ನಿಮ್ಮ ಪಾದಗಳಲ್ಲಿ ಕಂಡುಬರುವ ಈ ಲಕ್ಷಣ ಹೃದಯಾಘಾತದ ಸಂಕೇತವಾಗಿರಬಹುದು!

|

Updated on: Mar 21, 2024 | 3:06 PM

ಪಾದಗಳು, ಕಣಕಾಲುಗಳು ಮತ್ತು ಹೊಟ್ಟೆಯ ಊತವು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕಾಲುಗಳು ಮತ್ತು ಪಾದಗಳಲ್ಲಿ ಊತವನ್ನು ಪೆರಿಫೆರಲ್ ಎಡಿಮಾ ಎಂದು ಕರೆಯಲಾಗುತ್ತದೆ. ಇದರಿಂದ ಕಾಲುಗಳು ಭಾರ, ಬೂಟುಗಳನ್ನು ಧರಿಸಲು ತೊಂದರೆ, ಪಾದಗಳು ಬಿಸಿಯಾಗಲು ಮತ್ತು ಗಟ್ಟಿಯಾಗಲು ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ನಿಮ್ಮ ಪಾದಗಳಲ್ಲಿ ಕಂಡುಬರುವ ಈ ಲಕ್ಷಣ ಹೃದಯಾಘಾತದ ಸಂಕೇತವಾಗಿರಬಹುದು!
Heart Disease and Your Feet
Follow us on

ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುವಕರು ಕೂಡ ಹೃದಯಾಘಾತದಿಂದ ಬಳಲುತ್ತಿರುವುದು ಆತಂಕಕಾರಿಯಾಗಿದೆ. ಆದರೆ ಹೃದ್ರೋಗವನ್ನು ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯ ಮೂಲಕ  ತಡೆಗಟ್ಟಬಹುದು. ವಿವಿಧ ರೋಗಲಕ್ಷಣಗಳ ಆಧಾರದ ಮೇಲೆ ಹೃದಯಾಘಾತವನ್ನು ಮೊದಲೇ ಕಂಡುಹಿಡಿಯಬಹುದು ಎಂದು ತಜ್ಞರು ಹೇಳುತ್ತಾರೆ.

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ . ಹೆಚ್ಚಿದ ಕೊಲೆಸ್ಟ್ರಾಲ್ ಮತ್ತು ಕಾಲುಗಳ ಊತವು ಹೃದ್ರೋಗದ ಪ್ರಾಥಮಿಕ ಲಕ್ಷಣಗಳಾಗಿವೆ. ಕಾಲುಗಳಲ್ಲಿ ಊತವು ಹೃದಯ ವೈಫಲ್ಯದ ಸಂಕೇತವಾಗಿದೆ ಎಂದು ತಜ್ಞರು ಹೇಳುತ್ತಾರೆ. ರಕ್ತಪರಿಚಲನೆಯ ತೊಂದರೆಗಳು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತವೆ. ರಕ್ತ ಸಂಚಾರದಲ್ಲಿ ತೊಂದರೆಯಾದರೆ ಪಾದಗಳಲ್ಲಿ ನೀರು ತುಂಬಿಕೊಂಡು, ಪಾದಗಳ ಊತಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಕಾಲುಗಳಲ್ಲಿ ಊತವು ಹೃದ್ರೋಗದ ಪ್ರಾಥಮಿಕ ಚಿಹ್ನೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: High Cholesterol: ಪುರುಷರಲ್ಲಿ ಅಧಿಕ ಕೊಲೆಸ್ಟ್ರಾಲ್​ನ 5 ಲಕ್ಷಣಗಳಿವು

ಪಾದಗಳು, ಕಣಕಾಲುಗಳು ಮತ್ತು ಹೊಟ್ಟೆಯ ಊತವು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕಾಲುಗಳು ಮತ್ತು ಪಾದಗಳಲ್ಲಿ ಊತವನ್ನು ಪೆರಿಫೆರಲ್ ಎಡಿಮಾ ಎಂದು ಕರೆಯಲಾಗುತ್ತದೆ. ಇದರಿಂದ ಕಾಲುಗಳು ಭಾರವಾಗಿರುತ್ತದೆ. ಇದರಿಂದ ಬೂಟುಗಳನ್ನು ಧರಿಸಲು ತೊಂದರೆ, ಪಾದಗಳು ಬಿಸಿಯಾಗಲು ಮತ್ತು ಗಟ್ಟಿಯಾಗಲು ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವು ಹೃದಯ ಕಾಯಿಲೆಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಆಹಾರ ಸೇವನೆಯಲ್ಲಿ ಬದಲಾವಣೆಗಳನ್ನು ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಎಣ್ಣೆಯುಕ್ತ ಆಹಾರವನ್ನು ಆದಷ್ಟು ಕಡಿಮೆ ಮಾಡಿ, ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಆಹಾರ ಸೇವನೆಯಲ್ಲಿ ಉಪ್ಪನ್ನು ಸಂಪೂರ್ಣವಾಗಿ ಕಡಿಮೆ ಮಾಡಬೇಕು. ದೇಹದಲ್ಲಿ ಹೆಚ್ಚುವರಿ ಸೋಡಿಯಂ ಉರಿಯೂತಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ