Health Tips: ಥೈರಾಯ್ಡ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವನೆ ಮಾಡಬೇಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 27, 2024 | 6:02 PM

Thyroid Problem: ಇತ್ತೀಚಿನ ದಿನಗಳಲ್ಲಿ ರಕ್ತದ ಒತ್ತಡ, ಹೃದಯದ ಸಮಸ್ಯೆಯಂತೆಯೇ ಥೈರಾಯ್ಡ್​ ಸಮಸ್ಯೆಯೂ ಕಂಡು ಬರುತ್ತಿದೆ. ಥೈರಾಯ್ಡ್ ತೊಂದರೆ ಇರುವವರಿಗೆ ಆಹಾರ ಪದ್ಧತಿ ಬಹಳ ಮುಖ್ಯ. ಕೆಲವೊಂದು ಆಹಾರಗಳನ್ನು ಸೇವಿಸಲೇಬೇಕಾಗುತ್ತದೆ ಮತ್ತು ಇನ್ನೂ ಕೆಲವು ಆಹಾರಗಳಿಂದ ದೂರ ಉಳಿಯಬೇಕಾಗುತ್ತದೆ. ಇಲ್ಲವಾದಲ್ಲಿ ಇದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.

Health Tips: ಥೈರಾಯ್ಡ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವನೆ ಮಾಡಬೇಡಿ
Follow us on

ಆಹಾರ ಕ್ರಮ ಸರಿಯಾಗಿಲ್ಲದಿದ್ದರೆ ಅದೆಷ್ಟೋ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚಿನ ದಿನಗಳಲ್ಲಿ ರಕ್ತದ ಒತ್ತಡ, ಹೃದಯದ ಸಮಸ್ಯೆಯಂತೆಯೇ ಥೈರಾಯ್ಡ್​ ಸಮಸ್ಯೆಯೂ ಕಂಡು ಬರುತ್ತಿದೆ. ಥೈರಾಯ್ಡ್ ತೊಂದರೆ ಇರುವವರಿಗೆ ಆಹಾರ ಪದ್ಧತಿ ಬಹಳ ಮುಖ್ಯ. ಕೆಲವೊಂದು ಆಹಾರಗಳನ್ನು ಸೇವಿಸಲೇಬೇಕಾಗುತ್ತದೆ ಮತ್ತು ಇನ್ನೂ ಕೆಲವು ಆಹಾರಗಳಿಂದ ದೂರ ಉಳಿಯಬೇಕಾಗುತ್ತದೆ. ಇಲ್ಲವಾದಲ್ಲಿ ಇದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಜೊತೆಗೆ ತೂಕ ನಷ್ಟ, ನಿದ್ರಾಹೀನತೆ, ಬಾಯಾರಿಕೆ, ಅತಿಯಾದ ಬೆವರು, ದೌರ್ಬಲ್ಯ, ಆತಂಕವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾದರೆ ಯಾವ ಪದಾರ್ಥಗಳ ಸೇವನೆ ಮಾಡಬಾರದು ತಿಳಿದುಕೊಳ್ಳಿ.

ಎಲೆಕೋಸು, ಹೂಕೋಸು: ಥೈರಾಯ್ಡ್​ ಸಮಸ್ಯೆ ಹೊಂದಿರುವವರು ಹೂಕೋಸು, ಎಲೆಕೋಸನ್ನು ಸೇವಿಸಬಾರದು. ಇದರಲ್ಲಿರುವ ಗಿಟಾರ್ನಾಯ್ಡ್ಸ್​ ಅಂಶವು ಥೈರಾಯ್ಡ್ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ.

ಸೋಯಾ ಉತ್ಪನ್ನಗಳು: ತೋಫು, ಸೋಯಾ ಹಾಲು ಮತ್ತು ಸೋಯಾಬೀನ್ ಸೇರಿದಂತೆ ಸೋಯಾ ಉತ್ಪನ್ನಗಳು ಗೊಯಿಟ್ರೋಜೆನ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ಅಡ್ಡಿಯುಂಟುಮಾಡುತ್ತದೆ.

ಮಾಂಸಹಾರ: ಥೈರಾಯ್ಡ್ ಸಮಸ್ಯೆ ಇರುವವರು ಮಾಂಸಹಾರ ಸೇವನೆಯನ್ನು ತ್ಯಜಿಸಬೇಕು. ಇದು ಸ್ಯಾಚುರೇಟೆಡ್​ ಕೊಬ್ಬು ಮತ್ತು ಕೊಲೆಸ್ಟ್ರಾಲ್​ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಥೈರಾಯ್ಡ್​ ರೋಗಿಗಳಿಗೆ ಹೆಚ್ಚು ಹಾನಿಯುಂಟು ಮಾಡುತ್ತದೆ. ಇದು ದೇಹದ ಉಷ್ಣತೆಯು ಅಸಹಜ ಮಟ್ಟಕ್ಕೆ ಏರಲು ಕಾರಣವಾಗುತ್ತದೆ.

ಒಣಬೀಜಗಳು: ಥೈರಾಯ್ಡ್ ಸಮಸ್ಯೆ ಇರುವ ಕೆಲವರಿಗೆ ಒಣ ಬೀಜಗಳನ್ನು ಜೀರ್ಣ ಮಾಡಿಕೊಳ್ಳಲು ಕಷ್ಟವಾಗಬಹುದು. ಏಕೆಂದರೆ ಅವುಗಳಲ್ಲಿ ಆಕ್ಸಲೆಟ್ ಮತ್ತು ಫೈಟೆಟ್ ಪ್ರಮಾಣ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ದಿನನಿತ್ಯದ ಆಹಾರದಲ್ಲಿ ಉಪ್ಪು, ಸಕ್ಕರೆ ಪ್ರಮಾಣ ಎಷ್ಟಿರಬೇಕು? ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ?

ಚಹಾ ಅಥವಾ ಕೆಫೀನ್​ ಉತ್ಪನ್ನಗಳು: ಚಹಾ ಅಥವಾ ಕೆಫೀನ್​ ಉತ್ಪನ್ನಗಳು ಥೈರಾಯ್ಡ್​ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತವೆ. ಇದು ನಿಮ್ಮ ರಕ್ತದಲ್ಲಿನ ಥೈರಾಯ್ಡ್​ ಮಟ್ಟವನ್ನು ಕ್ರಮೇಣ ಹೆಚ್ಚಿಸುತ್ತದೆ. ಇದು ಕೆಲವರಲ್ಲಿ ಹೆಚ್ಚಿನ ಗಂಟಲು ನೋವಿಗೆ ಕಾರಣವಾಗುತ್ತದೆ.

ಕೆಲವು ತರಕಾರಿಗಳು: ಟೊಮ್ಯಾಟೋ, ದಪ್ಪ ಮೆಣಸಿನಕಾಯಿ, ಬದನೆಕಾಯಿ ಜೊತೆಗೆ ಆಲೂಗಡ್ಡೆ ಥೈರಾಯ್ಡ್ ಸಮಸ್ಯೆ ಇರುವವರಿಗೆ ಆಗಿ ಬರುವುದಿಲ್ಲ ಎನ್ನಲಾಗುತ್ತದೆ ಹಾಗಾಗಿ ವೈದ್ಯರ ನಿರ್ದೇಶನದಂತೆ ಥೈರಾಡ್ ಸಮಸ್ಯೆ ಇರುವವರು ಈ ತರಕಾರಿಗಳಿಂದ ದೂರ ಉಳಿಯುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ