ನಮ್ಮ ಜೀವನ ಶೈಲಿ ಬೇರೆಯಾಗಿರಬಹುದು, ಯೋಗ ನಮ್ಮನ್ನು ಪರಸ್ಪರ ಬೆಸೆದಿದೆ: ಸಿಡ್ನಿಯಲ್ಲಿ ಮೋದಿ ಭಾಷಣ

ನಾವು ವಿಭಿನ್ನ ರೀತಿಯಲ್ಲಿ ಆಹಾರವನ್ನು ತಯಾರಿಸುತ್ತೇವೆ,ಈಗ ಮಾಸ್ಟರ್​​ಶೆಫ್ ನಮ್ಮನ್ನು ಪರಸ್ಪರ ಬೆಸೆಯುತ್ತದೆ. ನಾನು 2014ರಲ್ಲಿ ಇಲ್ಲಿಗೆ ಬಂದಾಗ, ಭಾರತೀಯ ಪ್ರಧಾನಿಗಾಗಿ ನೀವು 28 ವರ್ಷಗಳವರೆಗೆ ಕಾಯಬೇಕಾಗಿಲ್ಲ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಹಾಗಾಗಿ, ನಾನು ಮತ್ತೊಮ್ಮೆ ಸಿಡ್ನಿಯಲ್ಲಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ನಮ್ಮ ಜೀವನ ಶೈಲಿ ಬೇರೆಯಾಗಿರಬಹುದು, ಯೋಗ ನಮ್ಮನ್ನು ಪರಸ್ಪರ ಬೆಸೆದಿದೆ: ಸಿಡ್ನಿಯಲ್ಲಿ ಮೋದಿ ಭಾಷಣ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:May 23, 2023 | 4:19 PM

ಸಿಡ್ನಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ (Qudos Bank Arena) ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ವರದಿಗಳ ಪ್ರಕಾರ, ಭಾರತೀಯ ಮೂಲದ ಕನಿಷ್ಠ 20,000 ಜನರು ಮೋದಿ ಭಾಷಣ ಕೇಳಲು ಇಲ್ಲಿ ಸೇರಿದ್ದಾರೆ. ಆಸ್ಟ್ರೇಲಿಯಾದಲ್ಲಿ (Australia )ನೆಲೆಸಿರುವ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಜೀವನಶೈಲಿ ವಿಭಿನ್ನವಾಗಿರಬಹುದು ಆದರೆ ಈಗ ಯೋಗ ಕೂಡ ನಮ್ಮನ್ನು ಬೆಸೆದಿದೆ. ನಾವು ಕ್ರಿಕೆಟ್‌ ನಿಂದಾಗಿ ದೀರ್ಘಕಾಲ ಸಂಪರ್ಕ ಹೊಂದಿದ್ದೇವೆ. ಆದರೆ ಈಗ ಟೆನಿಸ್ ಮತ್ತು ಸಿನಿಮಾ ಕೂಡಾ ನಮ್ಮನ್ನು ಪರಸ್ಪರ ಬೆಸೆಯುವ ಕೊಂಡಿಗಳಾಗಿವೆ.ನಾವು ವಿಭಿನ್ನ ರೀತಿಯಲ್ಲಿ ಆಹಾರವನ್ನು ತಯಾರಿಸುತ್ತೇವೆ,ಈಗ ಮಾಸ್ಟರ್​​ಶೆಫ್ ನಮ್ಮನ್ನು ಪರಸ್ಪರ ಬೆಸೆಯುತ್ತದೆ. ನಾನು 2014ರಲ್ಲಿ ಇಲ್ಲಿಗೆ ಬಂದಾಗ, ಭಾರತೀಯ ಪ್ರಧಾನಿಗಾಗಿ ನೀವು 28 ವರ್ಷಗಳವರೆಗೆ ಕಾಯಬೇಕಾಗಿಲ್ಲ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಹಾಗಾಗಿ, ನಾನು ಮತ್ತೊಮ್ಮೆ ಸಿಡ್ನಿಯಲ್ಲಿದ್ದೇನೆ ಎಂದಿದ್ದಾರೆ.

ಭಾರತ ಮೂಲದ ಸಮೀರ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಂಬಂಧ ಗಟ್ಟಿಯಾಗಿದೆ. 2 ದೇಶಗಳ ಸಂಬಂಧ ಗಟ್ಟಿಯಾಗಿರಲು ಭಾರತೀಯರು ಕಾರಣ.  ಜೈಪುರದ ಜಿಲೇಬಿ, ಸ್ವೀಟ್​ಗಳು ಆಸ್ಟ್ರೇಲಿಯಾದಲ್ಲೂ ಸಿಗುತ್ತದೆ. ಇಂದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ, ಇಡೀ ಜಗತ್ತಿನಾದ್ಯಂತ ಭಾರತದ ಟ್ಯಾಲೆಂಟ್​ ಫ್ಯಾಕ್ಟರಿ ಇದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಪ್ರಧಾನಿ ಮೋದಿಗೆ ‘ಸಾಂಪ್ರದಾಯಿಕ ಸ್ವಾಗತ’

ಆರ್ಥಿಕತೆಯಲ್ಲಿ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಭಾರತ ಇಡೀ ವಿಶ್ವವನ್ನು ಒಂದು ಪರಿವಾರದಂತೆ ನೋಡುತ್ತದೆ.ಬ್ರಿಸ್ಬೇನ್​ನಲ್ಲಿ ಹೊಸ ರಾಯಭಾರ ಕಚೇರಿ ತೆರೆಯುವುದಾಗಿ ಘೋಷಣೆ ಮಾಡಿದ ಮೋದಿ, ಆಸ್ಟ್ರೇಲಿಯಾದಲ್ಲಿರುವ ನೀವೆಲ್ಲರೂ ಭಾರತದ ರಾಯಭಾರಿಗಳು.ಭಾರತ-ಆಸ್ಟ್ರೇಲಿಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ ಎಂದಿದ್ದಾರೆ.

ಪ್ರಧಾನಿ ಭಾಷಣದ ಮುಖ್ಯಾಂಶಗಳು

  1. ನಮಸ್ತೆ ಆಸ್ಟ್ರೇಲಿಯಾ! ನಾನು ಆಸ್ಟ್ರೇಲಿಯಾದ ಎಲ್ಲಾ ನಾಯಕರಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ. ನಾನು ಮತ್ತೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತೇನೆ ಎಂದು 2014 ರಲ್ಲಿ ನಾನು ನಿಮಗೆ ಪ್ರಾಮಿಸ್ ಮಾಡಿದ್ದೆ. ಅಹಮದಾಬಾದ್‌ನಲ್ಲಿ ನನ್ನ ಸ್ನೇಹಿತ ಆಂಥೋನಿ ಅಲ್ಬನೀಸ್‌ಗೆಆ ಆತಿಥ್ಯ ನೀಡುವ ಅವಕಾಶ ನನಗೆ ಸಿಕ್ಕಿತು. ಆಂಥೋನಿ ಅವರಿಗೆ ಧನ್ಯವಾದಗಳು.
  2. ಸಿಡ್ನಿಯಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಭಾರತೀಯ ಜನರೊಂದಿಗೆ ಸಂಪರ್ಕ ಸಾಧಿಸುತ್ತಿರುವುದು ಖುಷಿಕೊಟ್ಟಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧ ಮೂರು C ಗಳನ್ನು ಆಧರಿಸಿದೆ ಎಂದು ಹೇಳುತ್ತಿದ್ದರು: ಕಾಮನ್ ವೆಲ್ತ್, ಕ್ರಿಕೆಟ್ ಮತ್ತು ಕರಿ (Curry).
  3. ಕೆಲವರು ಭಾರತ-ಆಸ್ಟ್ರೇಲಿಯಾ ಸಂಬಂಧವನ್ನು ಮೂರು D ಮೇಲೆ ಅವಲಂಬಿತವಾಗಿದೆ ಎಂದು ವಿವರಿಸುತ್ತಿದ್ದರು. ಅದೇನಂದೆರೆ ಡೆಮಾಕ್ರಸಿ(ಪ್ರಜಾಪ್ರಭುತ್ವ), ಡಯಾಸ್ಪೊರಾ(Diaspora) ಮತ್ತು ದೋಸ್ತಿ (Dosti).
  4. ಕೆಲವರು ಭಾರತ ಆಸ್ಟ್ರೇಲಿಯಾದ ಸಂಬಂಧವನ್ನು ಮೂರು E ಗಳಲ್ಲಿ ವಿವರಿಸುತ್ತಾರೆ. ಅದೇನೆಂದರೆ ಶಕ್ತಿ (Energy), ಆರ್ಥಿಕತೆ (Economy) ಮತ್ತು ಶಿಕ್ಷಣ (Education).
  5. ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವವು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧದ ಮುಖ್ಯ ಅಡಿಪಾಯವಾಗಿದೆ.
  6. ಜೈಪುರ ಸಿಹಿತಿಂಡಿಗಳನ್ನು ಸವಿಯಲು ನನ್ನ ಸ್ನೇಹಿತ ಆಂಥೋನಿ ಕರೆದುಕೊಂಡು ಹೋಗಬೇಕೆಂದು ನಾನು ನಿಮ್ಮndnf (ಜನರಿಗೆ) ವಿನಂತಿಸುತ್ತೇನೆ.
  7. ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಸ್ಟ್ರೇಲಿಯಾದಲ್ಲಿ ಆಚರಿಸಿದ್ದಕ್ಕೆ ನನಗೆ ಸಂತೋಷವಾಗಿದೆ.
  8. ಈ ವರ್ಷ ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಮಹಿಳಾ ಐಪಿಎಲ್‌ನಲ್ಲಿ ಭಾಗವಹಿಸಿದ್ದರು. ಶೇನ್ ವಾರ್ನ್ ನಿಧನರಾದಾಗ ಭಾರತೀಯರೂ ಸಂತಾಪ ಸೂಚಕ ಸಭೆಗಳಲ್ಲಿ ಭಾಗವಹಿಸಿದ್ದರು. ಆಸೀಸ್ ಸ್ಪಿನ್ ಬೌಲರ್ ಶೇನ್ ವಾರ್ನ್ ನಿಧನರಾದಾಗ ಲಕ್ಷಾಂತರ ಭಾರತೀಯರು ದುಃಖಿತರಾಗಿದ್ದರು.
  9. ಭಾರತದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತ. ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತೀಯ ಅರಣ್ಯ ಮೀಸಲು ಹೊಸ ಹಂತವನ್ನು ತಲುಪುತ್ತಿದೆ.
  10. ಭಾರತದಲ್ಲಿ ಚಿಂತಕರ ಚಾವಡಿ ಕ್ರಾಂತಿಯಾಗಿದೆ. ಭಾರತದಲ್ಲಿ ಬಡವರೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬುದು ನನ್ನ ಕನಸಾಗಿತ್ತು.ಕಳೆದ 9 ವರ್ಷಗಳಲ್ಲಿ 50 ಕೋಟಿ ಬಡ ಭಾರತೀಯರು ತಮ್ಮ ಬ್ಯಾಂಕ್ ಖಾತೆಗಳನ್ನು ಪಡೆದಿದ್ದಾರೆ.ಕಳೆದ 9 ವರ್ಷಗಳಲ್ಲಿ 28 ಸಾವಿರ ಕೋಟಿ ನೇರವಾಗಿ ಬಡವರ ಖಾತೆಗೆ ಜಮೆಯಾಗಿದೆ.
  11. ವಿಶ್ವದ 40% ರಿಯಲ್ ಟೈಮ್ ಡಿಜಿಟಲ್ ಪಾವತಿಯನ್ನು ಭಾರತದಿಂದ ಮಾತ್ರ ಮಾಡಲಾಗುತ್ತದೆ.
  12. ಡಿಜಿಟಲ್ ಲಾಕರ್ ಭಾರತದ ಸಾಧನೆಗಳಲ್ಲಿ ಒಂದಾಗಿದೆ, ಅಲ್ಲಿ ನೀವು ನಿಮ್ಮ ಎಲ್ಲಾ ದಾಖಲೆಗಳನ್ನು ಸೇವ್ ಮಾಡಿಟ್ಟುಕೊಳ್ಳಬಹುದು. ಸುಮಾರು 15 ಕೋಟಿ ಭಾರತೀಯರು ಡಿಜಿಟಲ್ ಲಾಕರ್‌ಗಳನ್ನು ಬಳಸುತ್ತಿದ್ದಾರೆ.
  13. ಭಾರತ ಪ್ರಜಾಪ್ರಭುತ್ವದ ತಾಯಿ. ನಾವು ನಮ್ಮ ತತ್ವಗಳ ಮೇಲೆ ಗಟ್ಟಿಯಾಗಿ ನಿಂತಿದ್ದೇವೆ. ನಾವು ಜಗತ್ತನ್ನು ಒಂದೇ ಕುಟುಂಬವಾಗಿ ನೋಡುತ್ತೇವೆ.
  14. ಕೊರೊನಾ ಸಮಯದಲ್ಲಿ ಭಾರತವು 159 ದೇಶಗಳಿಗೆ ಔಷಧಿಗಳನ್ನು ರಫ್ತು ಮಾಡಿದೆ. ಸಾಂಕ್ರಾಮಿಕ ಸಮಯದಲ್ಲಿ ಭಾರತವು 100 ದೇಶಗಳಿಗೆ ಉಚಿತ ಕೊರೊನಾ ಲಸಿಕೆಗಳನ್ನು ರಫ್ತು ಮಾಡಿದೆ.ಜಗತ್ತಿನಲ್ಲಿ ವಿಪತ್ತು ಸಂಭವಿಸಿದಾಗಲೂ ಭಾರತ ಸಹಾಯಕ್ಕೆ ಮುಂಚೂಣಿಯಲ್ಲಿರುತ್ತದೆ.
  15. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದು ಅಂತರಾಷ್ಟ್ರೀಯ ಸಂಬಂಧಗಳನ್ನು ಕಾಪಾಡಿಕೊಳ್ಳುವ ಭಾರತದ ದೃಷ್ಟಿಯಾಗಿದೆ.
  16. ಆಸ್ಟ್ರೇಲಿಯಾದಿಂದ ಭಾರತಕ್ಕೆ ನೇರ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಬ್ರಿಸ್ಬೇನ್‌ನಲ್ಲಿ ಹೊಸ ಭಾರತೀಯ ದೂತಾವಾಸವನ್ನು ಉದ್ಘಾಟಿಸಲಾಗುವುದು. ನೀವು ಆಸ್ಟ್ರೇಲಿಯಾದಲ್ಲಿ ಭಾರತದ ಬ್ರಾಂಡ್ ಅಂಬಾಸಿಡರ್‌ಗಳು.
  17. ನಿಮ್ಮ ಸ್ನೇಹಿತರು ಮತ್ತು ಅವರ ಕುಟುಂಬಗಳನ್ನು ಭಾರತಕ್ಕೆ ಕರೆತನ್ನಿ, ಇದರಿಂದ ಅವರು ಭಾರತೀಯ ಸಂಸ್ಕೃತಿಯ ಅನುಭವವನ್ನು ಹೊಂದಬಹುದು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Tue, 23 May 23

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?