ಹವಾಮಾನ ಬದಲಾವಣೆಯು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು; ಪೌಷ್ಟಿಕತಜ್ಞರ ಸಲಹೆಗಳು ಇಲ್ಲಿವೆ

|

Updated on: Jun 24, 2023 | 10:35 AM

ಬಿಸಿಲಿನ ಶಾಖದಿಂದ ಆರಾಮವನ್ನು ಪಡೆಯಲು ತಂಪು ಪಾನೀಯ ಉತ್ತಮ ಆಯ್ಕೆ ಎಂದು ನಿಮಗನಿಸಬಹುದು. ಆದರೆ ಹವಾಮಾನದ ತದ್ವಿರುದ್ಧವಾಗಿ, ಶಾಖದ ನಡುವೆ ತಂಪು ಪಾನೀಯಗಳನ್ನು ಕುಡಿಯುವುದು ಉಬ್ಬರಕ್ಕೆ ಕಾರಣವಾಗುತ್ತದೆ.

ಹವಾಮಾನ ಬದಲಾವಣೆಯು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು; ಪೌಷ್ಟಿಕತಜ್ಞರ ಸಲಹೆಗಳು ಇಲ್ಲಿವೆ
ಹೊಟ್ಟೆ ಉಬ್ಬರ
Follow us on

ಪ್ರಸ್ತುತ ಹವಾಮಾನದಲ್ಲಿ ಬಿಸಿಲು, ಮಳೆ, ಚಳಿ ಎಲ್ಲವನ್ನು ಒಟ್ಟಿಗೆ ಅನುಭವಿಸುತ್ತಿದ್ದೇವೆ. ಕೆಲವೊಮ್ಮೆ ಮಳೆಯ ವಾತಾವರಣ, ಕೆಲವೊಮ್ಮೆ ಬಿಸಿಲು ಹಾಗೆಯೇ ಚಳಿಯನ್ನು ಕಾಣಬಹುದು. ಹವಾಮಾನದ ಅನಿರೀಕ್ಷಿತ ಬದಲಾವಣೆ ಆರೋಗ್ಯ ಕೆಡಲು ಕಾರಣವಾಗಬಹುದು. ಉದಾಹರಣೆ ಹೊಟ್ಟೆಯುಬ್ಬರ, ಆಸಿಡಿಟಿ ಮುಂತಾದ ಸಮಸ್ಯೆಗಳು ನಿಮ್ಮಲ್ಲಿ ಈ ಸಮಯದಲ್ಲಿ ಕಂಡುಬರಬಹುದು. ಇಂತಹ ಸಮಸ್ಯೆಗೆ ಬಿಸಿ ನೀರು ಕುಡಿಯಿರಿ ಎಂದು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ. ಬಿಸಿ ಮತ್ತು ತಣ್ಣೀರು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ವಿವರ ಇಲ್ಲಿದೆ.

ತಂಪು ಪಾನೀಯಗಳು:

ಅತಿಯಾದ ಶಾಖದ ಹೊಡೆತದ ಸಮಯದಲ್ಲಿ ತಂಪು ಪಾನೀಯದತ್ತ ಒಲವು ತೋರಿಸುವುದು ಸಾಮಾನ್ಯವಾಗಿದೆ, ಏಕೆಂದರೆ ಬಿಸಿಲಿನ ಶಾಖದಿಂದ ಆರಾಮವನ್ನು ಪಡೆಯಲು ತಂಪು ಪಾನೀಯ ಉತ್ತಮ ಆಯ್ಕೆ ಎಂದು ನಿಮಗನಿಸಬಹುದು. ಆದರೆ ಹವಾಮಾನದ ತದ್ವಿರುದ್ಧವಾಗಿ, ಶಾಖದ ನಡುವೆ ತಂಪು ಪಾನೀಯಗಳನ್ನು ಸೇವನೆ ಉಬ್ಬರಕ್ಕೆ ಕಾರಣವಾಗುತ್ತದೆ.

ಉಬ್ಬರ ಚಿಕಿತ್ಸೆಗೆ ಅತ್ಯುತ್ತಮ ಪಾನೀಯ:

ಉಬ್ಬುವಿಕೆಯನ್ನು ಶಮನಗೊಳಿಸಲು ಗ್ರೀನ್ ಟೀ ಅಥವಾ ಬ್ಲ್ಯಾಕ್ ಟೀ ಕುಡಿಯುವುದು ಉತ್ತಮ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಅತಿಯಾದ ಬಿಸಿಲಿನ ಸಮಯದಲ್ಲಿ ಇದು ಅನೇಕರಿಗೆ ಇಷ್ಟವಾಗದಿದ್ದರೂ, ಪಾನೀಯಗಳಲ್ಲಿನ ಫ್ಲೇವನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕಗಳು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಬ್ಯ್ಲಾಕ್​​ ಟೀ ಮತ್ತು ಗ್ರೀನ್​​ ಟೀ ಕರುಳಿನಲ್ಲಿರುವ ಸೂಕ್ಷ್ಮಜೀವಿಯ ಮತ್ತು ಉಬ್ಬುವಿಕೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಶುಂಠಿ ಚಹಾವು ಅಜೀರ್ಣವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಅಜೀರ್ಣ ಉಬ್ಬುವಿಕೆಗೆ ಮೂಲ ಕಾರಣವಾಗಿದೆ.

ಇದನ್ನೂ ಓದಿ: ಹೆರಿಗೆಯ ನಂತರ ಸೂಕ್ತ ಚೇತರಿಕೆಗಾಗಿ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ

ಉಬ್ಬರಕ್ಕೆ ಸರಳ ಪರಿಹಾರಗಳು:

ಉಬ್ಬುವುದು ಚಿಕಿತ್ಸೆಗೆ ಸಂಬಂಧಿಸಿದಂತೆ, ಈ ಕೆಳಗಿನ ಸರಳ ಪರಿಹಾರಗಳು ಸಹಾಯ ಮಾಡಬಹುದು:

  • ನಾರಿನಂಶವಿರುವ ಆಹಾರಗಳನ್ನು ಸೇವಿಸಿ.
  • ದಿನವೂ ವ್ಯಾಯಾಮ ಮಾಡಿ.
  • ವಜ್ರಾಸನ ಅಭ್ಯಾಸ ಮಾಡಿ.
  • ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ತಿನ್ನಿರಿ.
  • ಆಹಾರವನ್ನು ಸರಿಯಾಗಿ ಜಗಿದು ತಿನ್ನಿ.
  • ಸಾಕಷ್ಟು ನೀರು ಕುಡಿಯಿರಿ.
  • ಫಿಡ್ಜ್​​​​ನಲ್ಲಿ ಇರಿಸಿದ ಪಾನೀಯಗಳನ್ನು ತಪ್ಪಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: