ಬೆಳಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತ: ಜೈಲು ಅಧಿಕಾರಿ ಸಾವು
ಪಾಣಿಪತ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಹರ್ಯಾಣ ಜೈಲು ಉಪ ಅಧೀಕ್ಷಕರಾದ ಜೋಗಿಂದರ್ ದೇಸ್ವಾಲ್ ಮೃತ ದುರ್ದೈವಿ. ಕರ್ನಾಲ್ ಮೂಲದ ಜೋಗಿಂದರ್ ಅವರು ಕಾರಾಗೃಹ ಇಲಾಖೆಗೆ ಸೇರುವ ಮೊದಲು ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು.
ಪಾಣಿಪತ್ (ಹರಿಯಾಣ) ಅಕ್ಟೋಬರ್ 25: ಪಾಣಿಪತ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ (heart attack) ತುತ್ತಾಗಿದ್ದಾರೆ. ಹರ್ಯಾಣ ಜೈಲು ಉಪ ಅಧೀಕ್ಷಕರಾದ ಜೋಗಿಂದರ್ ದೇಸ್ವಾಲ್ ಮೃತ ದುರ್ದೈವಿ. ಕರ್ನಾಲ್ ಮೂಲದ ಜೋಗಿಂದರ್ ಅವರು ಕಾರಾಗೃಹ ಇಲಾಖೆಗೆ ಸೇರುವ ಮೊದಲು ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಪ್ರಸ್ತುತ ಪಾಣಿಪತ್ ಜೈಲಿನಲ್ಲಿ ( Panipat, Haryana) ನಿಯೋಜಿಸಲಾಗಿದ್ದ 52 ವರ್ಷದ ಡೆಪ್ಯುಟಿ ಸೂಪರಿಂಟೆಂಡೆಂಟ್ (Jail superintendent) ಸೋಮವಾರ ಬೆಳಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಹತ್ತಿರದ ಮೂಲಗಳು ತಿಳಿಸಿವೆ. ಕೂಡಲೇ ಜಿಮ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಉಪ ಪೊಲೀಸ್ ವರಿಷ್ಠಾಧಿಕಾರಿ ಜೋಗಿಂದರ್ ದೇಸ್ವಾಲ್ ಅವರು ಹರಿಯಾಣದ ಪಾಣಿಪತ್ ಜಿಲ್ಲಾ ಕಾರಾಗೃಹದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜೋಗಿಂದರ್ ದೇಸ್ವಾಲ್ ಸೋಮವಾರ ಬೆಳಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಜಿಮ್ ಮಾಡುವಾಗ ಇದ್ದಕ್ಕಿದ್ದ ಹಾಗೆ ನೆಲಕ್ಕೆ ಬಿದ್ದಿದ್ದಾರೆ. ಸ್ಥಳದಲ್ಲಿ ಸಹೋದ್ಯೋಗಿಗಳು ತಮ್ಮ ಪೊಲೀಸ್ ಅಧಿಕಾರಿಯನ್ನು ಕರ್ನಾಲ್‌ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.
पानीपत की जेल के DSP का निधन…
पानीपत में गांव सिवाह स्थित जेल के DSP जोगिंद्र देशवाल का निधन, करनाल स्थित अपने घर पर थे, संदिग्ध परिस्थितियों में उनका हार्ट फेल हो गया, घटना सुबह 5 बजे की है, जब वे जिम में एक्ससाइज कर रहे थे, इसी दौरान उन्हें हार्ट अटैक आया और वे नीचे गिर गए। pic.twitter.com/7QLNfpFy8A
— Gaurav Kumar (@gaurav1307kumar) October 23, 2023
ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಜೋಗಿಂದರ್ ದೇಸ್ವಾಲ್ ಮೃತಪಟ್ಟಿದ್ದಾರೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜೋಗಿಂದರ್ ದೇಸ್ವಾಲ್ ಅವರು ಕರ್ನಾಲ್‌ನ ನ್ಯಾಯಪುರಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
Also Read: ನದಿಗೆ ಕಾರು ಉರುಳಿ, ಕರ್ನಾಟಕದ ಇಬ್ಬರು ಸೇರಿ ಒಟ್ಟು 6 ಮಂದಿ ಸಾವು
ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು ಇದೇ ಮೊದಲಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದಾಗ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಆಗಸ್ಟ್‌ನಲ್ಲಿಯೂ ಸಹ, ಒಬ್ಬ ವ್ಯಕ್ತಿಯು ಒಳಾಂಗಣ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:51 am, Wed, 25 October 23