ಬೇಸಿಗೆಯಲ್ಲಿ ಮೈಗ್ರೇನ್ ಸಮಸ್ಯೆ ಹೆಚ್ಚಾಗಿದೆಯೇ? ತಜ್ಞರು ನೀಡಿರುವ ಸಲಹೆ ಪಾಲಿಸಿ

ಬೇಸಿಗೆಯಲ್ಲಿ ಮೈಗ್ರೇನ್​​​ ಸಮಸ್ಯೆ ಉಲ್ಬಣಗೊಳ್ಳಲು ಕಾರಣ ಮತ್ತು ಚಿಕಿತ್ಸೆಯ ಕುರಿತು ಆರೋಗ್ಯ ತಜ್ಞರಾದ ಡಾ ವಿಶಾಖಾ ಶಿವದಾಸನಿ ಮಾಹಿತಿ ನೀಡುತ್ತಾರೆ.

ಬೇಸಿಗೆಯಲ್ಲಿ ಮೈಗ್ರೇನ್ ಸಮಸ್ಯೆ ಹೆಚ್ಚಾಗಿದೆಯೇ? ತಜ್ಞರು ನೀಡಿರುವ ಸಲಹೆ ಪಾಲಿಸಿ
Migraines in summer, Image Credit source: TheHealthSite.com
Follow us
ಅಕ್ಷತಾ ವರ್ಕಾಡಿ
|

Updated on: May 19, 2023 | 6:37 AM

ಬೇಸಿಗೆಯಲ್ಲಿ ಸಾಕಷ್ಟು ಜನರಲ್ಲಿ ಹೆಚ್ಚಾಗಿ ಮೈಗ್ರೇನ್​​​ ಸಮಸ್ಯೆ ಕಂಡುಬರುತ್ತದೆ. ಇದು ಕೇವಲ ಸಮಸ್ಯೆಯಾಗಿರದೇ ನಿಮ್ಮ ದೈನಂದಿನ ದಿನಚರಿಯಲ್ಲಿ ಅಡ್ಡಿಯುಂಟು ಮಾಡುತ್ತದೆ. ಬೇಸಿಗೆಯಲ್ಲಿ ಮೈಗ್ರೇನ್​​​ ಸಮಸ್ಯೆ ಉಲ್ಬಣಗೊಳ್ಳಲು ಕಾರಣ ಮತ್ತು ಚಿಕಿತ್ಸೆಯ ಕುರಿತು ಆರೋಗ್ಯ ತಜ್ಞರಾದ ಡಾ ವಿಶಾಖಾ ಶಿವದಾಸನಿ ಮಾಹಿತಿ ನೀಡುತ್ತಾರೆ. ಸಾಮಾನ್ಯವಾಗಿ ತಲೆ ನೋವು ಎಂದಾಕ್ಷಣ ಈ ಮಾತ್ರೆಗಳನ್ನು ತೆಗೆದುಕೊಳ್ಳುವವರೇ ಹೆಚ್ಚು. ಆದರೆ ವಿಶೇಷವಾಗಿ ಬೇಸಿಗೆಯಲ್ಲಿ ಮಾತ್ರೆಗಳನ್ನು ಅತಿಯಾದ ತೆಗೆದುಕೊಳ್ಳುವ ಅಭ್ಯಾಸ ಬಿಟ್ಟು ಬಿಡಿ. ಬದಲಾಗಿ ಸಾಕಷ್ಟು ನೀರು ಕುಡಿಯಿರಿ ಎಂದು ತಜ್ಞರು ಸಲಹೆ ನೀಡುತ್ತಾರೆ. ನೀರಿನ ಜೊತೆಗೆ ಸ್ವಲ್ಪ ಉಪ್ಪು, ಸಕ್ಕರೆ ಹಾಗೂ ನಿಂಬೆ ರಸವನ್ನು ಸೇರಿಸಿ.

ನಿರ್ಜಲೀಕರಣ ಹಾಗೂ ಮೈಗ್ರೇನ್ ನಡುವಿನ ಸಂಬಂಧ ತಿಳಿದುಕೊಳ್ಳಿ:

ಬೇಸಿಗೆಯಲ್ಲಿ ನಿಮ್ಮ ದೇಹದಕ್ಕೆ ಹೆಚ್ಚು ನೀರು ಬೇಕಾಗಿರುವುದು ನೀವು ಕನಿಷ್ಟ ಪಕ್ಷ 2 ಲೀಟರ್​​ ನೀರು ಕುಡಿಯುವುದು ಅಗತ್ಯ. ನೀವು ನೀರು ಕಡಿಮೆ ಕುಡಿದಂತೆ ಅದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ನಿರ್ಜಲೀಕರಣವು ಮೈಗ್ರೇನ್‌ಗೆ ಕಾರಣವಾಗಬಹುದು ಏಕೆಂದರೆ ಇದು ಮೆದುಳಿಗೆ ಕಡಿಮೆ ರಕ್ತ ಪೂರೈಕೆಗೆ ಕಾರಣವಾಗುತ್ತದೆ, ರಕ್ತನಾಳಗಳು ಕಿರಿದಾಗಲು ಮತ್ತು ನಂತರ ವಿಸ್ತರಿಸಲು ಕಾರಣವಾಗುತ್ತದೆ, ಇದರ ಪರಿಣಾಮವಾಗಿ ತಲೆನೋವು ಮತ್ತು ಮೈಗ್ರೇನ್ ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಮೈಗ್ರೇನ್​​​​ಗೆ ಸಾಮಾನ್ಯ ಕಾರಣಗಳು:

  • ಒತ್ತಡ
  • ಹಾರ್ಮೋನ್ ಬದಲಾವಣೆಗಳು
  • ನಿದ್ರಾ ಭಂಗಿ
  • ಕೆಲವು ಆಹಾರಗಳು ಮತ್ತು ಪಾನೀಯಗಳು
  • ಕೆಫೀನ್
  •  ಹವಾಮಾನ ಬದಲಾವಣೆಗಳು
  • ಬೆಳಕು, ಧ್ವನಿ ಅಥವಾ ವಾಸನೆಗಳಿಗೆ ಸೂಕ್ಷ್ಮತೆ

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ, ಮಗುವಿನ ಜನನದ ನಂತರ ತಾಯಂದಿರಲ್ಲಿ ಕಾಣುವ ಅಪಾಯದ ಅಂಶ? ನಿವಾರಿಸಲು ಇಲ್ಲಿದೆ ಸಲಹೆ

ಮೈಗ್ರೇನ್ ಪ್ರಚೋದಕಗಳನ್ನು ತೊಡೆದುಹಾಕಲು ಅಥವಾ ಕಡಿಮೆ ಮಾಡಲು ಮಾರ್ಗಗಳು:

  • ನಿರ್ದಿಷ್ಟ ಆಹಾರ ಅಥವಾ ಪಾನೀಯ ಪ್ರಚೋದಕಗಳನ್ನು ಗುರುತಿಸುವುದು ಮತ್ತು ತಪ್ಪಿಸುವುದು.
  • ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ನಿರ್ವಹಿಸುವುದು.
  • ಧ್ಯಾನ ಅಥವಾ ಯೋಗದಂತಹ ಒತ್ತಡ ನಿರ್ವಹಣೆ ತಂತ್ರಗಳನ್ನು ಅಭ್ಯಾಸ ಮಾಡುವುದು
  • ಕೆಫೀನ್ ಸೇವನೆಯನ್ನು ಕಡಿಮೆ ಮಾಡುವುದು.

ಮೈಗ್ರೇನ್ ತಡೆಯಲು ಜೀವನಶೈಲಿಯ ಬದಲಾವಣೆಗಳು:

  • ರಕ್ತ ಪರಿಚಲನೆಯನ್ನು ಉತ್ತೇಜಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮ
  • ಮೆಗ್ನೀಸಿಯಮ್, ರೈಬೋಫ್ಲಾವಿನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವನೆ
  • ನಿದ್ರೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಮತ್ತು ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ನಿರ್ವಹಿಸುವುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು