Egg yolk: ಮೊಟ್ಟೆಯ ಹಳದಿ ಲೋಳೆ ತಿನ್ನುವುದು ದೇಹಕ್ಕೆ ಹಾನಿಕಾರಕವೇ? ತಜ್ಞರು ಹೇಳುವುದು ಹೀಗೆ

ತೂಕ ಹೆಚ್ಚಿಸಲು ಮೊಟ್ಟೆಯ ಹಳದಿ ಲೋಳೆ ಅಂದರೆ ಮೊಟ್ಟೆಯ ಹಳದಿ ಭಾಗವನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಮೊಟ್ಟೆಯ ಹಳದಿ ಲೋಳೆಯು ಆರೋಗ್ಯಕ್ಕೆ ಉತ್ತಮವೇ? ಎಂಬ ಪ್ರಶ್ನೆ ಇದೆ. ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

Egg yolk: ಮೊಟ್ಟೆಯ ಹಳದಿ ಲೋಳೆ ತಿನ್ನುವುದು ದೇಹಕ್ಕೆ ಹಾನಿಕಾರಕವೇ? ತಜ್ಞರು ಹೇಳುವುದು ಹೀಗೆ
ಮೊಟ್ಟೆಯ ಹಳದಿ ಲೋಳೆ (ಸಂಗ್ರಹ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Dec 16, 2022 | 5:59 AM

ಮೊಟ್ಟೆ (Eggs) ಒಂದು ಉತ್ತಮ ಆಹಾರವಾಗಿದ್ದು, ಇದರಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಅಂಶಗಳು ಕಂಡುಬರುತ್ತವೆ. NCBI ವರದಿ ಪ್ರಕಾರ, ಮೊಟ್ಟೆಯ ಪ್ರೋಟೀನ್ ಮಕ್ಕಳ ಎತ್ತರ ಹೆಚ್ಚಿಸಲು ಸಹಕಾರಿಯಾಗಿದೆ. ಇದು ಆಹಾರದ ಕಡುಬಯಕೆಗಳನ್ನು ನೀಗಿಸುತ್ತದೆ. ಸದ್ಯ ಜನರು ಅನೇಕ ರೀತಿಯಲ್ಲಿ ಮೊಟ್ಟೆಗಳನ್ನು ಸೇವಿಸುತ್ತಾರೆ. ತೂಕವನ್ನು ಕಳೆದುಕೊಳ್ಳುವವರು ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನುತ್ತಾರೆ, ಆದರೆ ತೂಕವನ್ನು ಹೆಚ್ಚಿಸಲು ಮೊಟ್ಟೆಯ ಹಳದಿ ಲೋಳೆ (Egg yolk)ಯನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಮೊಟ್ಟೆಯ ಹಳದಿ ಲೋಳೆಯು ನಮಗೆ ಆರೋಗ್ಯಕರವೇ ಅಥವಾ ಇಲ್ಲವೇ ಎಂಬ ಪ್ರಶ್ನೆಯೂ ಇದೆ. ಈ ನಿಮ್ಮ ಪ್ರಶ್ನೆಗೆ ತಜ್ಞರು ನೀಡಿದ ಉತ್ತರ ಇಲ್ಲಿದೆ.

ದೆಹಲಿಯ ಏಮ್ಸ್‌ನ ಡಾ. ಪ್ರಿಯಾಂಕಾ ಶೆರಾವತ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮೊಟ್ಟೆಯ ಹಳದಿ ಲೋಳೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊಟ್ಟೆಯ ಬಿಳಿ ಮತ್ತು ಹಳದಿ ಲೋಳೆ ಎರಡೂ ವಿಭಿನ್ನವಾಗಿದ್ದರೂ ಅವುಗಳ ಗುಣಲಕ್ಷಣಗಳು ಬಹುತೇಕ ಸಮಾನವಾಗಿವೆ ಎಂದು ಬರೆದಿದ್ದಾರೆ. ಮೊಟ್ಟೆಯ ಬಿಳಿಭಾಗದಂತೆಯೇ ಮೊಟ್ಟೆಯ ಹಳದಿ ಲೋಳೆಯನ್ನು ತಿನ್ನುವುದು ಕೂಡ ಆರೋಗ್ಯಕರ ಎನ್ನುತ್ತಾರೆ. ಅವರ ಪ್ರಕಾರ, ಇದು ವಿಟಮಿನ್ ಎ, ಇ, ಕೆ ಮತ್ತು ಆರೋಗ್ಯಕರ ಕೊಬ್ಬಿನಾಮ್ಲ ಒಮೆಗಾ -3 ಅನ್ನು ಹೊಂದಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಮೀನು ತಿಂದ ಬಳಿಕ ಹಾಲು ಕುಡಿದರೆ ದೇಹದಲ್ಲಿ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆಯೇ, ಸತ್ಯ ಏನು?

ಮೊಟ್ಟೆಯ ಹಳದಿ ಲೋಳೆಯಲ್ಲಿ ಸೆಲೆನಿಯಮ್ ಕಂಡು ಬರುತ್ತದೆ. ಇದು ಪೋಷಕಾಂಶವಾಗಿದ್ದು, ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಥೈರಾಯ್ಡ್ ಆರೋಗ್ಯವನ್ನು ಸಹ ಸೆಲೆನಿಯಂನಿಂದ ನಿರ್ವಹಿಸಲಾಗುತ್ತದೆ. ದೇಹದಲ್ಲಿ ಅದರ ಕೊರತೆಯನ್ನು ಅನುಭವಿಸಿದರೆ ಈ ಸ್ಥಿತಿಯಲ್ಲಿ ವಾಕರಿಕೆ, ವಾಂತಿ ಮತ್ತು ತಲೆನೋವು ಪ್ರಾರಂಭವಾಗುತ್ತದೆ. ಒಂದು ಮೊಟ್ಟೆಯಲ್ಲಿ 55 ಕ್ಯಾಲೋರಿಗಳು, 2.5 ಗ್ರಾಂ ಪ್ರೋಟೀನ್, 4.5 ಗ್ರಾಂ ಕೊಬ್ಬು ಮತ್ತು 0.61 ಕಾರ್ಬೋಹೈಡ್ರೇಟ್‌ಗಳಿವೆ.

ಯಾವ ರೀತಿ ಮೊಟ್ಟೆಯ ಹಳದಿ ಭಾಗವನ್ನು ತಿನ್ನಬಹುದು?

ಮೊಟ್ಟೆಯ ಹಳದಿ ಭಾಗವನ್ನು ತಿನ್ನಲು ಉತ್ತಮ ಮಾರ್ಗವೆಂದರೆ ಅದನ್ನು ಕುದಿಸುವುದು. ಆದರೆ ನೀವು ಅರ್ಧ ಫ್ರೈ ರೀತಿಯ ಭಕ್ಷ್ಯವನ್ನು ತಿನ್ನಬಹುದು. ಜಿಮ್ ಅಥವಾ ವ್ಯಾಯಾಮವನ್ನು ಅನುಸರಿಸುವವರಿಗೆ ಹಾಲಿನೊಂದಿಗೆ ಹಸಿ ಮೊಟ್ಟೆಯನ್ನು ಬೆರೆಸಿ ಕುಡಿಯಲು ಸಲಹೆ ನೀಡಲಾಗುತ್ತದೆ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ