Food Tips: ಬೇಸಿಗೆಯ ಆಹಾರ ಕ್ರಮದಲ್ಲಿ ಈ ಅಂಶವನ್ನು ಸೇರಿಸುವ ಮಾರ್ಗ ಇಲ್ಲಿದೆ

ಹೆಚ್ಚಿನ ಫೈಬರ್ ಅಂಶವಿರುವ ಆಹಾರಗಳು ತೂಕನಷ್ಟ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು, ಮಲಬದ್ಧತೆಯ ನಿವಾರಣೆ, ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನಮ್ಮ ದೈನಂದಿನ ಊಟದಲ್ಲಿ ಫೈಬರ್ ಅಂಶವನ್ನು ಒಳಗೊಂಡಿರುವ ಆಹಾರವನ್ನು ಸೇವಿಸುವುದು ಅತ್ಯಗತ್ಯ.

Food Tips: ಬೇಸಿಗೆಯ ಆಹಾರ ಕ್ರಮದಲ್ಲಿ ಈ ಅಂಶವನ್ನು ಸೇರಿಸುವ ಮಾರ್ಗ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: May 18, 2023 | 6:00 PM

ಇದು ಬೇಸಿಗೆಯ ಋತುವಿನ ಸಮಯ. ಈ ಸಮಯದಲ್ಲಿ ಉತ್ತಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುವ ಸಮತೋಲಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಆರೋಗ್ಯಕರ ಆಹಾರದ ಒಂದು ನಿರ್ಣಾಯಕ ಅಂಶವೆಂದರೆ ಅದು ಆಹಾರದಲ್ಲಿನ ಫೈಬರ್. ಫೈಬರ್ ಜೀರ್ಣಕ್ರಿಯೆಯನ್ನು ಬೆಂಬಲಿಸುವಲ್ಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ, ಹೃದಯದ ಆರೋಗ್ಯವನ್ನು ಉತ್ತೇಜಿಸುವಲ್ಲಿ, ಮತ್ತು ತೂಕ ನಿರ್ವಹಣೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಬೇಸಿಗೆಯಲ್ಲಿ ಸಿಗುವ ಕಾಲೋಚಿತ ಆಹಾಗಳೊಂದಿಗೆ, ನಿಮ್ಮ ಆಹಾರದಲ್ಲಿ ಫೈಬರ್ ನ್ನು ಸೇರಿಸುವುದು ಸುಲಭವಾಗಿದೆ. ನಾವು ಪ್ರತಿದಿನ ಸೇವಿಸುವ 1,000 ಕ್ಯಾಲೋರಿಗಳಿಗೆ ಸುಮಾರು 14 ಗ್ರಾಂ ಫೈಬರ್ ಅಂಶವನ್ನು ಸೇರಿಸುವಂತೆ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಅಕಾಡೆಮಿ ಶಿಫಾರಸು ಮಾಡುತ್ತದೆ.

ಬೇಸಿಗೆಯ ಆಹಾರ ಕ್ರಮದಲ್ಲಿ ಸಾಕಷ್ಟು ಫೈಬರ್ ನ್ನು ಸೇರಿಸುವ ಮಾರ್ಗ

ಬೇಸಿಗೆಯಲ್ಲಿ ಫೈಬರ್​​​ನ್ನು ಸೇರಿಸಲು ಒಂದು ಸುಲಭವಾದ ಮಾರ್ಗವೆಂದರೆ ಕಾಲೋಚಿತ ಹಣ್ಣುಗಳು. ಇನ್ನೊಂದು ಮಾರ್ಗವೆಂದರೆ ರೋಲ್ಡ್ ಓಟ್ಸ್, ಬಿಳಿ ಬ್ರೆಡ್ ಬದಲಿಗೆ ಸಂಪೂರ್ಣ ಗೋಧಿ ಬ್ರೆಡ್ ಹಾಗೂ ಬಿಳಿ ಅಕ್ಕಿ ಬದಲಿಗೆ ಬ್ರೌನ್ ರೈಸ್ ನ್ನು ಸೇವಿಸುವ ಮೂಲಕ ಫೈಬರ್ ಅಂಶವನ್ನು ಪಡೆದುಕೊಳ್ಳಬಹುದು’ ಎಂದು ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ಹಾಗೂ ಟ್ರೈನ್ಡ್ ಬೈ ವೈವಿಎಸ್ ನ ಸಂಸ್ಥಾಪಕರಾದ ಯಶ್ ವರ್ಧನ್ ಸ್ವಾಮಿ ಹೇಳಿದ್ದಾರೆ.

ಫೈಬರ್ ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದ್ದು, ಅದು ಜೀರ್ಣವಾಗುವುದಿಲ್ಲ ಮತ್ತು ದೇಹದಿಂದ ಹೊರಹಾಕಲ್ಪಡುತ್ತದೆ. ಇದು ದೇಹದಲ್ಲಿ ಹೆಚ್ಚುಕಾಲ ಉಳಿಯುತ್ತದೆ ಮತ್ತು ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶವನ್ನು ಸೇರಿಸುವುದರಿಂದ ಅದು ದೀರ್ಘ ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಹಣ್ಣುಗಳು, ತರಕಾರಿಗಳು, ಕಾಳುಗಳು, ಧಾನ್ಯಗಳು, ಬೀಜಗಳು ಇತ್ಯಾದಿಗಳು ನೈಸರ್ಗಿಕವಾಗಿ ಫೈಬರ್ ನಲ್ಲಿ ಸಮೃದ್ಧವಾಗಿದೆ ಎಂದು ಸೈಡ್ ಫಾಸ್ಟ್ ನ್ಯೂಟ್ರಿಷನ್ ನ ಸಂಸ್ಥಾಪಕ ಹಾಗೂ ಫಿಟ್ನೆಸ್ ನ್ಯೂಟ್ರಿಷನ್ ಸ್ಪೆಷಲಿಸ್ಟ್ ಅಮನ್ ಪುರಿ ಹೇಳುತ್ತಾರೆ.

ಇದನ್ನೂ ಓದಿ:Food Poisoning: ರಾತ್ರಿ ಮಿಕ್ಕಿರುವ ಅನ್ನವನ್ನು ಬೆಳಗ್ಗೆ ತಿನ್ನುವುದರಿಂದ ಯಾವ್ಯಾವ ಸಮಸ್ಯೆಯುಂಟಾಗಬಹುದು ಇಲ್ಲಿದೆ ಮಾಹಿತಿ

ಮತ್ತು ಅವರು ಹೇಳುತ್ತಾರೆ, ಪ್ರತಿದಿನ ನಮ್ಮ ಆಹಾರದಲ್ಲಿ ಒಂದು ಅಥವಾ ಎರಡು ಸ್ಥಳೀಯ ಕಾಲೋಚಿತ ಹಣ್ಣುಗಳನ್ನು ಸೇರಿಸಬೇಕು. ಸೇಬು, ಪೇರಳೆ, ಬೆರ್ರಿ ಹಣ್ಣುಗಳು, ಬಾಳೆಹಣ್ಣು ಇತ್ಯಾದಿ ಸ್ಥಳೀಯ ಹಣ್ಣುಗಳು ಹೆಚ್ಚಿನ ಫೈಬರ್ ಅಂಶದಿಂದ ಕೂಡಿರುತ್ತವೆ. ಅವುಗಳನ್ನು ಫ್ರೂಟ್ ಸಲಾಡ್ ಅಥವಾ ಸ್ಮೂಥಿ ರೂಪದಲ್ಲಿ ಸೇವನೆ ಮಾಡಬಹುದು. ಹಣ್ಣುಗಳನ್ನು ಸೇವಿಸಲು ಉತ್ತಮ ಸಮಯವೆಂದರೆ, ಮಧ್ಯಾಹ್ನದ ಊಟ ಅಥವಾ ಸಂಜೆಯ ತಿಂಡಿಯ ನಡುವೆ ಅಥವಾ ಖಾಲಿ ಹೊಟ್ಟೆಯಲ್ಲಿ. ಅವಕಾಡೋ ಫೈಬರ್ ನಿಂದ ಕೂಡಿರುವ ಮತ್ತೊಂದು ಹಣ್ಣು. 100 ಗ್ರಾಂ ಅವಕಾಡೊದಲ್ಲಿ ಸುಮಾರು 6.69 ಗ್ರಾಂ ಫೈಬರ್ ಅಂಶ ಇರುತ್ತದೆ. ಅವಕಾಡೋವನ್ನು ಸ್ಮೂಥಿ ಅಥವಾ ಸ್ಯಾಂಡ್ವಿಚ್ ಗೆ ಹರಡಿ ತಿನ್ನುವ ಮೂಲಕ ದೇಹಕ್ಕೆ ಫೈಬರ್ ಅಂಶವನ್ನು ನೀಡಬಹುದು.”

ನಮ್ಮ ದೈನಂದಿನ ಆಹಾರದಲ್ಲಿ ದ್ವಿದಳ ಧಾನ್ಯಗಳು, ಬೇಳೆಗಳು, ಬಟಾಣಿಯನ್ನು ಸೇರಿಸುವುದರಿಂದ ದೇಹಕ್ಕೆ ನಾರಿನಾಂಶವನ್ನು ಕೂಡಾ ಪೂರೈಸಬಹುದು. ಬೇಯಿಸಿದ ಬಟಾಣಿ ನಮ್ಮ ದೈನಂದಿನ ಫೈಬರ್ ಅಗತ್ಯಗಳಲ್ಲಿ ಸುಮಾರು 50% ನಷ್ಟು ಪೂರೈಸಲು ಸಹಾಯ ಮಾಡುತ್ತದೆ. ಅವುಗಳನ್ನು ಸಾಂಪ್ರದಾಯಿಕವಾಗಿ ಚಪಾತಿ ಅಥವಾ ಅನ್ನದೊಂದಿಗೆ ಸವಿಯಬಹುದು ಎಂದು ಅಮನ್ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್