ಜಿಮ್ ಮತ್ತು ವ್ಯಾಯಾಮ ಮಾಡುವವರು ಹೆಚ್ಚಾಗಿ ಪ್ರೋಟೀನ್ ಪೌಡರ್ ಬಳಸುತ್ತಾರೆ. ಇದಲ್ಲದೇ ದೇಹದ ಆರೋಗ್ಯಕ್ಕೆ ಜೀವಸತ್ವಗಳು, ಖನಿಜಗಳು, ಪೋಷಕಾಂಶಗಳು, ನಿರ್ದಿಷ್ಟವಾಗಿ ಪ್ರೋಟೀನ್ ಅಗತ್ಯವಿರುತ್ತದೆ. ದೇಹದಲ್ಲಿ ಪ್ರೋಟೀನ್ ಅಂಶದ ಕೊರತೆ ವಿವಿಧ ಕಾಯಿಲೆಗಳಿಗೆ ತುತ್ತಾಗಲು ಕಾರಣವಾಗಬಹುದು. ಅಂತಹ ಸಮಯದಲ್ಲಿ ಪ್ರೋಟೀನ್ ಕೊರತೆಯನ್ನು ನೀಗಿಸಲು ಸಾಕಷ್ಟು ಜನರು ಪ್ರೊಟೀನ್ ಪೌಡರ್ ತೆಗೆದುಕೊಳ್ಳುತ್ತಾರೆ. ಆದರೆ ಪ್ರತೀ ದಿನ ಪ್ರೋಟೀನ್ ಪೌಡರ್ ತೆಗೆದುಕೊಳ್ಳುವುದು ಆರೋಗ್ಯದ ಮೇಲೆ ಅಡ್ಡ ಪರಿಣಾವನ್ನುಂಟು ಮಾಡಬಹುದು. ಆದ್ದರಿಂದ ನೀವೂ ಕೂಡ ಪ್ರೋಟೀನ್ ಪೌಡರ್ ಬಳಸುತ್ತಿದ್ದರೆ, ಅದರಿಂದಾಗುವ ಅಪಾಯವನ್ನೂ ಇಲ್ಲಿ ತಿಳಿದುಕೊಳ್ಳಿ.
ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ:
ಪ್ರೋಟೀನ್ ಪೌಡರ್ ತಯಾರಿಸಲು ಸಕ್ಕರೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಇನ್ಸುಲಿನ್ ವೇಗವನ್ನು ಹೆಚ್ಚಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದಾಗಿ ಮಧುಮೇಹದ ಅಪಾಯವೂ ಹೆಚ್ಚಾಗಬಹುದು.
ಕರುಳಿನ ಆರೋಗ್ಯಕ್ಕೆ ಹಾನಿ:
ಪ್ರೋಟೀನ್ ಪುಡಿಗಳಲ್ಲಿ ಹಲವು ವಿಧಗಳಿವೆ. ಇವುಗಳಲ್ಲಿ, ರುಚಿಗೆ ಸಿಹಿಕಾರಕಗಳು ಮತ್ತು ಬಣ್ಣಗಳನ್ನು ಸೇರಿಸಲಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ಸಿಹಿಕಾರಕ ಮತ್ತು ಬಣ್ಣ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಹಾನಿಗೊಳಿಸುತ್ತವೆ. ಇದಲ್ಲದೆ, ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಈ ಪ್ರೊಟೀನ್ ಪೌಡರ್ ನಿಂದಾಗಿ ಕೆಲವರು ತೂಕ ಕಳೆದುಕೊಳ್ಳುತ್ತಾರೆ.
ಇದನ್ನೂ ಓದಿ: ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಇಲ್ಲಿದೆ ಕಾರಣ
ಮೂತ್ರಪಿಂಡದ ಹಾನಿ:
ನೀವು ಹೆಚ್ಚು ಪ್ರೋಟೀನ್ ಸೇವಿಸಿದರೆ, ಮೂತ್ರಪಿಂಡಗಳಿಗೆ ಹಾನಿಯಾಗುವ ಅಪಾಯವಿದೆ. ಪ್ರೊಟೀನ್ ಪ್ರಮಾಣ ಹೆಚ್ಚಿದ್ದರೆ ಮೂತ್ರದ ಕ್ಯಾಲ್ಸಿಯಂ ವಿಸರ್ಜನೆ, ಅತಿಯಾದ ಮೂತ್ರ ವಿಸರ್ಜನೆ, ಕಿಡ್ನಿಗಳ ಕಾರ್ಯಚಟುವಟಿಕೆಗೆ ಅಡ್ಡಿ, ಕಿಡ್ನಿಯಲ್ಲಿ ಕಲ್ಲುಗಳ ರಚನೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಇದಲ್ಲದೆ, ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ.
ಹಾರ್ಮೋನ್ ಅಸಮತೋಲನ:
ಕೆಲವು ರೀತಿಯ ಪ್ರೋಟೀನ್ ಪುಡಿಗಳು ಸೋಯಾ ಆಧಾರಿತವಾಗಿವೆ. ಇವುಗಳನ್ನು ತಿಳಿಯದೆ ಸೇವಿಸುವುದರಿಂದ ದೇಹದಲ್ಲಿ ಹಾರ್ಮೋನ್ ಅಸಮತೋಲನ ಸಮಸ್ಯೆ ಉಂಟಾಗುತ್ತದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸೋಯಾದಲ್ಲಿ ಅಮೈನೋ ಆಮ್ಲಗಳು ಮತ್ತು ಫೈಟೊಸ್ಟ್ರೊಜೆನ್ಗಳು ಅಧಿಕವಾಗಿವೆ. ಇವುಗಳು ಆಯಾಸ, ಬಯಕೆ ಕಡಿಮೆಯಾಗುವುದು ಮತ್ತು ಸ್ತನ ಗಾತ್ರದಲ್ಲಿ ಬದಲಾವಣೆಗೆ ಕಾರಣವಾಗಬಹುದು. ಹಾಗಾಗಿ ಈ ಪ್ರೊಟೀನ್ ಪೌಡರ್ ತೆಗೆದುಕೊಳ್ಳುವ ಮುನ್ನ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: