Headache And Fatigue: ದೇಹದಲ್ಲಿ ಈ ವಿಟಮಿನ್ ಕೊರತೆಯಾದರೆ ತಲೆನೋವು, ಆಯಾಸದಂತಹ ಲಕ್ಷಣಗಳು ಗೋಚರಿಸುತ್ತವೆ

| Updated By: ನಯನಾ ರಾಜೀವ್

Updated on: Jan 12, 2023 | 1:13 PM

ತಲೆನೋವು(Headache), ಆಯಾಸ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ, ಆದರೆ ಈ ಸಮಸ್ಯೆ ಹಿಂದೆ ದೊಡ್ಡ ಕಾರಣವಿದೆ ಎಂಬುದು ನಿಮಗೆ ತಿಳಿದಿದೆಯೇ?. ಈ ಎರಡೂ ಸಮಸ್ಯೆಗಳ ಹಿಂದೆ ಹಲವು ಕಾರಣಗಳಿರಬಹುದು

Headache And Fatigue: ದೇಹದಲ್ಲಿ ಈ ವಿಟಮಿನ್ ಕೊರತೆಯಾದರೆ ತಲೆನೋವು, ಆಯಾಸದಂತಹ ಲಕ್ಷಣಗಳು ಗೋಚರಿಸುತ್ತವೆ
ತಲೆನೋವು
Follow us on

ತಲೆನೋವು(Headache), ಆಯಾಸ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ, ಆದರೆ ಈ ಸಮಸ್ಯೆ ಹಿಂದೆ ದೊಡ್ಡ ಕಾರಣವಿದೆ ಎಂಬುದು ನಿಮಗೆ ತಿಳಿದಿದೆಯೇ?. ಈ ಎರಡೂ ಸಮಸ್ಯೆಗಳ ಹಿಂದೆ ಹಲವು ಕಾರಣಗಳಿರಬಹುದು, ಆದರೆ ಕೆಲವರು ಸರಿಯಾದ ಆಹಾರವನ್ನು ತೆಗೆದುಕೊಳ್ಳದಿರುವುದು ಕಾರಣವಾಗಿರಬಹುದು. ನಾವು ತಿನ್ನುವ ಆಹಾರದಿಂದ ದೇಹವು ಸಂಪೂರ್ಣ ಪೋಷಕಾಂಶಗಳನ್ನು ಪಡೆಯದಿರುವ ಸಾಧ್ಯತೆಯಿದೆ. ಯಾವ ವಿಟಮಿನ್ ಕೊರತೆಯು ತಲೆನೋವು ಮತ್ತು ಆಯಾಸಕ್ಕೆ ಕಾರಣವಾಗಬಹುದು.
ನಿಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆ ಇದೆಯೇ?

ನಮ್ಮ ದೇಹದಲ್ಲಿ ವಿಟಮಿನ್ ಬಿ12 ಕೊರತೆ ಉಂಟಾದಾಗ ತಲೆನೋವು ಮತ್ತು ಆಯಾಸಕ್ಕೆ ಕಾರಣವಾಗುತ್ತದೆ, ಈ ಪ್ರಮುಖ ಪೋಷಕಾಂಶದ ಕೊರತೆಯಾದಾಗ ದೇಹವು ಯಾವ ರೀತಿಯಾಗುತ್ತದೆ. ಎಚ್ಚರಿಕೆಯ ಸಂಕೇತವನ್ನು ನೀಡಲು ಪ್ರಾರಂಭಿಸುತ್ತದೆ.

ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು

– ಸದಾ ಸುಸ್ತು
-ನಿರಂತರ ತಲೆನೋವು
– ಮೂತ್ರದ ಬಣ್ಣ ಗಾಢ ಹಳದಿ
-ಚರ್ಮದ ಹಳದಿ
– ಅಜೀರ್ಣ
– ಯಾವುದೇ ಕೆಲಸದಲ್ಲಿ ಗಮನ ಹರಿಸಲು ಸಾಧ್ಯವಾಗದಿರುವುದು
-ಕೈ ಕಾಲುಗಳಲ್ಲಿ ಉರಿಯುವುದು
– ಕಣ್ಣುಗಳ ದೌರ್ಬಲ್ಯ
-ನೋವು – ಖಿನ್ನತೆ – ನಾಲಿಗೆ ಒಣಗುವುದು

ಮತ್ತಷ್ಟು ಓದಿ: Vitamin B12: ವಿಟಮಿನ್ ಬಿ 12 ಕೊರತೆಯು ಈ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಬಲ್ಲದು? ಇಲ್ಲಿದೆ ಮಾಹಿತಿ

ವಿಟಮಿನ್ ಬಿ 12 ಕೊರತೆಯನ್ನು ನೀಗಿಸಲು ಏನು ಮಾಡಬೇಕು?
ವಿಟಮಿನ್ ಬಿ 12 ಕೊರತೆಯನ್ನು ತಪ್ಪಿಸಲು ಅಥವಾ ತೆಗೆದುಹಾಕಲು, ನೀವು ದೈನಂದಿನ ಆಹಾರದಲ್ಲಿ ಅಂತಹ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು, ಇದರಲ್ಲಿ ಈ ನಿರ್ದಿಷ್ಟ ಪೋಷಕಾಂಶವು ಹೇರಳವಾಗಿ ಕಂಡುಬರುತ್ತದೆ. ಇದಲ್ಲದೇ ವೈದ್ಯರ ಸಲಹೆ ಮೇರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಟಮಿನ್ ಬಿ12 ಪೂರಕಗಳನ್ನು ಸೇವಿಸಬಹುದು.
ವಿಟಮಿನ್ ಬಿ12 ಹೊಂದಿರುವ ಆಹಾರಗಳು
– ಹಾಲು
– ಚೀಸ್
– ಮೊಸರು
– ಚಿಕನ್
– ಕೆಂಪು ಮಾಂಸ
– ಮೊಟ್ಟೆ
– ಮೀನು
-ಏಕದಳ
– ಸೋಯಾ ಹಾಲು

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ