AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Peanuts Side Effects: ಚಳಿಗಾಲದಲ್ಲಿ ಕಡಲೆಕಾಯಿ ತಿಂದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ

ಚಳಿಗಾಲ(Winter)ದಲ್ಲಿ ಎಲ್ಲರೂ ಸಾಮಾನ್ಯವಾಗಿ ಬಿಸಿಬಿಸಿಯಾದ್ದನ್ನು ತಿನ್ನಲು, ಕುಡಿಯಲು ಇಷ್ಟಪಡುತ್ತಾರೆ. ಅದರಲ್ಲಿ ಕಡಲೆಕಾಯಿ ಕೂಡ ಒಂದು. ಕಡಲೆಕಾಯಿಯು ಅನೇಕ ಪೌಷ್ಟಿಕಾಂಶವನ್ನು ಒಳಗೊಂಡಿದೆ.

Peanuts Side Effects: ಚಳಿಗಾಲದಲ್ಲಿ ಕಡಲೆಕಾಯಿ ತಿಂದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ
Peanuts
TV9 Web
| Edited By: |

Updated on: Dec 04, 2022 | 3:50 PM

Share

ಚಳಿಗಾಲ(Winter)ದಲ್ಲಿ ಎಲ್ಲರೂ ಸಾಮಾನ್ಯವಾಗಿ ಬಿಸಿಬಿಸಿಯಾದ್ದನ್ನು ತಿನ್ನಲು, ಕುಡಿಯಲು ಇಷ್ಟಪಡುತ್ತಾರೆ. ಅದರಲ್ಲಿ ಕಡಲೆಕಾಯಿ ಕೂಡ ಒಂದು. ಕಡಲೆಕಾಯಿಯು ಅನೇಕ ಪೌಷ್ಟಿಕಾಂಶವನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದರೆ ನಿಮಗೆ ಚಳಿಗಾಲದಲ್ಲಿ ದಿನವಿಡೀ ಕಡಲೆಕಾಯಿಯನ್ನು ಮಾತ್ರ ತಿನ್ನುವ ಅಭ್ಯಾಸವಿದೆಯೇ, ಹೌದು ಎಂದಾದರೆ, ನೀವು ತಕ್ಷಣ ಈ ಅಭ್ಯಾಸವನ್ನು ಬಿಡಬೇಕು.

ನೀವು ಒಂದೇ ಬಾರಿಗೆ ಅಗತ್ಯಕ್ಕಿಂತ ಹೆಚ್ಚು ಕಡಲೆಕಾಯಿಯನ್ನು ಸೇವಿಸಿದರೆ, ನಿಮಗೆ ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಬರಬಹುದು. ಉದಾಹರಣೆಗೆ ಉಬ್ಬುವುದು, ಅತಿಸಾರ ಮತ್ತು ಮಲಬದ್ಧತೆ. ಇದಲ್ಲದೇ ಶೇಂಗಾ ತಿನ್ನುವುದರಿಂದ ಪಾರ್ಶ್ವವಾಯು, ಹೃದಯಾಘಾತ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಬರಬಹುದು.

ಚಳಿಗಾಲದಲ್ಲಿ ಕಡಲೆಕಾಯಿ ತಿನ್ನುವ ಬಯಕೆ ನೀವು ದಿನಕ್ಕೆ ಒಂದು ಹಿಡಿ ಕಡಲೆಕಾಯಿಯನ್ನು ಮಾತ್ರ ತಿನ್ನಬೇಕು, ಕಡಲೆಕಾಯಿಯನ್ನು ತಿನ್ನಲು ಉತ್ತಮ ಸಮಯವೆಂದರೆ ಬೆಳಗ್ಗೆ ಹಾಗೂ ರಾತ್ರಿ. ನೀವು ಕಡಲೆಕಾಯಿಯನ್ನು ಅತಿಯಾಗಿ ಸೇವಿಸಿದರೆ, ದೇಹದಲ್ಲಿ ಅಲರ್ಜಿಯ ಸಮಸ್ಯೆಗಳು ಉಂಟಾಗಬಹುದು ಮತ್ತು ಮಲಬದ್ಧತೆ, ಅತಿಸಾರ ಮತ್ತು ಊತದ ಸಾಧ್ಯತೆಯೂ ಹೆಚ್ಚಾಗುತ್ತದೆ.

ಚಳಿಗಾಲದಲ್ಲಿ ಕುಳಿತು ಕಡಲೆಕಾಯಿ ತಿನ್ನುವುದಕ್ಕೂ ನಿಮ್ಮ ಹೆಚ್ಚುತ್ತಿರುವ ತೂಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನೀವು ಭಾವಿಸಿದರೆ ತಪ್ಪು. ಕನಿಷ್ಠ ಒಂದು ಹಿಡಿ ಕಡಲೆಕಾಯಿಯಲ್ಲಿ 170 ಕ್ಯಾಲೊರಿಗಳಿವೆ, ಆದ್ದರಿಂದ ದಿನದಲ್ಲಿ ಹೆಚ್ಚು ಕಡಲೆಕಾಯಿಯನ್ನು ಸೇವಿಸಬೇಡಿ.

ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಇರಬಹುದು ಅಂದಹಾಗೆ, ಕಡಲೆಕಾಯಿ ತುಂಬಾ ಅಗ್ಗದಲ್ಲಿ ಸಿಗುವ ಕಾರಣ, ಚಳಿಗಾಲಕ್ಕೆ ಒಳ್ಳೆಯದೇ ಆದರೂ ಅತಿಯಾಗಿ ತಿನ್ನಬೇಡಿ. ನಮ್ಮ ದೇಹದ ಅನೇಕ ಭಾಗಗಳಲ್ಲಿ ಅಲರ್ಜಿಯಂತಹ ಸಮಸ್ಯೆಗಳು ಕಾಡುತ್ತವೆ. ಇದಕ್ಕೆ ಕಾರಣ ಕಡಲೆಕಾಯಿಯೂ ಆಗಿರಬಹುದು.

ಏಕೆಂದರೆ ಕಡಲೆಕಾಯಿಯ ಪರಿಣಾಮವು ಬಿಸಿಯಾಗಿರುತ್ತದೆ. ನೀವು ದೇಹದಲ್ಲಿ ಇದೇ ರೀತಿಯ ಕೆಲವು ಚಿಹ್ನೆಗಳನ್ನು ಸಹ ನೋಡಿದರೆ, ಕಡಲೆಕಾಯಿಯನ್ನು ತಿನ್ನುವುದನ್ನು ತಕ್ಷಣವೇ ನಿಲ್ಲಿಸಿ. ಯಾವುದನ್ನಾದರೂ ಅತಿಯಾಗಿ ತಿನ್ನುವುದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್