ಭಾರತದಲ್ಲಿ ಹುರಿದ ಬೇಳೆಯನ್ನು ಹೆಚ್ಚಿನವರು ಸವಿಯುತ್ತಾರೆ. ಗರಿಗರಿಯಾದ ಮತ್ತು ರುಚಿಯಾಗಿರುವ ಈ ಬೇಳೆಯನ್ನು ಅನೇಕ ಭಕ್ಷ್ಯಗಳಲ್ಲಿಯೂ ಬಳಸಲಾಗುತ್ತದೆ. ಕಡಿಮೆ ಉರಿಯಲ್ಲಿ ಹುರಿಯಲಾಗುವುದರಿಂದ ಪೋಷಕಾಂಶಗಳಿಗೇನೂ ಕಡಿಮೆಯಾಗುವುದಿಲ್ಲ. ಇದು ಪ್ರೋಟೀನ್, ಫೈಬರ್, ಫೋಲೇಟ್, ಖನಿಜಗಳು ಮತ್ತು ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಬಹು ಮುಖ್ಯವಾಗಿ ಇದು ಕೊಬ್ಬನ್ನು ಹೊಂದಿರುವುದಿಲ್ಲ. ಬದಲಾಗಿ ಶಕ್ತಿಯ ಉತ್ತಮ ಮೂಲವಾಗಿದೆ. ಇದನ್ನು ತಿಂದರೆ ಹೊಟ್ಟೆ ತುಂಬಿರುವಂತೆ ಮಾಡಲಿದೆ. ತಜ್ಞರ ಪ್ರಕಾರ, ಇದರಲ್ಲಿ ಪೋಷಕಾಂಶಗಳನ್ನು ಹೆಚ್ಚಿರುತ್ತದೆ. ಹಾಗಿದ್ದರೆ ಹುರಿದ ಕಾಳುಗಳನ್ನು ನಿಯಮಿತವಾಗಿ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ಹುರಿದ ಬೇಳೆಯಲ್ಲಿದೆ ಪ್ರೋಟೀನ್‌ನ ನಿಧಿ: ಹುರಿದ ಬೇಳೆ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಅವುಗಳನ್ನು ಹುರಿಯುವುದರಿಂದ ಅದರ ಪೋಷಕಾಂಶಗಳ ಮೇಲೆ ಪರಿಣಾಮ ಬೀರುವುದಿಲ್ಲ. ದೇಹದಲ್ಲಿ ಹೊಸ ಕೋಶಗಳನ್ನು ನಿರ್ಮಿಸಲು ಪ್ರೋಟೀನ್ ಅಗತ್ಯವಿದೆ. ಇದು ವಿಶೇಷವಾಗಿ ಮಕ್ಕಳು, ಹದಿಹರೆಯದವರು ಮತ್ತು ಗರ್ಭಿಣಿ ಮಹಿಳೆಯರಲ್ಲಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆ: ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಆಹಾರಗಳು ಎಲ್ಲಾ ಮಧುಮೇಹಿಗಳಿಗೆ ಉತ್ತಮವಾಗಿದೆ. ಕಡಿಮೆ ಜಿಐ ಇದೆ ಎಂದರೆ ಆ ಆಹಾರವನ್ನು ಸೇವಿಸಿದ ನಂತರ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಯಾವುದೇ ಏರುಪೇರು ಆಗುವುದಿಲ್ಲ. ಬೇಳೆಯ ಜಿಐ ಮಟ್ಟವು 28 ಆಗಿರುವುದರಿಂದ ಇದು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರ ಆಯ್ಕೆಯಾಗಿದೆ.
ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯಕ: ಹುರಿದ ಬೇಳೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯಾಘಾತದ ಅಪಾಯವನ್ನು ಉಂಟುಮಾಡುವ, ರಕ್ತನಾಳಗಳಲ್ಲಿ ಅಡಚಣೆ ಉಂಟುಮಾಡುವ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಫೈಬರ್ ಭರಿತ ಹುರಿದ ಕಾಳುಗಳ ನಿಯಮಿತ ಸೇವನೆಯಿಂದ ಕಡಿಮೆ ಮಾಡಬಹುದು.
ತೂಕ ನಷ್ಟಕ್ಕೆ ಸಹಾಯಕ: ಹುರಿದ ಬೇಳೆ ಆಹಾರದ ಫೈಬರ್‌ನ ಉತ್ತಮ ಮೂಲವಾಗಿದೆ. ಅಧ್ಯಯನದ ಪ್ರಕಾರ, ಫೈಬರ್ ಭರಿತ ಹಣ್ಣುಗಳನ್ನು ತಿನ್ನುವುದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಈ ಕಾರಣದಿಂದಲೇ ಹಸಿವು ನೀಗಿಸಲು ಸಿಕ್ಕಿದ್ದನ್ನೆಲ್ಲಾ ತಿನ್ನುವುದನ್ನು ತಪ್ಪಿಸುತ್ತದೆ. ಇದಲ್ಲದೆ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಮೂಳೆಗಳ ಆರೋಗ್ಯಕ್ಕೆ ಪ್ರಯೋಜನ: ಹುರಿದ ಕಾಳು ಮೂಳೆಗಳನ್ನು ಆರೋಗ್ಯಕರವಾಗಿಡುವುದರ ಜೊತೆಗೆ ಅವುಗಳ ಬಲವಾಗಿಸುವ ಕೆಲಸ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಹುರಿದ ಬೇಳೆಯಲ್ಲಿ ಇರುವ ಮ್ಯಾಂಗನೀಸ್ ಮತ್ತು ರಂಜಕವು ನಿಮ್ಮ ಮೂಳೆಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೀಲು ನೋವು ಮುಂತಾದ ಪರಿಸ್ಥಿತಿಗಳನ್ನು ತಡೆಯುತ್ತದೆ.
ಹೃದಯವನ್ನು ಆರೋಗ್ಯಕ್ಕೆ ಸಹಾಯಕ: ಮ್ಯಾಂಗನೀಸ್, ಫೋಲೇಟ್, ಫಾಸ್ಫರಸ್ ಮತ್ತು ತಾಮ್ರದಿಂದ ಸಮೃದ್ಧವಾಗಿರುವ ಹುರಿದ ಬೇಳೆ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ರಂಜಕವು ವಿಶೇಷವಾಗಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.
ರಕ್ತದೊತ್ತಡವನ್ನು ನಿಯಂತ್ರಣ: ಬೇಳೆ ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲವಾಗಿದ್ದು, ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದೆ. ಹುರಿದ ಬೇಳೆಯಲ್ಲಿ ತಾಮ್ರ, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ ಇರುತ್ತದೆ. ತಾಮ್ರ ಮತ್ತು ಮೆಗ್ನೀಸಿಯಮ್ ಉರಿಯೂತವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಅಲ್ಲದೆ ರಕ್ತನಾಳಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ. ಮ್ಯಾಂಗನೀಸ್ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಹುರಿದ ಬೇಳೆಯಲ್ಲಿ ರಂಜಕವಿರುವುದರಿಂದ ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
(ಸೂಚನೆ: ಮೇಲೆ ನೀಡಲಾದ ಯಾವುದೇ ಪರಿಹಾರವನ್ನು ಪ್ರಯತ್ನಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಲು ನಾವು ವಿನಂತಿಸುತ್ತೇವೆ. ನಿಮಗೆ ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದೆ.)
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ