ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರೀತಿಯ ಆಹಾರ ಸೇವನೆ ಮಾಡಿ, ಆರೋಗ್ಯಕ್ಕೆ ಒಳ್ಳೆಯದು

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 27, 2024 | 4:01 PM

ತೂಕ ಇಳಿಕೆ ಮಾಡುವ ಬಗ್ಗೆ ಜನರು ಹೆಚ್ಚಾಗಿ ಯೋಚಿಸುತ್ತಿದ್ದಾರೆ ಆದರೆ ಅದರ ಜೊತೆಗೆ ನಮ್ಮ ಆರೋಗ್ಯದ ಬಗ್ಗೆಯೂ ಗಮನ ಕೊಡಬೇಕಾಗುತ್ತದೆ. ಇಲ್ಲವಾದಲ್ಲಿ ನಮಗರಿವಿಲ್ಲದಂತೆ ನಮ್ಮ ಆರೋಗ್ಯ ಹದಗೆಡುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಿ, ಜೊತೆಗೆ ಆಹಾರ ಪದ್ಧತಿ ಚೆನ್ನಾಗಿರಲಿ. ಈ ರೀತಿ ಮಾಡುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಜೊತೆಗೆ ದೇಹದ ತೂಕವು ಹೆಚ್ಚಾಗುವುದಿಲ್ಲ. ಹಾಗಾದರೆ ದಿನನಿತ್ಯ ಅದರಲ್ಲಿಯೂ ಬೆಳಿಗ್ಗೆ ನಾವು ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರೀತಿಯ ಆಹಾರ ಸೇವನೆ ಮಾಡಿ, ಆರೋಗ್ಯಕ್ಕೆ ಒಳ್ಳೆಯದು
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಮಾಡುವ ಬಗ್ಗೆ ಜನರು ಹೆಚ್ಚಾಗಿ ಯೋಚಿಸುತ್ತಿದ್ದಾರೆ ಆದರೆ ಅದರ ಜೊತೆಗೆ ನಮ್ಮ ಆರೋಗ್ಯದ ಬಗ್ಗೆಯೂ ಗಮನ ಕೊಡಬೇಕಾಗುತ್ತದೆ. ಇಲ್ಲವಾದಲ್ಲಿ ನಮಗರಿವಿಲ್ಲದಂತೆ ನಮ್ಮ ಆರೋಗ್ಯ ಹದಗೆಡುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಿ, ಜೊತೆಗೆ ಆಹಾರ ಪದ್ಧತಿ ಚೆನ್ನಾಗಿರಲಿ. ಈ ರೀತಿ ಮಾಡುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಜೊತೆಗೆ ದೇಹದ ತೂಕವು ಹೆಚ್ಚಾಗುವುದಿಲ್ಲ. ಹಾಗಾದರೆ ದಿನನಿತ್ಯ ಅದರಲ್ಲಿಯೂ ಬೆಳಿಗ್ಗೆ ನಾವು ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಆಹಾರ ತಜ್ಞೆ ಪೂಜಾ ಗಣೇಶ್ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ (nutritionist_inkannada) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇದನ್ನು ಯಾರು ಸೇವನೆ ಮಾಡಬಾರದು ಎಂಬುದನ್ನು ಹಂಚಿಕೊಂಡಿದ್ದು, ಈ ಸಲಹೆಯನ್ನು ದಿನನಿತ್ಯ ಪಾಲಿಸುವುದರಿಂದ ಸುಲಭವಾಗಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

  • ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯಿರಿ. ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಜೊತೆಗೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ತೂಕದ ನಿರ್ವಹಣೆಯೂ ಆಗುತ್ತದೆ.
  • 6-8 ನೆನೆಸಿದ ಬಾದಾಮಿಯನ್ನು ಸೇವನೆ ಮಾಡಿ ಇದು ಮೆದುಳಿನ ಕಾರ್ಯ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ, ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಮೂತ್ರಪಿಂಡದಲ್ಲಿ ಕಲ್ಲುಗಳಿರುವವರು ಅಥವಾ ಅಡಿಕೆಯಿಂದ ಅಲರ್ಜಿ ಇರುವವರು ಇದರ ಸೇವನೆ ಮಾಡುವುದನ್ನು ತಪ್ಪಿಸಿ.
  • ನೀರಿನಲ್ಲಿ 1 ಟೀಚಮಚ ಮೊರಿಂಗಾ ಪುಡಿಯನ್ನು ಹಾಕಿ ಸೇವನೆ ಮಾಡುವುದರಿಂದ ಪೋಷಣೆಯನ್ನು ಹೆಚ್ಚಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆದರೆ ರಕ್ತ ತೆಳುವಾಗಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಅಥವಾ ಕಡಿಮೆ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳು ಇದನ್ನು ಸೇವನೆ ಮಾಡಬೇಡಿ.
  • 2 ರಿಂದ 3 ನೆನೆಸಿದ ಅಂಜೂರವನ್ನು ಸೇವನೆ ಮಾಡಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಆದರೆ ಮಧುಮೇಹ ಹೊಂದಿರುವವರು ಅಥವಾ ರಕ್ತ ತೆಳುಗೊಳಿಸುವ ಔಷಧಿಗಳನ್ನು ಸೇವಿಸುತ್ತಿರುವವರು ಇದನ್ನು ಸೇವನೆ ಮಾಡಬೇಡಿ.
  • 8 ರಿಂದ10 ನೆನೆಸಿದ ಒಣ ದ್ರಾಕ್ಷಿಯನ್ನು ಬೆಳ್ಳಿಗೆ ಸೇವನೆ ಮಾಡಿ ಇದು ನಿಮಗೆ ಶಕ್ತಿ ಮತ್ತು ಕಬ್ಬಿಣದ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅತಿಯಾಗಿ ನೀರು ಸೇವನೆ ಮಾಡುವುದರಿಂದ ಆಯಸ್ಸು ಕಡಿಮೆ ಆಗುತ್ತೆ ಹುಷಾರ್!

ಆದರೆ ಇದನ್ನು ಮಧುಮೇಹ ಅಥವಾ ಜೀರ್ಣಕಾರಿ ಸಮಸ್ಯೆಗಳಿರುವವರು ತಪ್ಪಿಸ್ಬೇಕು.

1 ಚಮಚ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಇದು ಜಲಸಂಚಯನವನ್ನು ಉತ್ತೇಜಿಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಆದರೆ ಇದನ್ನು ಜೀರ್ಣಕಾರಿ ಸಮಸ್ಯೆಗಳು ಇರುವವರು ತಪ್ಪಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ