Maternal anxiety: ಗರ್ಭಾವಸ್ಥೆಯಲ್ಲಿ, ಮಗುವಿನ ಜನನದ ನಂತರ ತಾಯಂದಿರಲ್ಲಿ ಕಾಣುವ ಅಪಾಯದ ಅಂಶ? ನಿವಾರಿಸಲು ಇಲ್ಲಿದೆ ಸಲಹೆ

ತಾಯಿಯ ಆತಂಕ ಅಥವಾ ಖಿನ್ನತೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಸಾಕಷ್ಟಿದೆ. ಅದನ್ನು ನಿವಾರಿಸಲು ತಾಯಂದಿರಿಗೆ ಕೆಲವು ತಜ್ಞರು ನೀಡಿದ ಸಲಹೆಗಳು ಇಲ್ಲಿವೆ.

Maternal anxiety: ಗರ್ಭಾವಸ್ಥೆಯಲ್ಲಿ, ಮಗುವಿನ ಜನನದ ನಂತರ ತಾಯಂದಿರಲ್ಲಿ ಕಾಣುವ ಅಪಾಯದ ಅಂಶ? ನಿವಾರಿಸಲು ಇಲ್ಲಿದೆ ಸಲಹೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:May 23, 2023 | 3:43 PM

ತಾಯಿಯ ಆತಂಕ ಅಥವಾ ಖಿನ್ನತೆ ಹೆರಿಗೆ ಸಮಯದಲ್ಲಿ ಅತ್ಯಂತ ಸಾಮಾನ್ಯ ತೊಡಕುಗಳಾಗಿರುವುದರಿಂದ ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. 5 ಮಹಿಳೆಯರಲ್ಲಿ ಒಬ್ಬರಲ್ಲಿ ಇದು ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಆದರೂ ಅವರನ್ನು ಸಾರ್ವತ್ರಿಕವಾಗಿ ಪರೀಕ್ಷಿಸಲಾಗುವುದಿಲ್ಲ, ಅಥವಾ ಚಿಕಿತ್ಸೆ ನೀಡಲಾಗುವುದಿಲ್ಲ ಆದರೆ ಚಿಕಿತ್ಸೆ ನೀಡದಿದ್ದರೆ ಗಂಭೀರ ಫಲಿತಾಂಶಗಳಿಗೆ ಕಾರಣವಾಗಬಹುದು. ಗರ್ಭಧಾರಣೆ ಮತ್ತು ಮಗುವಿನ ಜನನ ಹಲವಾರು ರೀತಿಯ ಭಾವನೆಗಳ ಪುಂಜವಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಅನೇಕ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಮತ್ತು ಮಗು ಜನಿಸಿದ ನಂತರವೂ ಅತಿಯಾದ, ದುಃಖ ಅಥವಾ ಆತಂಕ ಅನುಭವಿಸುತ್ತಾರೆ.

ಎಚ್ಟಿ ಲೈಫ್ ಸ್ಟೈಲ್​​ಗೆ ನೀಡಿದ ಸಂದರ್ಶನದಲ್ಲಿ, ಅಸೋಸಿಯೇಟ್ ಡೈರೆಕ್ಟರ್ ಡಾ. ಸೀಮಾ ಶರ್ಮಾ ಮತ್ತು ಚಂಡೀಗಢದ ಕ್ಲೌಡ್ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಜೂನಿಯರ್ ಕನ್ಸಲ್ಟೆಂಟ್ ಡಾ.ಸಿಲ್ವಿ ಡೋಗ್ರಾ, ಅನೇಕ ಮಹಿಳೆಯರಿಗೆ, ಈ ಭಾವನೆಗಳು ತಾನಾಗಿಯೇ ಹೊರಟು ಹೋಗುತ್ತದೆ. ಯಾವುದೇ ರೀತಿಯ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ. ಆದರೆ ಕೆಲವು ಮಹಿಳೆಯರಿಗೆ, ಈ ಭಾವನೆಗಳು ಹೆಚ್ಚು ಗಂಭೀರವಾಗಿರುತ್ತವೆ ಮತ್ತು ಸ್ವಲ್ಪ ಸಮಯದವರೆಗೆ ಉಳಿಯುತ್ತದೆ. ಈ ಸಮಯದಲ್ಲಿ ತಾಯ್ತನದ ಅನೇಕ ಸಂತೋಷಗಳ ಹೊರತಾಗಿಯೂ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಈ ಬಗ್ಗೆ ಮುಕ್ತವಾಗಿ ಅರ್ಥಮಾಡಿಕೊಳ್ಳಲು ನೀವು ಬೇರೆ ಬೇರೆ ಮಾಧ್ಯಮಗಳನ್ನು ಬಳಸಿಕೊಳ್ಳಬಹುದು ಎಂದಿದ್ದಾರೆ.

ಪ್ರಸವಾನಂತರದ ಖಿನ್ನತೆಗೆ ಪ್ರಮುಖ ಪ್ರಚೋದಕವಾಗಿರುವುದು ಹಾರ್ಮೋನುಗಳ ಬದಲಾವಣೆ ಎಂದು ಜನರು ಭಾವಿಸುತ್ತಿದ್ದರು. ಆದರೆ ಅನೇಕರಲ್ಲಿ ಆ ಹಾರ್ಮೋನುಗಳ ಬದಲಾವಣೆಗಳನ್ನು ಆಗದಿದ್ದರೂ ಸಹ ಪ್ರಸವಾನಂತರದ ಖಿನ್ನತೆಯನ್ನು ಬೆಳೆಸಿಕೊಳ್ಳುತ್ತಾರೆ. ಹಾಗಾಗಿ ಖಿನ್ನತೆಗೆ ಇತರ ಕೆಲವು ಪ್ರಮುಖ ಪ್ರಚೋದಕಗಳೆಂದರೆ: ಬಳಲಿಕೆ, ನಿರಂತರವಾಗಿ ಬೇರೆ ಬೇರೆ ಕಾರಣಗಳಿಗೆ ಅಳುವುದು, ಬೆಂಬಲವಿಲ್ಲದ ಅಥವಾ ಅಸಮರ್ಥ ಭಾವನೆಯಾಗಿದೆ” ಎಂದು ಡಾ. ಸೀಮಾ ಶರ್ಮಾ ಹೇಳಿದ್ದಾರೆ.

ರೋಗಲಕ್ಷಣಗಳೇನು?

ಆರೋಗ್ಯ ತಜ್ಞರ ಪ್ರಕಾರ, ತಾಯಂದಿರು ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಬಳಲುತ್ತಿದ್ದರೆ ಅವರಲ್ಲಿ ಕಂಡು ಬರುವ ರೋಗಲಕ್ಷಣಗಳು ಈ ಕೆಳಗಿನಂತಿವೆ:

1. ದುಃಖ- ಕಣ್ಣೀರು, ಪಶ್ಚಾತ್ತಾಪ ಅಥವಾ ನಿರಾಶೆ.

2. ನೀವು ವಿಶ್ವದ ಅತ್ಯಂತ ಕೆಟ್ಟ ಪೋಷಕರು ಅಥವಾ ನೀವು ಇಲ್ಲದೆ ನಿಮ್ಮ ಮಗು ಉತ್ತಮವಾಗಿರುತ್ತದೆ ಎಂಬ ತಪ್ಪಿತಸ್ಥ ಭಾವನೆ.

3. ಆಂತರಿಕ ಟೀಕೆ, “ನಾನು ಅದನ್ನು ಏಕೆ ಮಾಡಿದೆ?” ಅಥವಾ “ನಾನು ಎಷ್ಟು ವಿಫಲನಾಗಿದ್ದೇನೆ” ಎಂಬ ನಿರಂತರ ಭಾವನೆ.

4. ಬೇರೆ ಬೇರೆ ಆಲೋಚನೆಗಳು ಮತ್ತು ಮಗುವಿಗೆ ನೋವಾಗುತ್ತದೆ ಎಂಬ ಚಿಂತೆ.

5. ಕಿರಿಕಿರಿ.

6. ನೀವು ಆನಂದಿಸುತ್ತಿದ್ದ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದಿರುವುದು.

7. ಕಡ್ಡಾಯ ನಡವಳಿಕೆಗಳು (ನಿಮ್ಮ ಮಗು ಮಲಗಿದೆಯಾ ಎಂದು ಮತ್ತೆ ಮತ್ತೆ ಪರಿಶೀಲಿಸುವುದು).

8. ಎಲ್ಲ ಬಿಟ್ಟು ಓಡಿಹೋಗ ಬೇಕು ಎಂಬ ಭಾವನೆ ಮೂಡುವುದು.

ಇದನ್ನೂ ಓದಿ; ಗರ್ಭಾವಸ್ಥೆಯ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಗರ್ಭಿಣಿಯರು ಸೇವಿಸಬೇಕಾದ ಆಹಾರಗಳು ಇಲ್ಲಿವೆ

ಗರ್ಭಾವಸ್ಥೆಯಲ್ಲಿ ಅಥವಾ ಜನನದ ನಂತರ ಖಿನ್ನತೆ ಮತ್ತು ಆತಂಕಕ್ಕೆ ಅಪಾಯಕಾರಿ ಅಂಶಗಳು ಯಾವುದು? ಗುರುತಿಸುವುದು ಹೇಗೆ?

ಡಾ.ಸೀಮಾ ಶರ್ಮಾ ಮತ್ತು ಡಾ.ಸಿಲ್ವಿ ಡೋಗ್ರಾ ಅವರು ಗರ್ಭಾವಸ್ಥೆಯಲ್ಲಿ ಅಥವಾ ಜನನದ ನಂತರ ಖಿನ್ನತೆ ಮತ್ತು ಆತಂಕ ಯಾರಿಗಾದರೂ ಸಂಭವಿಸಬಹುದು ಎಂದಿದ್ದಾರೆ. ಆದರೆ ಅದಕ್ಕೆ ಕಾರಣಗಳು ಬೇರೆ ಬೇರೆ ಯಾಗಿರಬಹುದು. ಅದರ ಬಗ್ಗೆ ಇಲ್ಲಿದೆ ಮಾಹಿತಿ.

-ಖಿನ್ನತೆ ಅಥವಾ ಆತಂಕ ಹಿಂದಿನಿಂದಲೂ ಇರುವುದು.

-ಕುಟುಂಬದ ಇತಿಹಾಸ.

-ಕಷ್ಟಕರ ಗರ್ಭಧಾರಣೆ ಅಥವಾ ಜನನ ಅನುಭವ.

-ಅವಳಿಗಳಿಗೆ ಜನ್ಮ ನೀಡುವುದು.

-ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಅನುಭವಿಸುವುದು.

-ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ.

-ನಿಮ್ಮ ಮಗುವನ್ನು ನೋಡಿಕೊಳ್ಳಲು ಅಥವಾ ಸಹಾಯ ಮಾಡಲು ಕುಟುಂಬ ಅಥವಾ ಸ್ನೇಹಿತರಿಂದ ಯಾವುದೇ ಬೆಂಬಲ ಇಲ್ಲದಿರುವುದು.

-ಯೋಜಿತವಲ್ಲದ ಗರ್ಭಧಾರಣೆ.

ಗರ್ಭಾವಸ್ಥೆಯಲ್ಲಿ ಅಥವಾ ಜನನದ ನಂತರ ಖಿನ್ನತೆ ಮತ್ತು ಆತಂಕ ಮಗುವಿನ ಮೇಲೆ ಪರಿಣಾಮ ಬೀರಬಹುದೇ?

ತಜ್ಞರು ಹೇಳುವ ಪ್ರಕಾರ, “ಹೌದು ಇದು ಮಗುವಿನ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರಬಹುದು. ಮಗುವಿನ ಬೆಳವಣಿಗೆಗೆ ಆರಂಭಿಕವಾಗಿ ತಾಯಿ, ಮಗುವಿನ ಬಂಧವು ಮುಖ್ಯವಾಗಿದೆ ಮತ್ತು ಮಗುವಿಗೆ ಹತ್ತಿರವಾಗುವುದಕ್ಕೆ ಈ ಬಂಧವು ದೊಡ್ಡ ಭಾಗವಾಗಿದೆ. ಆದರೆ ಗರ್ಭಾವಸ್ಥೆಯಲ್ಲಿ ಅಥವಾ ಜನನದ ನಂತರ ಖಿನ್ನತೆ ಅಥವಾ ಆತಂಕದೊಂದಿಗೆ, ಮಗುವಿಗೆ ಹತ್ತಿರವಾಗಲು ಕಷ್ಟವಾಗಬಹುದು. ಮಗುವಿನ ಅಗತ್ಯಗಳಿಗೆ ಸ್ಪಂದಿಸಲು ಸಾಧ್ಯವಾಗದಿರಬಹುದು. ಹಾಗಾಗಿ ಆರಂಭಿಕ ಚಿಕಿತ್ಸೆಯು ನಿಮಗೆ, ನಿಮ್ಮ ಮಗುವಿಗೆ ಮುಖ್ಯವಾಗಿದೆ. ನೀವು ಎಷ್ಟು ಬೇಗ ಚಿಕಿತ್ಸೆ ಪ್ರಾರಂಭಿಸುತ್ತೀರೋ, ಅಷ್ಟು ಬೇಗ ನಿಮ್ಮ ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಉತ್ತಮಗೊಳ್ಳಲು ಪ್ರಾರಂಭಿಸುತ್ತದೆ” ಎಂದಿದ್ದಾರೆ.

ತಾಯಿಯ ಆತಂಕ ಅಥವಾ ಖಿನ್ನತೆಗೆ ಚಿಕಿತ್ಸೆಗಳು ಯಾವುದು?

ಡಾ.ಸೀಮಾ ಶರ್ಮಾ ಮತ್ತು ಡಾ.ಸಿಲ್ವಿ ಡೋಗ್ರಾ ಅವರು ಖಿನ್ನತೆ ಮತ್ತು ಆತಂಕ ತಾನಾಗಿಯೇ ಹೋಗುವುದಿಲ್ಲ ಆದರೆ ಚಿಕಿತ್ಸೆಯೊಂದಿಗೆ ಭರವಸೆ ಇದೆ ಎಂದು ಹೇಳಿದ್ದಾರೆ. ಅವರು ನೀಡಿರುವ ಸಲಹೆ ಬಗ್ಗೆ ಇಲ್ಲಿದೆ ಮಾಹಿತಿ:

-ಕೌನ್ಸೆಲಿಂಗ್ /”ಟಾಕ್ ಥೆರಪಿ”: ಮಹಿಳೆಯರಿಗೆ ಮಾನಸಿಕ ಆರೋಗ್ಯ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ಸಮಸ್ಯೆಗಳನ್ನು ಚರ್ಚಿಸುವುದು ಖಿನ್ನತೆ ಅಥವಾ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ, ಪರಿಹಾರವನ್ನೂ ನೀಡುತ್ತದೆ.

-ಇತರ ತಾಯಿಯರನ್ನು ಸಂಪರ್ಕಿಸಿ: ನಿಮ್ಮಂತೆ ತಾಯಿಯಾಗುತ್ತಿರುವವರ ಜೊತೆ ಮಾತನಾಡಿ. ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಲಿ. ಅಥವಾ ಅವರು ಮಕ್ಕಳ ಬಗ್ಗೆ ಏನನ್ನು ಯೋಚಿಸುತ್ತಿದ್ದಾರೆ? ಅವರ ಅಭಿಪ್ರಾಯ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

-ನಿಮಗಾಗಿ ಸಮಯವನ್ನು ಮೀಸಲಿಡಿ: ಸ್ವಲ್ಪ ಹೊತ್ತು ನಿಮಗಾಗಿ ಸಮಯ ಮಾಡಿಕೊಂಡು ನೀವು ಆನಂದಿಸುವ ಏನನ್ನಾದರೂ ಮಾಡಿ. ಅದು ಸಂಗೀತವನ್ನು ಕೇಳುವುದು, ಪುಸ್ತಕ ಓದುವುದು ಅಥವಾ ನೆಚ್ಚಿನ ಚಲನಚಿತ್ರವನ್ನು ನೋಡುವುದು ಯಾವುದೇ ಆಗಿರಲಿ, ಕಡ್ಡಾಯವಾಗಿ ನೀವು ಆನಂದಿಸುವ ಏನನ್ನಾದರೂ ಮಾಡಲು ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಿ.

-ವಾಸ್ತವಿಕವಾಗಿರಿ: ನೀವು ಎಲ್ಲವನ್ನೂ ಮಾಡಬೇಕಾಗಿಲ್ಲ. ನಿಮಗೆ ಏನು ಸಾಧ್ಯವೋ ಅದನ್ನು ಮಾಡಿ ಮತ್ತು ಉಳಿದದ್ದನ್ನು ಬಿಡಿ.

-ಸಹಾಯಕ್ಕಾಗಿ ಕೇಳಿ: ಮಗುವನ್ನು ನೋಡಿಕೊಳ್ಳುವುದು ಅಥವಾ ಮನೆ ಕೆಲಸಗಳನ್ನು ಮಾಡಿಕೊಳ್ಳಲು ಕುಟುಂಬ ಅಥವಾ ಸ್ನೇಹಿತರಿಂದ ಸಹಾಯ ಕೇಳಲು ಹಿಂಜರಿಯಬೇಡಿ.

-ಮಗು ವಿಶ್ರಾಂತಿ ಪಡೆದಾಗ ನೀವೂ ವಿಶ್ರಾಂತಿ ಪಡೆಯಿರಿ: ನಿದ್ರೆ ಮಗುವಿಗೆ ಎಷ್ಟು ಮುಖ್ಯವೋ ನಿಮಗೂ ಅಷ್ಟೇ ಮುಖ್ಯ. ಮಗು ಮಲಗಿದಾಗ, ನೀವು ನಿದ್ದೆ ಮಾಡಿ, ವಿಶ್ರಾಂತಿ ಪಡೆಯಿರಿ.

-ಇತರರೊಂದಿಗೆ ಬೇರೆಯಿರಿ: ಆರಾಮ ಮತ್ತು ಒಳ್ಳೆಯ ಸಹವಾಸವನ್ನು ಒದಗಿಸಬಲ್ಲ ಇತರ ವಯಸ್ಕರು-ಕುಟುಂಬ ಮತ್ತು ಸ್ನೇಹಿತರ ಜೊತೆ ಬೇರೆಯಿರಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ.

ಹಲವಾರು ಔಷಧಿಗಳು ಖಿನ್ನತೆ ಮತ್ತು ಆತಂಕಕ್ಕೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಮತ್ತು ಗರ್ಭಿಣಿಯರಿಗೆ, ಸ್ತನ್ಯಪಾನ ಮಾಡುವ ತಾಯಂದಿರಿಗೆ ಹಾಗೂ ಅವರ ಶಿಶುಗಳಿಗೆ ಇದು ಸುರಕ್ಷಿತವಾಗಿದೆ. ಆರೋಗ್ಯ ಆರೈಕೆ ಒದಗಿಸುವವರು ನಿಮಗೆ ಸೂಕ್ತವಾದ ಔಷಧಿಗಳನ್ನು ಸೂಚಿಸಬಹುದು. ಆತಂಕ ಮತ್ತು ಖಿನ್ನತೆಯ ಈ ಹಂತದಲ್ಲಿ ತಾಯಂದಿರಿಗೆ ಸಹಾಯ ಮಾಡಲು ಮತ್ತು ಅಗತ್ಯವಾದ ಸಹಾಯವನ್ನು ಒದಗಿಸುವ ಮೂಲಕ ಈ ಪ್ರಕ್ರಿಯೆಯನ್ನು ತಡೆಯಲು ಮತ್ತು ಅದರ ಕೆಟ್ಟ ಪರಿಣಾಮಗಳನ್ನು ತಡೆಗಟ್ಟಲು ಕುಟುಂಬ, ಸಮಾಜ ಮತ್ತು ಪ್ರಾಥಮಿಕ ಆರೋಗ್ಯ ಆರೈಕೆ ಪೂರೈಕೆದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:54 pm, Thu, 18 May 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್