ಇಂದಿನ ಬ್ಯುಸಿ ಲೈಫ್ನಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳಿರುತ್ತವೆ. ಕೆಲವೊಮ್ಮೆ ದೇಹವು ನಮಗೆ ಸ್ಪಂದಿಸುವುದಿಲ್ಲ. ಕೆಲಸದ ಒತ್ತಡ, ದಣಿವು ಕೂಡ ಉಂಟಾಗುತ್ತದೆ. ದಿನವಿಡೀ ದುಡಿದು ರಾತ್ರಿ ಮಲಗಿ ಎದ್ದ ನಂತರ ಕುತ್ತಿಗೆ ಮತ್ತು ದೇಹದಲ್ಲಿ ಸಾಮನ್ಯವಾಗಿ ನೋವು (Body Pain) ಕಾಣಿಸಿಕೊಳ್ಳುತ್ತದೆ. ಅನೇಕ ಜನರು ನಿದ್ರೆಯ ಸಮಯದಲ್ಲಿ ಅಥವಾ ನಿದ್ರೆಯಿಂದ ಎಚ್ಚರವಾದ ನಂತರ ದೇಹದಲ್ಲಿ ನೋವಿನಂತಹ ಸಮಸ್ಯೆಗಳನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಕಚೇರಿಯಲ್ಲಿ ಕೆಲಸ ಮಾಡುವಾಗಲೂ ಈ ಸಮಸ್ಯೆಗಳು ಉಂಟಾಗಬಹುದು. ಹಾಗಾದರೆ ಈ ಸಮಸ್ಯೆ ಉಂಟಾಗಲು ಕಾರಣ ಏನು ಎಂದು ಈ ಲೇಖನದ ಮೂಲಕ ತಿಳಿಯೋಣ.
ನೋವಿನ ಕಾರಣಗಳು:
ನಿದ್ರೆಯ ನಂತರ ದೇಹದಲ್ಲಿ ನೋವು ಉಂಟಾಗಲು ಹಲವು ಕಾರಣಗಳಿರಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ದೈಹಿಕ ದೌರ್ಬಲ್ಯ, ಉದಾಹರಣೆಗೆ ನಿದ್ರೆಯ ಕೊರತೆ ಅಥವಾ ದೈಹಿಕ ಚಟುವಟಿಕೆಯ ಕೊರತೆಯಿಂದಲೂ ಇದು ಉಂಟಾಗಬಹುದು. ಆದರೆ ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಹೀಗೆ ಮಾಡಿ:
ನಿದ್ರೆಯಿಂದ ಎಚ್ಚರವಾದ ನಂತರ ದೇಹದಲ್ಲಿ ಯಾವುದೇ ನೋವು ಕಂಡುಬಂದರೆ, ಆಹಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಲು ತಜ್ಞರು ಸಲಹೆ ನೀಡುತ್ತಾರೆ. ಎದ್ದ ನಂತರವೂ ನಿಮ್ಮ ದೇಹದಲ್ಲಿ ನೋವು ಕಾಣಿಸಿಕೊಂಡರೆ, ನೀವು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಏಕೆಂದರೆ ಇದು ನಿಮ್ಮ ಸ್ನಾಯುಗಳು, ಮೂಳೆಗಳು, ಜೀರ್ಣಕ್ರಿಯೆ, ದೇಹದಲ್ಲಿನ ರಕ್ತದ ಕೊರತೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ಇದಕ್ಕಾಗಿ ಹಾಲು, ಮೊಸರು, ಮಜ್ಜಿಗೆ, ಸೋಯಾಬೀನ್, ಬೇಳೆಕಾಳುಗಳನ್ನು ಆಹಾರದ ಭಾಗವನ್ನಾಗಿಸಿಕೊಳ್ಳಿ.
ವ್ಯಾಯಾಮ:
ಪ್ರತಿದಿನ ಎದ್ದ ನಂತರ ನೀವು 30 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಪ್ರಯತ್ನಿಸಿ. ಅದರಲ್ಲೂ ಸ್ಟ್ರೆಚಿಂಗ್, ಯೋಗ, ಮಾರ್ನಿಂಗ್ ವಾಕ್ ಕೂಡ ಮಾಡಬಹುದು.
ಬಿಸಿನೀರಿನ ಸ್ನಾನ ಮಾಡಿ:
ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಆಯಾಸ ನಿವಾರಣೆಯಾಗುತ್ತದೆ. ಈ ಕಾರಣದಿಂದಾಗಿ ನಿಮ್ಮ ಸ್ನಾಯುಗಳು ಒತ್ತಡ ಮತ್ತು ಊತದಿಂದ ಪರಿಹಾರವನ್ನು ಪಡೆಯುತ್ತವೆ. ಇದಲ್ಲದೆ, ಬಿಸಿನೀರಿನೊಂದಿಗೆ ಸ್ನಾನ ಮಾಡುವುದರಿಂದ ರಿಫ್ರೆಶ್ ಮತ್ತು ನೋವು ನಿವಾರಣೆಯಾಗುತ್ತದೆ. ಇಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ನೋವು ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.
(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.