Health Tips
Image Credit source: Pinterest
ಇಂದಿನ ಒತ್ತಡ ತುಂಬಿದ ಧಾವಂತದ ಜೀವನ ಶೈಲಿಯಿಂದ ಯಾರಿಗೂ ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಮಯವಿಲ್ಲ. ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ನಾನಾ ರೀತಿಯ ರೋಗಗಳನ್ನು ಆಹ್ವಾನಿಸುತ್ತಿದ್ದೇವೆ. ಆದರೆ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಆರೋಗ್ಯ ಚೆನ್ನಾಗಿದ್ದು ಬಿಟ್ಟರೆ ಕೈ ತುಂಬಾ ದುಡಿಯಬಹುದು. ಹೀಗಾಗಿ ಆರೋಗ್ಯವನ್ನು ವೃದ್ಧಿಸಲು ಕೆಲವು ಸಣ್ಣ ಪುಟ್ಟ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು.
ಆರೋಗ್ಯ ವೃದ್ಧಿಸಲು ಈ ಆಹಾರಗಳತ್ತ ಗಮನ ಕೊಡಿ:
- ಪ್ರತಿದಿನವೂ ಎದ್ದ ಕೂಡಲೇ ಒಂದು ಬಟ್ಟಲು ನೊರೆಹಾಲನ್ನು ದಿನವೂ ಸೇವಿಸುತ್ತಿದ್ದರೆ ಆರೋಗ್ಯ ವೃದ್ಧಿಸುವುದು.
- ದಿನಾಲು ಸೇಬುಹಣ್ಣನ್ನು ಊಟ ಆದ ನಂತರ ಸೇವಿಸುವುದರಿಂದ ಆರೋಗ್ಯ ವೃದ್ಧಿಸುವುದರೊಂದಿಗೆ ಮುಖದಲ್ಲಿನ ಕಳೆ ಹೆಚ್ಚಾಗುತ್ತದೆ.
- ಊಟವಾದ ಬಳಿಕ ನಿತ್ಯವು ಬಾಳೆಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದರೊಂದಿಗೆ, ಆರೋಗ್ಯವುವು ಸುಧಾರಣೆಯಾಗುತ್ತದೆ.
- ನುಗ್ಗೆಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ, ಮಕ್ಕಳಿಗೆ ಕುಡಿಸುವುದರಿಂದ ರಕ್ತ ಶುದ್ಧಿಯಾಗಿ ಆರೋಗ್ಯವಂತರಾಗಿರಬಹುದು.
- ಅಡುಗೆಯಲ್ಲಿ ಕುಂಬಳಕಾಯಿಯನ್ನು ವಿವಿಧ ರೀತಿಯಲ್ಲಿ ಬಳಸುವುದರಿಂದ ಆರೋಗ್ಯದಲ್ಲಿ ಬದಲಾವಣೆಯನ್ನು ಕಾಣಬಹುದು.
- ಹಸಿ ಬಟಾಣಿಯನ್ನು ನೀರಿನಲ್ಲಿ ಬೇಯಿಸಿ, ಉಪ್ಪು,ಬೆರೆಸದೆ ತಿನ್ನುತ್ತಿದ್ದರೆ ಆರೋಗ್ಯವು ಸುಧಾರಣೆಯಾಗುತ್ತದೆ.
- ಮುಸುಕಿನ ಜೋಳವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೈಹಿಕ ಶಕ್ತಿ ಹೆಚ್ಚಾಗುತ್ತದೆ.
- ನಿತ್ಯ ರಾಗಿ ಅಂಬುಲಿಯನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
- ನವಿಲುಕೋಸು ಹಸಿಯಾಗಿ ತುರಿದು, ಕೋಸುಂಬರಿ ಮಾಡಿ ತಿಂದರೆ ರಕ್ತ ಶುದ್ಧಿಯಾಗಿ ಆರೋಗ್ಯವು ಉತ್ತಮವಾಗಿರುತ್ತದೆ.
- ಚಪ್ಪರದವರೆಕಾಯಿ ಪಲ್ಯ ಅಥವಾ ಸಾರು ಮಾಡಿಕೊಂಡು ಊಟ ಮಾಡುವುದರಿಂದಲೂ ಆರೋಗ್ಯ ಸುಧಾರಿಸುವುದು.
- ಬಲಿತ ಚಕ್ರಮುನಿ ಸೊಪ್ಪನ್ನು ಚೆನ್ನಾಗಿ ಒಣಗಿಸಿ, ತುಪ್ಪದಲ್ಲಿ ಹುರಿದು, ಒಣಗಿದ ಮೆಣಸಿನಕಾಯಿ, ಉಪ್ಪು, ಹುಣಸೆ ಹಣ್ಣು ಬೆರೆಸಿ, ಕುಟ್ಟಿ ಪುಡಿ ಮಾಡಿದ ಚಟ್ಟಿಪುಡಿ ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
- ರಾತ್ರಿ ಮಲಗುವ ಎರಡು ಗಂಟೆಯ ಮೊದಲು ಒಂದು ಲೋಟ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
- ಬೆಳಗ್ಗೆ ಎದ್ದ ಕೂಡಲೇ ರಾತ್ರಿ ನೆನೆಸಿಟ್ಟ ಒಣ ದ್ರಾಕ್ಷಿಯನ್ನು ನೀರು ಸಮೇತ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ.
- ಸೀತಾಫಲದ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಮಾಂಸ ಖಂಡಗಳ ಶಕ್ತಿಯೂ ಹೆಚ್ಚಾಗಿ ಆರೋಗ್ಯವು ಉತ್ತಮವಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ