Vitamin D: ಬೇಸಿಗೆಯಲ್ಲಿ ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗಿರುವ ಲಕ್ಷಣಗಳಿವು

ವಿಟಮಿನ್ ಡಿ ನಮ್ಮ ದೇಹದ ಅನೇಕ ಅಂಗಗಳ ಕಾರ್ಯವನ್ನು ನಿಯಂತ್ರಿಸುತ್ತದೆ ಮತ್ತು ಸುಧಾರಿಸುತ್ತದೆ. ದೇಹದಲ್ಲಿ ವಿಟಮಿನ್ ಡಿ ಅಂಶ ಕಡಿಮೆಯಾದರೂ ಅಪಾಯ, ಹೆಚ್ಚಾದರೂ ಅಪಾಯ. ಸೂರ್ಯನ ಕಿರಣಗಳಿಂದ ನಮ್ಮ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ಆದರೆ, ಕೆಲವೊಮ್ಮೆ ಬೇಸಿಗೆಯಲ್ಲಿ ಕೂಡ ನಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.

Vitamin D: ಬೇಸಿಗೆಯಲ್ಲಿ ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗಿರುವ ಲಕ್ಷಣಗಳಿವು
ವಿಟಮಿನ್ ಡಿImage Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 20, 2024 | 6:42 PM

ಸೂರ್ಯನ ಬಿಸಿಲಿನಿಂದ ನಮ್ಮ ದೇಹಕ್ಕೆ ವಿಟಮಿನ್ ಡಿ (Vitamin D) ಸಿಗುತ್ತದೆ. ಇದರ ಜೊತೆಗೆ ಕೆಲವು ಆಹಾರಗಳು ಮತ್ತು ಸಪ್ಲಿಮೆಂಟ್​ಗಳು ಸಹ ನಮ್ಮ ದೇಹಕ್ಕೆ ವಿಟಮಿನ್ ಡಿಯನ್ನು ಒದಗಿಸಲು ಸಹಕಾರಿಯಾಗಿವೆ. ವಿಟಮಿನ್ ಡಿ ಕೇವಲ ವಿಟಮಿನ್ ಮಾತ್ರವಲ್ಲ; ಹಾರ್ಮೋನ್ ಅಥವಾ ಪ್ರೋಹಾರ್ಮೋನ್ ಕೂಡ ಆಗಿದೆ. ವಿಟಮಿನ್ ಡಿ ಕೊರತೆಯಿಂದ ಮೂಳೆ ನೋವು, ಕೀಲು ನೋವು, ಸ್ನಾಯು ಸೆಳೆತ, ಮೂಳೆ ಅಥವಾ ಹಲ್ಲುಗಳ ಬೆಳವಣಿಗೆಯ ಸಮಸ್ಯೆಗಳು ಮುಂತಾದ ತೊಂದರೆಗಳು ಉಂಟಾಗುತ್ತವೆ. ವಿಟಮಿನ್ ಡಿ ಕೊರತೆಯು ಹೈಪರ್​ಥೈರಾಯ್ಡಿಸಮ್​ಗೆ ಕೂಡ ಕಾರಣವಾಗುತ್ತದೆ.

ವಿಟಮಿನ್ ಡಿ ಕೊರತೆಯ ಸಾಮಾನ್ಯ ಲಕ್ಷಣಗಳು:

  • ಮೂಳೆ ನೋವು ಮತ್ತು ಕೀಲು ನೋವು
  • ಆಯಾಸ
  • ಸ್ನಾಯು ನೋವು
  • ಕೂದಲು ಉದುರುವಿಕೆ
  • ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು
  • ಖಿನ್ನತೆಯ ಮನಸ್ಥಿತಿಯಂತಹ ಮಾನಸಿಕ ಬದಲಾವಣೆಗಳು
  • ಗಾಯಗಳು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು

ಹೆಚ್ಚಿನ ಪ್ರಮಾಣದ ಪಾಲಿಫಿನಾಲ್‌ಗಳನ್ನು ಹೊಂದಿರುವ ಡ್ರೈಫ್ರೂಟ್​ಗಳು ಉರಿಯೂತದ ಪರಿಣಾಮಗಳನ್ನು ತೋರಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗಿದ್ದರೆ ವಿಟಮಿನ್ ಡಿ ಸಮೃದ್ಧವಾಗಿರುವ ಕೆಲವು ಡ್ರೈಫ್ರೂಟ್​ಗಳನ್ನು ಸೇವಿಸಬಹುದು.

ಇದನ್ನೂ ಓದಿ: Vitamins: ಮಹಿಳೆಯರ ಆರೋಗ್ಯಕ್ಕೆ ಅತ್ಯಗತ್ಯವಾದ 5 ವಿಟಮಿನ್​ಗಳಿವು

ಒಣಗಿದ ಖರ್ಜೂರದಲ್ಲಿ ಕಂಡುಬರುವ ಪ್ರಮುಖ ವಿಟಮಿನ್‌ಗಳಲ್ಲಿ ಒಂದು ವಿಟಮಿನ್ ಡಿ. ಇದು ಅನೇಕ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಣದ್ರಾಕ್ಷಿ ವಿಟಮಿನ್‌ ಎ, ಕೆ, ಫೈಬರ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿದೆ. ವಾಲ್‌ನಟ್‌ಗಳು ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ತುಂಬಿದ ಪೋಷಕಾಂಶ ದಟ್ಟವಾದ ನಟ್ಸ್ ಆಗಿದೆ. ಇದು ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಇ ಮತ್ತು ಡಿಗಳಿಂದ ತುಂಬಿರುತ್ತದೆ.

ಬಾದಾಮಿಯು ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಬಾದಾಮಿ ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹಾಗೇ, ವಿಟಮಿನ್ ಡಿ ಹೊಂದಿರುವ ಡ್ರೈಫ್ರೂಟ್​ಗಳಲ್ಲಿ ಒಂದಾಗಿದೆ. ಏಪ್ರಿಕಾಟ್​ ನೋಡಲು ಚಿಕ್ಕದಾಗಿರುತ್ತವೆ. ಆದರೆ, ಇದರಲ್ಲಿ ಹೇರಳವಾದ ಪೌಷ್ಟಿಕಾಂಶದ ಅಂಶಗಳಿರುತ್ತವೆ. ಈ ಡ್ರೈಫ್ರೂಟ್​ ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ.

ಇದನ್ನೂ ಓದಿ: Vitamin D: ದೇಹದಲ್ಲಿ ವಿಟಮಿನ್ ಡಿ ಅತಿಯಾದರೆ ಏನಾಗುತ್ತದೆ?

ಗೋಡಂಬಿಗಳು ರುಚಿಕರವಾದ ಡ್ರೈಫ್ರೂಟ್ ಆಗಿದ್ದು, ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಗೋಡಂಬಿಯು ವಿಟಮಿನ್ ಇ ಮತ್ತು ವಿಟಮಿನ್ ಕೆ ಸೇರಿದಂತೆ ಹಲವಾರು ಪ್ರಮುಖ ಜೀವಸತ್ವಗಳ ಸಮೃದ್ಧ ಮೂಲವಾಗಿದೆ. ಪಿಸ್ತಾಗಳು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಸಮೃದ್ಧ ಮೂಲವಾಗಿರುವುದರ ಜೊತೆಗೆ, ವಿಟಮಿನ್ ಡಿ, ಬಿ 6, ಪೊಟ್ಯಾಸಿಯಮ್ ಮತ್ತು ತಾಮ್ರದಂತಹ ಪ್ರಯೋಜನಕಾರಿ ಪೋಷಕಾಂಶಗಳನ್ನು ಸಹ ಒಳಗೊಂಡಿದೆ

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ