ಫಿಟ್ನೆಸ್ ಕಾಪಾಡಿಕೊಳ್ಳಲು ಯಾವಾಗ ವ್ಯಾಯಾಮ ಮಾಡಬೇಕು? ಬೆಳಿಗ್ಗೆ ಅಥವಾ ಸಂಜೆ?
ಒತ್ತಡದ ಜೀವನದ ಮಧ್ಯೆ ಪ್ರತೀ ದಿನ ಕನಿಷ್ಟ 30 ನಿಮಿಷವಾದರೂ ವ್ಯಾಯಾಮಗಳಿಗೆ ಸಮಯ ಮೀಸಲಿಡಿ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಕೆಲವರು ಹಗಲಿನಲ್ಲಿ ವ್ಯಾಯಾಮ ಮಾಡಲು ಇಷ್ಟಪಡುತ್ತಾರೆ, ಇನ್ನು ಕೆಲವರು ಸಂಜೆಯ ಹೊತ್ತು ವ್ಯಾಯಾಮ ಮಾಡಲು ಸಮಯ ಮೀಸಲಿಡುತ್ತಾರೆ. ಆದ್ದರಿಂದ ಬೆಳಿಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವ್ಯಾಯಾಮವು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಿಸುತ್ತದೆ. ಹೆಚ್ಚಿನ ಜನರಿಗೆ ವ್ಯಾಯಾಮ ಮಾಡಲು ಸಾಕಷ್ಟು ಸಮಯ ಇರುವುದಿಲ್ಲ ಮತ್ತು ಆದ್ದರಿಂದ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಯಾಮ ಮಾಡುತ್ತಾರೆ. ಕೆಲವರು ಹಗಲಿನಲ್ಲಿ ವ್ಯಾಯಾಮ ಮಾಡಲು ಇಷ್ಟಪಡುತ್ತಾರೆ, ಇನ್ನು ಕೆಲವರು ಸಂಜೆಯ ಹೊತ್ತು ವ್ಯಾಯಾಮ ಮಾಡಲು ಸಮಯ ಮೀಸಲಿಡುತ್ತಾರೆ. ಆದ್ದರಿಂದ ಬೆಳಿಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಯಾವ ಸಮಯದಲ್ಲಿ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆಗೆ ಯೋಗ ತಜ್ಞರಾದ ಮಹಾಕ್ ದೀಪ್ ಅವರು ಕೆಲವು ಸಲಹೆ ನೀಡಿದ್ದಾರೆ.
ಬೆಳಿಗ್ಗೆ ವ್ಯಾಯಾಮ ಮಾಡುವುದು:
ಬೆಳಗಿನ ವ್ಯಾಯಾಮವು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದರೊಂದಿಗೆ ನಿದ್ರೆಯ ಗುಣಮಟ್ಟವೂ ಸುಧಾರಿಸುತ್ತದೆ. ಆದ್ದರಿಂದ ಬೆಳಗಿನ ವ್ಯಾಯಾಮವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
ಸಂಜೆ ವ್ಯಾಯಾಮ ಮಾಡುವುದು:
ಸಂಜೆಯ ವ್ಯಾಯಾಮವು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಸಂಜೆ ವ್ಯಾಯಾಮ ಮಾಡುವುದರಿಂದ, ವ್ಯಕ್ತಿಯು ಒತ್ತಡದಿಂದ ಮುಕ್ತನಾಗುತ್ತಾನೆ ಮತ್ತು ದಿನದ ಸವಾಲುಗಳಿಂದ ಪರಿಹಾರವನ್ನು ಪಡೆಯುವ ಅವಕಾಶವನ್ನು ಪಡೆಯುತ್ತಾನೆ. ಶಕ್ತಿ ಮತ್ತು ನಮ್ಯತೆಯ ಮೇಲೆ ಹೆಚ್ಚು ಗಮನಹರಿಸುವವರಿಗೆ ಸಂಜೆಯ ವ್ಯಾಯಾಮ ಹೆಚ್ಚು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ಸಂತೋಷದ ಹಾರ್ಮೋನು ಹೆಚ್ಚಿಸಲು, ನೈಸರ್ಗಿಕ ಒತ್ತಡ ನಿವಾರಿಸಲು ಇಲ್ಲಿದೆ ಸುಲಭ ಮಾರ್ಗ
ಆದ್ದರಿಂದ ಒತ್ತಡದ ಜೀವನದಲ್ಲಿ ಪ್ರತೀ ದಿನ ಕನಿಷ್ಟ 30 ನಿಮಿಷವಾದರೂ ವ್ಯಾಯಾಮಗಳಿಗೆ ಸಮಯ ಮೀಸಲಿಡಿ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಬೆಳಿಗ್ಗೆ 6ರಿಂದ 7 ಗಂಟೆಯ ನಡುವೆ ಹಾಗೂ ಸಂಜೆಯ ಹೊತ್ತು 5.30ರಿಂದ 6.30ರ ಒಳಗಡೆ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಇದು ನಿಮ್ಮ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: