ್ವಸ್ಥತೆ ಅಥವಾ ಚರ್ಮದ ಪ್ರತಿಕ್ರಿಯೆಗಳಂತಹ ಸಣ್ಣ ಅಡ್ಡಪರಿಣಾಮಗಳಿಗೆ ಕಾರಣವಾಗುವುದರಿಂದ ಜಾಗರೂಕರಾಗಿರಿ. ಈ ಆಹಾರಗಳ ಪ್ರಮಾಣದ ಬಗ್ಗೆ ನಿಮಗೆ ಸಂದೇಹಗಳಿದ್ದರೆ, ಪೌಷ್ಟಿಕತಜ್ಞರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: