Health Tips: ನೆನಪಿನ ಶಕ್ತಿ ಕೊರತೆ ಕಾಡುತ್ತಿದ್ಯಾ? ಸಮಸ್ಯೆಯಿಂದ ಮುಕ್ತರಾಗಲು ಇಲ್ಲಿದೆ ಸರಳ ಮಾರ್ಗ

| Updated By: ಅಕ್ಷತಾ ವರ್ಕಾಡಿ

Updated on: Feb 05, 2024 | 1:04 PM

ಬಹುತೇಕರಲ್ಲಿ ಕಾಡುವ ಸಮಸ್ಯೆಗಳಲ್ಲಿ ಮರೆವಿನ ಕಾಯಿಲೆ ಅಥವಾ ನೆನಪಿನ ಶಕ್ತಿಯ ಕೊರತೆ ಕೂಡ ಒಂದು. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಲ್ಲಿ ಈ ಸಮಸ್ಯೆಯು ಹೆಚ್ಚಾಗಿಯೇ ಕಂಡು ಬರುತ್ತಿದೆ. ಓದಿದ ಯಾವ ವಿಷಯವು ತಲೆಗೆ ಹತ್ತುವುದೇ ಇಲ್ಲ. ಹೀಗಾಗಿ ಪರೀಕ್ಷೆಯ ಸಮಯ ಹತ್ತಿರ ಬಂದಾಗ ಹೆತ್ತವರ ಸಂಕಟವನ್ನು ನೋಡಲು ಆಗುವುದಿಲ್ಲ. ಒಂದು ವೇಳೆ ಮಕ್ಕಳಿಗೆ ನೆನಪಿನ ಶಕ್ತಿಯ ಕೊರತೆಯಿದ್ದರೆ ಪೋಷಕರು ಆಹಾರ ಕ್ರಮದಲ್ಲಿ ಬದಲಾವಣೆಯ ಜೊತೆಗೆ ಕೆಲವೊಂದು ಮನೆ ಮದ್ದನ್ನು ಟ್ರೈ ಮಾಡಿ ಟೆನ್ಶನ್ ಮುಕ್ತರಾಗಬಹುದು.

Health Tips: ನೆನಪಿನ ಶಕ್ತಿ ಕೊರತೆ ಕಾಡುತ್ತಿದ್ಯಾ? ಸಮಸ್ಯೆಯಿಂದ ಮುಕ್ತರಾಗಲು ಇಲ್ಲಿದೆ ಸರಳ ಮಾರ್ಗ
Memory loss
Image Credit source: Pinterest
Follow us on

ಪ್ರತಿಯೊಬ್ಬರಿಗೂ ಜ್ಞಾಪಕ ಶಕ್ತಿಯು ಅತೀ ಅಗತ್ಯ. ಆಧುನಿಕ ಜೀವನ ಶೈಲಿಯಿಂದಾಗಿ ಆದರೆ ಮಕ್ಕಳು ಹಾಗೂ ಮಧ್ಯ ವಯಸ್ಕರಲ್ಲಿ ಹೆಚ್ಚಾಗಿ ನೆನಪಿನ ಶಕ್ತಿ ಕೊರತೆ ಅಥವಾ ಮರೆವಿನ ಕಾಯಿಲೆಯು ಕಾಣಿಸಿಕೊಳ್ಳುತ್ತಿದೆ. ಈ ಮಕ್ಕಳಲ್ಲಿ ನೆನಪಿನ ಶಕ್ತಿ ಕಡಿಮೆಯಾದರೆ ಶೈಕ್ಷಣಿಕ ಪ್ರಗತಿಗೆ ತೊಡಕಾಗುವುದು ಸಹಜ. ಹೀಗಾಗಿ ಪೋಷಕರು ಮಕ್ಕಳಿಗೆ ನೆನಪಿನ ಶಕ್ತಿಯ ಹೆಚ್ಚಾಗುವಂತಹ ಆಹಾರವನ್ನು ನೀಡಬೇಕು. ಅದರೊಂದಿಗೆ ಮನೆ ಮದ್ದನ್ನು ಮಾಡಿ ನೀಡುವುದರಿಂದ ನೆನಪಿನ ಶಕ್ತಿಯನ್ನು ಸುಧಾರಿಸಬಹುದು.

ನೆನಪಿನ ಶಕ್ತಿ ಹೆಚ್ಚಿಸಲು ಇಲ್ಲಿದೆ ಸರಳ ಮನೆ ಮದ್ದು:

  1. ಮಕ್ಕಳಿಗೆ ಒಂದೆಗಲವನ್ನು ತಿನ್ನಲು ನೀಡುವುದರಿಂದ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದಾಗಿದೆ.
  2. ಒಂದು ಬಟ್ಟಲು ಮಾವಿನ ಹಣ್ಣಿನ ರಸ ಸಮಪ್ರಮಾಣದಲ್ಲಿ ಹಾಲು ಬೆರೆಸಿ ಜೇನುತುಪ್ಪದೊಂದಿಗೆ ದಿನವೂ ಸೇವಿಸುತ್ತಿದ್ದರೆ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ.
  3. ಮೆಂತ್ಯದ ಸೊಪ್ಪು, ಮೂಲಂಗಿಯನ್ನು ಮಿಶ್ರಣಕ್ಕೆ ಉಪ್ಪು ಬೆರೆಸಿ, ಮೆಣಸು ಹಾಗೂ ಜೀರಿಗೆಯ ಒಗ್ಗರಣೆ ಹಾಕಿ ಸೇವಿಸುವುದು ಜ್ಞಾಪಕ ಹೆಚ್ಚಾಗಲು ಪರಿಣಾಮಕಾರಿ ಮನೆಮದ್ದಾಗಿದೆ.
  4. ಒಂದು ಚಮಚದಷ್ಟು ಕೊತ್ತುಂಬರಿಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಊಟದ ನಂತರದಲ್ಲಿ ಸೇವಿಸಿದರೆ ಉತ್ತಮ.
  5. ಹಸಿಶುಂಠಿ, ಸ್ವಲ್ಪ ಜೀರಿಗೆ ಹಾಗೂ ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿಂದರೆ ನೆನಪಿನ ಶಕ್ತಿಯು ವೃದ್ಧಿಯಾಗುತ್ತದೆ.
  6. ಊಟದ ಬಳಿಕ ನಿತ್ಯವು ಸೇಬುಹಣ್ಣು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
  7. ಮೂರು ಚಮಚ ನೆಲ್ಲಿಕಾಯಿ ರಸದೊಂದಿಗೆ ಜೇನುತುಪ್ಪ ಬೆರೆಸಿ ದಿನವೂ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ.
  8. ದಿನಾಲೂ ನೆಲ್ಲಿಕಾಯಿಯನ್ನು ಸೇವಿಸಿದರೆ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ.
  9. ನೆನೆಸಿದ ಉದ್ದಿನಬೇಳೆಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಂಡು, ರಾಗಿರೊಟ್ಟಿ, ಚಪಾತಿಯೊಂದಿಗೆ ಸೇವಿಸುತ್ತಿದ್ದರೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಜ್ಞಾಪಕಶಕ್ತಿ ಹೆಚ್ಚಾಗಲು ಔಷಧಿಯಾಗಿದೆ.
  10. ಹಾಲಿಗೆ ಏಲಕ್ಕಿ ಸೇರಿಸಿ ಕುದಿಸಿ, ಅದಕ್ಕೆ ಎರಡು ಮೂರು ಚಮಚದಷ್ಟು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಜ್ಞಾಪಕಶಕ್ತಿ ಸುಧಾರಿಸುತ್ತದೆ.
  11. ದಾನಿ ಪುಡಿಯನ್ನು ಜೇನುತುಪ್ಪದಲ್ಲಿ ಮಿಶ್ರಮಾಡಿ, ಸೇವಿಸುತ್ತಿದ್ದರೆ ಆರೋಗ್ಯವೂ ವೃದ್ಧಿಸುವುದರೊಂದಿಗೆ ಜ್ಞಾಪಕಶಕ್ತಿಯೂ ಹೆಚ್ಚುವುದು.
  12. ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ಸೇವಿಸುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ.
  13. ಪ್ರತಿ ದಿನ ಧ್ಯಾನ ಹಾಗೂ ಯೋಗ ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ