Diabetes: ಆಸ್ಪಿರಿನ್‌ ಔಷಧವು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು; ಸಂಶೋಧನೆ

|

Updated on: Sep 03, 2023 | 11:20 AM

ವಯಸ್ಸಾದಂತೆ ಮಧುಮೇಹದ ಅಪಾಯವು ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಆಸ್ಪಿರಿನ್ ಸೇವನೆಯು ವಯಸ್ಕರಲ್ಲಿ ಮಧುಮೇಹ ದೀರ್ಘಕಾಲದ ಸ್ಥಿತಿಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಸೂಚಿಸಿವೆ. ಆಸ್ಪಿರಿನ್‌ ಮಧುಮೇಹದ ಅಪಾಯವನ್ನು ಹೇಗೆ ಕಡಿಮೆ ಮಾಡುತ್ತದೆ ? ಮತ್ತು ಇದರ ಮಿತಿಮೀರಿದ ಸೇವನೆಯ ಅಡ್ಡಪರಿಣಾಮಗಳೇನು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

Diabetes: ಆಸ್ಪಿರಿನ್‌ ಔಷಧವು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು; ಸಂಶೋಧನೆ
ಸಾಂದರ್ಭಿಕ ಚಿತ್ರ
Image Credit source: Getty Images
Follow us on

ಮಧುಮೇಹ, ಅದರಲ್ಲೂ ಟೈಪ್-2 ಡಯಾಬಿಟೀಸ್, ಸದ್ಯಕ್ಕೆ ಜಗತ್ತಿನಲ್ಲಿರುವ ಸಾಮಾನ್ಯ ಜೀವನಶೈಲಿ ಅಸ್ವಸ್ಥತೆಗಳಲ್ಲಿ ಒಂದಾಗಿದೆ. ಈ ಸ್ಥಿತಿಯು ಇನ್ಸುಲಿನ್ ಪ್ರತಿರೋಧ, ಕೊರತೆ ಅಥವಾ ಅತಿಯಾದ ಉತ್ಪಾದನೆಯಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯ ಮಟ್ಟವು ಯೋಚಿಸುವುದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಸೋಂಕುಗಳಿಂದ ಹಿಡಿದು ಕುರುಡುತನದವರೆಗೆ ಕೈಕಾಲು ಕತ್ತರಿಸುವವರೆಗೆ, ಹೆಚ್ಚಿನ ಹಾನಿಯನ್ನು ಉಂಟುಮಾಡಬಹುದು. ಆದರೆ ಆಸ್ಪಿರಿನ್ ಔಷಧವು ಅದರ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಂಶೋಧನೆಯಿಂದ ಕಂಡು ಕೊಂಡಿದ್ದಾರೆ.

ಆಸ್ಪಿರಿನ್‌ ಮಧುಮೇಹದ ಅಪಾಯವನ್ನು ಹೇಗೆ ಕಡಿಮೆ ಮಾಡುತ್ತದೆ ?

ವಯಸ್ಸಾದಂತೆ ಮಧುಮೇಹದ ಅಪಾಯವು ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ನಿರೂಪಿಸಲ್ಪಟ್ಟ ಸ್ಥಿತಿಯೊಂದಿಗೆ ಬದುಕುವ ಸಾಧ್ಯತೆಯಿದೆ ಎಂದು ಡಯಾಬಿಟಿಸ್ ಯುಕೆ ಹೇಳುತ್ತದೆ. ಆದರೆ ಆಸ್ಪಿರಿನ್ ಸೇವನೆಯು ವಯಸ್ಸಾದವರಲ್ಲಿ ದೀರ್ಘಕಾಲದ ಸ್ಥಿತಿಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಸೂಚಿಸಿವೆ.

65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಕಡಿಮೆ ಪ್ರಮಾಣದ ಆಸ್ಪಿರಿನ್ ಸೇವನೆ ಟೈಪ್ -2 ಮಧುಮೇಹದ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 2018 ರಲ್ಲಿ ನಡೆಸಲಾದ ಅಧ್ಯಯನವೊಂದರ ಪ್ರಕಾರ, ಸಂಶೋಧಕರು 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರನ್ನು ಸಂಶೋಧನೆ ಒಳಪಡಿಸಿದ್ದರು. ಅಧ್ಯಯನದಲ್ಲಿ ಭಾಗಿಯಾದವರಿಗೆ ಪ್ರತಿದಿನ ಪ್ಲಸೀಬೊ ಅಥವಾ ಆಸ್ಪಿರಿನ್ ಅನ್ನು ಸಣ್ಣ ಪ್ರಮಾಣದಲ್ಲಿ ನೀಡಲಾಯಿತು.  4 ವರ್ಷಗಳಲ್ಲಿ 995 ಮಧುಮೇಹ ಪ್ರಕರಣಗಳು ದಾಖಲಾಗಿವೆ ಮತ್ತು ಪ್ಲಸೀಬೊ ಗುಂಪಿಗೆ ಹೋಲಿಸಿದರೆ, ಆಸ್ಪಿರಿನ್ ಬಳಕೆದಾರರ ಮಧುಮೇಹದ ಅಪಾಯವು 15 ಪ್ರತಿಶತ ಕಡಿಮೆಯಾಗಿದೆ ಎಂದು ಗಮನಿಸಲಾಗಿದೆ.

ಇದನ್ನೂ ಓದಿ: ಆಸ್ಪಿರಿನ್ ಮಾತ್ರೆ ಸೇವನೆಯು ಹೊಟ್ಟೆಯಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು; ತಜ್ಞರು ಹೇಳವುದೇನು?

ಆಸ್ಪಿರಿನ್ ಮಿತಿಮೀರಿದ ಸೇವನೆಯ ಅಡ್ಡಪರಿಣಾಮಗಳು:

ಸಂಶೋಧಕರ ಪ್ರಕಾರ, ಆಸ್ಪಿರಿನ್ನ ಮಿತಿಮೀರಿದ ಸೇವನೆಯು ಹಲವಾರು ಆರೋಗ್ಯ ಅಪಾಯಗಳನ್ನು ಹೊಂದಿರಬಹುದು.ಜಠರಗರುಳಿನ ಸಮಸ್ಯೆಗಳು, ಹೃದಯಾಘಾತ ಮತ್ತು ಆಂತರಿಕ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಆಸ್ಪಿರಿನ್ ಅನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಶಿಫಾರಸು ಮಾಡುವುದಿಲ್ಲ. ಈ ಮಾತ್ರೆಯನ್ನು ಊಟದ ನಂತರ ಸೇವಿಸಬೇಕು. ಇದಲ್ಲದೆ, ಡೋಸ್‌ನಿಂದ ರಕ್ತಸ್ರಾವ ಸಂಭವಿಸಿದರೆ ರೋಗಿಯು ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದು ಡಾ. ಸುರಂಜಿತ್ ಚಟರ್ಜಿ ಅವರು ಸಲಹೆ ನೀಡಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: