ಆಸ್ಪಿರಿನ್ ಮಾತ್ರೆ ಸೇವನೆಯು ಹೊಟ್ಟೆಯಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು; ತಜ್ಞರು ಹೇಳವುದೇನು?
ಹೃದಯ ಸಮಸ್ಯೆ ಅಥವಾ ಪಾರ್ಶ್ವವಾಯು ಹೊಂದಿರುವ ವ್ಯಕ್ತಿಗೆ ಆಸ್ಪಿರಿನ್ ಅತ್ಯಗತ್ಯವಾಗಿದೆ. ಆದರೆ ಈ ಆಸ್ಪಿರಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆರೋಗ್ಯದ ಅಪಾಯ ಎದುರಾಗುತ್ತದೆ ಎಂದು ಡಾ. ಸುರಂಜಿತ್ ಚಟರ್ಜಿ ಹೇಳುತ್ತಾರೆ.
ವೈದ್ಯರೆಂದರೆ ದೇವರ ಸ್ವರೂಪ ಎಂದೂ ಹೇಳಲಾಗುತ್ತದೆ. ಹೀಗಾಗಿ ಜನರು ಅಥವಾ ರೋಗಿಯು ವೈದ್ಯರು ಸೂಚಿಸುವ ಔಷಧಿಯನ್ನು ನಂಬುತ್ತಾರೆ. ಅಂದಹಾಗೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಆಸ್ಪಿರಿನ್ ಮಾತ್ರೆ (Aspirin tablet) ವಿಶ್ವದಲ್ಲೇ ಹೆಚ್ಚು ಬಳಸುವ ಔಷಧಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಹೃದಯಾಘಾತ, ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಪಾರ್ಶ್ವವಾಯು ಮತ್ತು ಇತರ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಹೃದಯರಕ್ತನಾಳದ ಸಮಸ್ಯೆಗಳಿರುವ ರೋಗಿಗಳಿಗೆ ಪ್ರಪಂಚದಾದ್ಯಂತದ ವೈದ್ಯರು ಮತ್ತು ಆರೋಗ್ಯ ವೈದ್ಯರು ಆಸ್ಪಿರಿನ್ ಅನ್ನು ಶಿಫಾರಸು ಮಾಡುತ್ತಾರೆ. ಆದರೆ ಇದರ ಸೇವನೆಯಿಂದ ಜಠರಗರುಳಿನಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು.
ಹಿಂದಿನ ಹಲವಾರು ಅಧ್ಯಯನಗಳು ಹೆಲಿಕೋಬ್ಯಾಕ್ಟರ್ ಪೈಲೋರಿ (ಒಂದು ರೀತಿಯ ಬ್ಯಾಕ್ಟೀರಿಯಾ) ಹೊಟ್ಟೆಯಲ್ಲಿ ಪೆಪ್ಟಿಕ್ ಹುಣ್ಣುಗಳನ್ನು ಉಂಟುಮಾಡುತ್ತದೆ ಎಂದು ತೋರಿಸಿವೆ. ಪ್ರತಿದಿನ ಆಸ್ಪಿರಿನ್ ತೆಗೆದುಕೊಳ್ಳುವ ಜನರ ದೇಹದಲ್ಲಿ ಈ ಬ್ಯಾಕ್ಟೀರಿಯಾ ಕಂಡುಬರುತ್ತದೆ. ವೈದ್ಯರು ಮತ್ತು ಆರೋಗ್ಯ ತಜ್ಞರ ಪ್ರಕಾರ, ಈ ಬ್ಯಾಕ್ಟೀರಿಯಾದ ಸೋಂಕಿನಿಂದ ಹೊಟ್ಟೆ ಹುಣ್ಣು ಉಂಟಾಗುತ್ತದೆ.
ಇದನ್ನೂ ಓದಿ: Zika virus: ಏನಿದು ಝಿಕಾ ವೈರಸ್? ಭಾರತದಲ್ಲಿ ಇದರ ತೀವ್ರತೆ ಎಷ್ಟಿದೆ?
ಆಸ್ಪಿರಿನ್ ಸೇವನೆಯಿಂದ ಹೊಟ್ಟೆಯಲ್ಲಿ ರಕ್ತಸ್ರಾವ
ಆಸ್ಪಿರಿನ್ ಮಾತ್ರೆಗಳು ಹೊಟ್ಟೆಯಲ್ಲಿ ರಕ್ತಸ್ರಾವವನ್ನು ಉಂಟುಮಾಡಬಹುದು, ಇದು ಸಾಮಾನ್ಯವಾಗಿ ಪರಿಗಣಿಸಲಾದ ಪ್ರಮುಖ ಅಡ್ಡ ಪರಿಣಾಮವಾಗಿದೆ. ಈ ಔಷಧಿಯನ್ನು ಶಿಫಾರಸು ಮಾಡುವ ವೈದ್ಯರು ಯಾವಾಗಲೂ ಅದರ ಪ್ರಯೋಜನದ ಅನುಪಾತಕ್ಕೆ ಆದ್ಯತೆ ನೀಡಬೇಕು, ಏಕೆಂದರೆ ಕಡಿಮೆ ಪ್ರಮಾಣವು ಹೊಟ್ಟೆಯ ಹಾನಿಗೆ ಕಾರಣವಾಗಬಹುದು, ಇದು ಹುಣ್ಣುಗಳು ಅಥವಾ ಜಠರಗರುಳಿನ ರಕ್ತಸ್ರಾವಕ್ಕೆ ಕಾರಣವಾಗಬಹುದು ಎಂದು ದೆಹಲಿಯ ಅಪೋಲೋ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಡಾ.ಸುರಂಜಿತ್ ಚಟರ್ಜಿ ಅವರು News9ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Radish: ನೀವು ಮೂಲಂಗಿ ಬಳಸಿದ ಪದಾರ್ಥ ತಿಂದ ಬಳಿಕ ಹಾಲು ಕುಡಿಯಬೇಡಿ, ಈ ಸಮಸ್ಯೆಗಳು ಉಂಟಾಗಬಹುದು
ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕು ಎಂದರೇನು?
“ಆಸ್ಪಿರಿನ್ ಮಾತ್ರೆಗಳ ನಿರಂತರ ಸೇವೆಯು ಅಪಾಯಗಳನ್ನು ತಂದೊಡ್ಡಬಹುದು. ಈ ಮಾತ್ರೆಗಳನ್ನು ಸರಿಯಾದ ಸಮಾಲೋಚನೆಯೊಂದಿಗೆ ವೈದ್ಯರು ಹೃದ್ರೋಗಿಗಳಿಗೆ ಶಿಫಾರಸು ಮಾಡುತ್ತಾರೆ. ಹೃದಯ ಸಮಸ್ಯೆ ಅಥವಾ ಪಾರ್ಶ್ವವಾಯು ಹೊಂದಿರುವ ವ್ಯಕ್ತಿಗೆ ಆಸ್ಪಿರಿನ್ ಅತ್ಯಗತ್ಯವಾಗಿದೆ. ಏಕೆಂದರೆ ಇದು ರಕ್ತದ ಸ್ನಿಗ್ಧತೆಗೆ ಸಹಾಯ ಮಾಡುತ್ತದೆ” ಎಂದು ಡಾ. ಸುರಂಜಿತ್ ಅವರು ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕಿನ ಬಗ್ಗೆ ವಿವರಿಸಿದರು. ಇದು ಅಲ್ಸರ್ ಅಥವಾ ಗ್ಯಾಸ್ಟ್ರಿಕ್ ಉರಿಯೂತವನ್ನು ಉಂಟುಮಾಡುವ ಬ್ಯಾಕ್ಟೀರಿಯಾವಾಗಿದೆ. ಇದು ಹೊಟ್ಟೆಯಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು ಎಂದರು.
ಹೊಟ್ಟೆಯಲ್ಲಿ ರಕ್ತಸ್ರಾವವನ್ನು ನಿಲ್ಲಿಸುವ ಮಾರ್ಗಗಳು
ಆಸ್ಪಿರಿನ್ ಅನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಶಿಫಾರಸು ಮಾಡುವುದಿಲ್ಲ. ಈ ಮಾತ್ರೆಯನ್ನು ಊಟದ ನಂತರ ಸೇವಿಸಬೇಕು. ಇದಲ್ಲದೆ, ಡೋಸ್‌ನಿಂದ ರಕ್ತಸ್ರಾವ ಸಂಭವಿಸಿದರೆ ರೋಗಿಯು ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದು ಡಾ. ಸುರಂಜಿತ್ ಅವರು ಸಲಹೆ ನೀಡಿದ್ದಾರೆ.
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ