ಆಸಿಡಿಟಿ, ಮೈಗ್ರೇನ್, ವಾಕರಿಕೆ ಎಲ್ಲಾ ಸಮಸ್ಯೆಗಳಿಗೂ ಇಲ್ಲಿದೆ ಸಿಂಪಲ್ ಮನೆಮದ್ದು
ಕೆಫೀನ್ ಮುಕ್ತವಾಗಿರುವ ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಜೊತೆಗೆ ಆಸಿಡಿಟಿ, ಮೈಗ್ರೇನ್, ವಾಕರಿಕೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ ಎಂದು ಡಾ ಡಿಕ್ಸಾ ಭಾವಸರ್ ಸಲಹೆ ನೀಡಿದ್ದಾರೆ.
ಎಲ್ಲರೂ ಬೆಳಗಿನ ಕಪ್ ಕಾಫಿಯನ್ನು ಖಂಡಿತವಾಗಿ ಇಷ್ಟ ಪಡುತ್ತಾರೆ. ಆದರೆ ಕಾಫಿಯಲ್ಲಿನ ಕೆಫೀನ್ ನಿಮ್ಮ ಕರುಳಿನ ಆರೋಗ್ಯವನ್ನು ಕೆಡಿಸುತ್ತದೆ. ಜೊತೆಗೆ , ಇದು ಹೆಚ್ಚು ಹಾರ್ಮೋನ್ ಅಸಮತೋಲನ, ಉಬ್ಬುವುದು ಮತ್ತು ಮಲಬದ್ಧತೆ ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂದು ತಜ್ಞರು ತಿಳಿಸಿದ್ದಾರೆ. ಆದ್ದರಿಂದ ಕೆಫೀನ್ ಮುಕ್ತವಾಗಿರುವ ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಜೊತೆಗೆ ಆಸಿಡಿಟಿ, ಮೈಗ್ರೇನ್, ವಾಕರಿಕೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ ಎಂದು ಡಾ ಡಿಕ್ಸಾ ಭಾವಸರ್ ಸಲಹೆ ನೀಡಿದ್ದಾರೆ. ಕೆಫೇನ್ ಮುಕ್ತವಾಗಿರುವ ಚಹಾದ ಪಾಕ ವಿಧಾನ ಇಲ್ಲಿದೆ.
View this post on Instagram
ಇದನ್ನೂ ಓದಿ: ತೆಂಗಿನಕಾಯಿ ಮೊಳಕೆ: ನೀವು ಮುಂಗೆ ತಿನ್ನುತ್ತಿದ್ದೀರಾ? ಆರೋಗ್ಯ ಪ್ರಯೋಜನಗಳು ಹೀಗಿವೆ
ಕೆಫೇನ್ ಮುಕ್ತವಾಗಿರುವ ಚಹಾದ ಪಾಕ ವಿಧಾನ:
- 1 ಲೋಟ ನೀರು (300 ಮಿಲಿ)
- 15 ಕರಿಬೇವಿನ ಎಲೆ
- 15 ಪುದೀನಾ ಎಲೆಗಳು
- 1 ಚಮಚ ಸೋಂಪು
- 2 ಚಮಚ ಕೊತ್ತಂಬರಿ
ಈ ಮೇಲಿನ ಎಲ್ಲಾ ಪದಾರ್ಥಗಳನ್ನು ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ನಂತರ ಸೋಸಿಕೊಳ್ಳಿ. ಈ ಚಹಾವನ್ನು ನೀವು ಕುಡಿಯುವ ಕೆಫೇನ್ ಟೀ ಕಾಫಿ ಪರ್ಯಾಯವಾಗಿ ಕುಡಿಯಿರಿ. ಈ ಚಹಾವು ಆಸಿಡಿಟಿ, ಮೈಗ್ರೇನ್, ವಾಕರಿಕೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: