Health Tips: ಅತಿಯಾಗಿ ನೀರು ಸೇವನೆ ಮಾಡುವುದರಿಂದ ಆಯಸ್ಸು ಕಡಿಮೆ ಆಗುತ್ತೆ ಹುಷಾರ್!
ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತಿ ದಿನ ಮೂರು ಲೀಟರ್ ನೀರು ಸೇವನೆ ಮಾಡುವುದು ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆದರೆ ಮಿತಿಮೀರಿ ಅಥವಾ ಅತಿಯಾಗಿ ನೀರು ಕುಡಿಯುವುದು ಒಳ್ಳೆಯದಲ್ಲ. ಯಾವುದೇ ಆಗಲಿ ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡಬಾರದು. ಅದು ದೇಹಕ್ಕೆ ಒಳ್ಳೆಯದಲ್ಲ. ಹಾಗೆಯೇ ಅತಿಯಾಗಿ ನೀರು ಸೇವನೆ ಮಾಡುವುದರಿಂದ ಆಯಸ್ಸು ಕಡಿಮೆ ಆಗುತ್ತೆ. ಹೌದು ನಿಜ. ಕೆಲವೊಮ್ಮೆ ಹೃದಯ ವೈಫಲ್ಯದ ಅಪಾಯವೂ ಕಾಡಬಹುದು.
ನೀರನ್ನು ಜೀವ ಜಲ ಎನ್ನುತ್ತೇವೆ ಏಕೆಂದರೆ ಅದು ಇಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತಿ ದಿನ ಮೂರು ಲೀಟರ್ ನೀರು ಸೇವನೆ ಮಾಡುವುದು ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆದರೆ ಮಿತಿಮೀರಿ ಅಥವಾ ಅತಿಯಾಗಿ ನೀರು ಕುಡಿಯುವುದು ಒಳ್ಳೆಯದಲ್ಲ. ಯಾವುದೇ ಆಗಲಿ ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡಬಾರದು. ಅದು ದೇಹಕ್ಕೆ ಒಳ್ಳೆಯದಲ್ಲ. ಹಾಗೆಯೇ ಅತಿಯಾಗಿ ನೀರು ಸೇವನೆ ಮಾಡುವುದರಿಂದ ಆಯಸ್ಸು ಕಡಿಮೆ ಆಗುತ್ತೆ. ಹೌದು ನಿಜ. ಕೆಲವೊಮ್ಮೆ ಹೃದಯ ವೈಫಲ್ಯದ ಅಪಾಯವೂ ಕಾಡಬಹುದು.
ಅತಿಯಾಗಿ ನೀರು ಸೇವನೆ ಮಾಡುವುದರಿಂದ ಅದು ಕಾಯಿಲೆಗೆ ಮೂಲವಾಗುತ್ತದೆ. ಅಲ್ಲದೆ ಆಮಶಂಕೆಗೆ ಕಾರಣವಾಗುತ್ತದೆ ಬಳಿಕ ಇದು ಅಜೀರ್ಣಕ್ಕೆ ಕಾರಣ. ಅಜೀರ್ಣ ಜಾಸ್ತಿ ಆದರೆ ಜ್ವರ ಬರುತ್ತೆ, ಇದು ಕ್ಷಯಕ್ಕೆ ಕಾರಣವಾಗುತ್ತದೆ ಇದು ನಿಮ್ಮ ಆಯಸ್ಸನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಅತಿಯಾದ ನೀರನ್ನು ಸೇವನೆ ಮಾಡಬೇಡಿ. ಬಾಯಾರಿಕೆ ಆದಾಗ ನೀರು ಕುಡಿಯುವುದು ಅಥವಾ ಅಗತ್ಯ ಇರುವಾಗ ನೀರನ್ನು ಕುಡಿಯಿರಿ. ಅದಲ್ಲದೆ ಹೆಚ್ಚು ನೀರು ಕುಡಿದಾಗ, ಅದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ನೇರವಾಗಿ ಹೃದಯದ ರಕ್ತನಾಳಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಈ ಅನಗತ್ಯ ಒತ್ತಡದಿಂದಾಗಿ, ಹೃದಯ ವೈಫಲ್ಯದ ಅಪಾಯ ಕಾಡುತ್ತದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಮಿತಿಯಲ್ಲಿ ನೀರಿನ್ನು ಕುಡಿಯಬೇಕು.
ಕೆಲವರು ವೈದ್ಯರು ಹೇಳಿರುವುದಕ್ಕಿಂತ ಎರಡು, ಮೂರು ಪಟ್ಟು ಹೆಚ್ಚು ನೀರನ್ನು ಕುಡಿಯುತ್ತಾರೆ ಆದರೆ ಈ ರೀತಿ ಮಾಡುವುದು ಒಳ್ಳೆಯದಲ್ಲ. ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು. ಅದಲ್ಲದೆ ನೀರು ಕುಡಿಯುವ ವಿಧಾನ ಕೂಡ ತಿಳಿದಿರಬೇಕು. ಬಹುತೇಕರು ನೀರನ್ನು ಒಮ್ಮೆಗೆ ಕುಡಿಯುತ್ತಾರೆ. ಇದು ಕೂಡ ಒಳ್ಳೆಯದಲ್ಲ. ಸ್ವಲ್ಪ ಸ್ವಲ್ಪ ನೀರನ್ನು ಆಗಾಗ ಕುಡಿಯುತ್ತಿರಬೇಕು. ಸದಾ ಕುಳಿತು ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಸ್ನಾಯುಗಳ ಮೇಲೆ ಒತ್ತಡ ಬೀಳುವುದಿಲ್ಲ. ಹಾಗಾದರೆ ನೀರನ್ನು ಯಾವಾಗ ಕುಡಿಯುವುದು ಒಳ್ಳೆಯದು? ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: ಏನಿದು ಹೆಪಟೈಟಿಸ್ ಕಾಯಿಲೆ? ಈ ರೋಗ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
ಎದ್ದ ನಂತರ- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ದೇಹಕ್ಕೆ ತುಂಬಾ ಒಳ್ಳೆಯದು.
ವ್ಯಾಯಾಮದ ನಂತರ- ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಗೆ ತರಲು ಸಹಕಾರಿ.
ಊಟಕ್ಕೆ ಅರ್ಧ ಗಂಟೆ ಮೊದಲು -ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಸ್ನಾನ ಮಾಡುವ ಮೊದಲು- ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ