Periods Pain: ಚಳಿಗಾಲದಲ್ಲಿ ಮುಟ್ಟಿನ ಸಮಯದಲ್ಲಿ ಅತಿಯಾದ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದೀರಾ?
ಚಳಿಗಾಲದಲ್ಲಿ ವಾತಾವರಣವು ತುಂಬಾ ತಂಪಾಗಿರುವುದರಿಂದ ನಿಮ್ಮ ದೇಹವು ತಂಪಾಗಿರುತ್ತದೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಪ್ರದೇಶಗಳಲ್ಲಿ ನೋವು ಸ್ವಲ್ಪ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಮುಟ್ಟಿನ ಸಮಯ(Menstrual cycle) ದಲ್ಲಿ ಕೆಳ ಬೆನ್ನು, ತೊಡೆಗಳು ಮತ್ತು ಹೊಟ್ಟೆಯ ಪ್ರದೇಶಗಳಲ್ಲಿ ನೋವು, ಹೊಟ್ಟೆ ಉಬ್ಬರ, ಕಿಬ್ಬೊಟ್ಟೆ ನೋವುಗಳು ಕಾಣಿಸಿಕೊಳ್ಳುವುದು ಸಹಜ. ಕೆಲವರಲ್ಲಿ ತಲೆನೋವು, ವಾಂತಿ, ವಾಕರಿಕೆ, ತಲೆನೋವು, ಜೀರ್ಣಕಾರಿ ಸಮಸ್ಯೆಗಳು ಕೂಡ ಕಂಡುಬರುತ್ತದೆ. ಋತುಸ್ರಾವದ ಸಮಯದಲ್ಲಿ ನಿಮ್ಮ ದೇಹದಲ್ಲಿನ ಹಾರ್ಮೋನ್ ಗಳಿಂದ ಉಂಟಾಗುವ ಏರಿಳಿತಗಳು ಕಿರಿಕಿರಿ ಅನುಭವವನ್ನು ಉಂಟುಮಾಡುತ್ತದೆ. ಪ್ರತಿ ತಿಂಗಳು ವೈದ್ಯರನ್ನು ಸಂರ್ಪಕಿಸುವುದಕ್ಕಿಂತ ಮನೆಯಲ್ಲಿಯೇ ದೊರೆಯುವ ಅದ್ಭುತವಾದ ಪರ್ದಾಥಗಳಿಂದ ವಿಶೇಷವಾಗಿ ಚಳಿಗಾಲದಲ್ಲಿನ ಕಿಬ್ಬೊಟ್ಟೆಯ ಸೆಳೆತ ಹಾಗೂ ನೋವುಗಳನ್ನು ಶಮನ ಮಾಡಿಕೊಳ್ಳಬಹುದು. ಹಾಗಿದ್ದರೇ ಈ ಕೆಳಗಿನ ಸಲಹೆಗಳನ್ನು ಪಾಲಿಸಿ.
1. ಮಸಾಲೆಯುಕ್ತ ಚಹಾ:
ನೀವು ನುಣ್ಣಗೆ ತುರಿದ ಶುಂಠಿ, ದಾಲ್ಚಿನ್ನಿ ಪುಡಿ ಅಥವಾ ತುಂಡುಗಳು, ಪುಡಿಮಾಡಿದ ಕರಿಮೆಣಸು ಮತ್ತು ಇತರ ಮಸಾಲೆಗಳನ್ನು ನೀರಿನಲ್ಲಿ ಸೇರಿಸಿ ಮತ್ತು ಅವುಗಳನ್ನು ಕುದಿಸಿ. ಇದು ನಿಮಗೆ ಚಳಿಗಾಲದಲ್ಲಿ ಸಾಕಷ್ಟು ವಿಶ್ರಾಂತಿಯ ಅನುಭವ ನೀಡುತ್ತದೆ. ನಿಮ್ಮ ಕಿಬ್ಬೊಟ್ಟೆಯ ಸಮಸ್ಯೆಗೆ ಒಂದು ಒಳ್ಳೆಯ ಪರಿಹಾರವಾಗಿದೆ.
2. ಸುಲಭವಾದ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ:
ಮುಟ್ಟಿನ ಸಮಯದಲ್ಲಿ ನಿಮಗೆ ವಿಶ್ರಾಂತಿಯು ಅಗತ್ಯವಾಗಿರುವುದರಿಂದ ವ್ಯಾಯಮದಲ್ಲಿ ತೊಡಗಿಸಿಕೊಳ್ಳುವುದು ಅಸಾಧ್ಯ ಎಂದು ನೀವು ಭಾವಿಸಬಹುದು. ಆದರೆ ಕೆಲವೊಂದು ಕಷ್ಟಕರವಲ್ಲದ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಮುಟ್ಟಿನ ಸಮಯದಲ್ಲಿ ಗರ್ಭಾಶಯದ ಸ್ನಾಯುಗಳ ಬೆಳವಣಿಗೆ ಹಾಗೂ ಉತ್ತಮವಾಗಿ ಕಾರ್ಯ ನಿರ್ವಹಿಸುವಲ್ಲಿ ಸಹಕಾರಿಯಾಗಿದೆ.
3.ಅಕ್ಯುಪಂಕ್ಚರ್ ಚಿಕಿತ್ಸೆ:
ಮುಟ್ಟಿನ ಸೆಳೆತಕ್ಕೆ ಚಿಕಿತ್ಸೆ ನೀಡಲು ಅಕ್ಯುಪಂಕ್ಚರ್ ಪರಿಣಾಮಕಾರಿ ಎಂದು ಸಂಶೋಧನೆಯಿಂದ ಸಾಬೀತಾಗಿದೆ. ಮುಟ್ಟಿನ ಸೆಳೆತದ ತೀವ್ರತೆಯನ್ನು ಮತ್ತು ನೋವು ಅನುಭವಿಸುವ ಸಮಯವನ್ನು ಈ ಚಿಕಿತ್ಸೆಯು ಒಂದು ಉತ್ತಮ ಪರಿಹಾರವಾಗಿದೆ ಎಂದು ಸಂಶೋಧನೆಗಳು ತಿಳಿಸುತ್ತದೆ.
4. ಕಿತ್ತಳೆ ಹಣ್ಣು:
ಅಧ್ಯಯನಗಳ ಪ್ರಕಾರ, ಹೆಚ್ಚು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವಂತಹ ಆಹಾರಗಳನ್ನು ಸೇವಿಸುವ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಹೆಚ್ಚಿನ ಸ್ನಾಯು ಸೆಳೆತದ ನೋವಿನ ಲಕ್ಷಣಗಳು ಇರುವುದಿಲ್ಲ ಎಂದು ತಿಳಿದು ಬಂದಿದೆ. ಜೊತೆಗೆ ಇದರಲ್ಲಿನ ಹುಳಿಯ ಅಂಶವು ನಿಮ್ಮನ್ನು ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿ ಇಡಲು ಸಹಕರಿಸುತ್ತದೆ. ಜೊತೆಗೆ ಚಳಿಗಾಲದಲ್ಲಿ ಕಿತ್ತಳೆ ಹಣ್ಣಿನ ಸೇವನೆ ಆರೋಗ್ಯಕ್ಕೂ ಒಳ್ಳೆಯದು.
5. ಮಸಾಜ್ ಮಾಡಿ:
ಚಳಿಗಾಲದಲ್ಲಿ ವಾತಾವರಣವು ತುಂಬಾ ತಂಪಾಗಿರುವುದರಿಂದ ನಿಮಗೆ ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಪ್ರದೇಶಗಳಲ್ಲಿ ನೋವು ಸ್ವಲ್ಪ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಿಮ್ಮ ಕಿಬ್ಬೊಟ್ಟೆ, ಹೊಟ್ಟೆಯ ಪ್ರದೇಶಗಳಿಗೆ ಮಸಾಜ್ ಮಾಡುವುದು ನೋವನ್ನು ಶಮಸ ಮಾಡಲು ಸಾಹಾಯಕವಾಗಿದೆ. ಬಿಸಿ ನೀರು ಅಥವಾ ಹಾಟ್ ಬ್ಯಾಗ್ ನ್ನು ನಿಮ್ಮ ಹೊಟ್ಟೆಯ ಮೇಲೆ ಇಟ್ಟು ಕೆಲ ಹೊತ್ತುಗಳ ಕಾಲ ವಿಶ್ರಾಂತಿಯನ್ನು ಪಡೆಯಿರಿ. ಇದಲ್ಲದೇ ತೆಂಗಿನ ಎಣ್ಣೆ, ಬಾಡಿ ಲೋಷನ್ ಅಥವಾ ಮಸಾಜ್ ಎಣ್ಣೆಯನ್ನು ನಿಧಾನವಾಗಿ ಮಸಾಜ್ ಮಾಡಬಹುದು.
ಇದನ್ನು ಓದಿ: ವ್ಯಾಯಾಮದ ಮೂಲಕ ಕ್ಯಾನ್ಸರ್ಗೆ ಹೇಳಿ ಗುಡ್ ಬೈ..!
6. ಹಾಲು ಕುಡಿಯಿರಿ: ಮುಟ್ಟಿನ ಸಮಯದಲ್ಲಿ ಸೆಳೆತವನ್ನು ಕಡಿಮೆ ಮಾಡಲು ಹಾಲು ಕುಡಿಯುವುದು ಒಂದು ಉತ್ತಮ ಆಯ್ಕೆಯಾಗಿದೆ. ಇದು ನೋವನ್ನು ಗುಣ ಪಡಿಸಲು ಸಹಕಾರಿಯಾಗಿದೆ. ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ನಿಮ್ಮ ದೇಹದಲ್ಲಿನ ಯಾವುದೇ ರೋಗ ಲಕ್ಷಣವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: