Side Effect : ಲೈಂಗಿಕ ತೃಪ್ತಿಗಾಗಿ ಪದೇ ಪದೇ ವಯಾಗ್ರ ಮಾತ್ರೆ ಸೇವಿಸಿದರೆ ಹೃದಯಾಘಾತ ಖಂಡಿತ

ಸೆಕ್ಸ್ ಲೈಫ್ ಚೆನ್ನಾಗಿರಬೇಕು ಎಂದು ಬಯಸುವುದು ಸಹಜ. ಹೀಗಾಗಿ ಪುರುಷರು ಲೈಂಗಿಕ ತೃಪ್ತಿಗಾಗಿ ನಾನಾ ರೀತಿಯ ಕಸರತ್ತು ಮಾಡಿ ಎಡವಟ್ಟುಗಳಿಗೆ ಸಿಲುಕಿ ಹಾಕಿರುವ ಘಟನೆಗಳು ಈಗಾಗಲೇ ಬೆಳಕಿಗೆ ಬಂದಿದೆ. ಲೈಂಗಿಕ ತೃಪ್ತಿಗಾಗಿ ತೆಗೆದುಕೊಳ್ಳುವ ವಯಾಗ್ರದಂತಹ ಮಾತ್ರೆಗಳು ದೇಹದಲ್ಲಿ ಉತ್ತಮ ರಕ್ತದ ಹರಿವಿಗೆ ರಕ್ತನಾಳಗಳನ್ನು ವಿಸ್ತರಿಸುವ ಮೂಲಕ ಕೆಲಸ ಮಾಡುತ್ತವೆ ಎಂದಿದ್ದಾರೆ. ಅದಲ್ಲದೇ ಈ ಮಾತ್ರೆಗಳಿಂದ ಆರೋಗ್ಯದ ಮೇಲಾಗುವ ನಾನಾ ರೀತಿಯ ಸಮಸ್ಯೆಗಳ ಕುರಿತು ಅಚ್ಚರಿಕಾರಿ ಅಂಶಗಳನ್ನು ಬಹಿರಂಗ ಪಡಿಸಿದ್ದಾರೆ.

Side Effect : ಲೈಂಗಿಕ ತೃಪ್ತಿಗಾಗಿ ಪದೇ ಪದೇ ವಯಾಗ್ರ ಮಾತ್ರೆ ಸೇವಿಸಿದರೆ ಹೃದಯಾಘಾತ ಖಂಡಿತ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 19, 2024 | 2:18 PM

ಒತ್ತಡದ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿ ಬದಲಾವಣೆಯಿಂದಾಗಿ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಹೆಚ್ಚಿನವರು ಪುರುಷರು ನಿಮಿರುವಿಕೆ ಸಮಸ್ಯೆಯಿಂದ ಮುಕ್ತಿ ಪಡೆಯಲೆಂದು ವಯಾಗ್ರ ಮಾತ್ರೆಗಳನ್ನು ಸೇವಿಸುತ್ತಾರೆ. ಸಾಮಾನ್ಯವಾಗಿ ಈ ವಯಾಗ್ರ ಮಾತ್ರೆಗಳು ನಿಮಿರುವಿಕೆಯ ಅಸಾಮಾನ್ಯ ಕ್ರಿಯೆಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಆದರೆ ನೀಲಿ ಮಾತ್ರೆಗಳ ಸೇವನೆಯಿಂದಾಗಿ ಹೃದಯಾಘಾತ ಮತ್ತು ಮೆದುಳಿನ ರಕ್ತಸ್ರಾವದಂತಹ ಮಾರಣಾಂತಿಕ ಕಾಯಿಲೆಗಳ ಅಪಾಯದ ಮಟ್ಟವು ಹೆಚ್ಚಾಗಬಹುದು ಎನ್ನಲಾಗಿದೆ.

ವಯಾಗ್ರದಂತಹ ಮಾತ್ರೆಗಳ ಸೇವನೆಯಿಂದ ಈ ಸಮಸ್ಯೆಗಳು ದೂರ

ವಯಾಗ್ರದಂತಹ ಇಡಿ ಮಾತ್ರೆಗಳು ದೇಹದಲ್ಲಿ ಉತ್ತಮ ರಕ್ತದ ಹರಿವಿಗೆ ರಕ್ತನಾಳಗಳನ್ನು ವಿಸ್ತರಿಸುವ ಮೂಲಕ ಕೆಲಸ ಮಾಡುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಶ್ವಾಸಕೋಶದ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಈ ಮಾತ್ರೆಗಳು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಅದಲ್ಲದೇ ಜೆಟ್ ಲ್ಯಾಗ್, ಎತ್ತರದ ಕಾಯಿಲೆ ಮತ್ತು ಆಲ್ಫ್ಮರ್ನ ಕಾಯಿಲೆಯಿಂದ ವೇಗವಾಗಿ ಚೇತರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ; ಈ ಯುವತಿಗೆ ಎರಡು ಗರ್ಭಕೋಶ, ಎರಡು ಯೋನಿ, ಇದು ಗರ್ಭಾಶಯದ ಡಿಡೆಲ್ಸಿಸ್ ಕಾಯಿಲೆ?

ವಯಾಗ್ರದಂತಹ ಇಡಿ ಮಾತ್ರೆಗಳ ಸೇವನೆಯಿಂದ ಸಾವಿನ ಅಪಾಯವಿದೆಯೇ?

ಯಾವುದೇ ಸಾವುಗಳು ನೇರವಾಗಿ ವಯಾಗ್ರದಂತಹ ಇಡಿ ಮಾತ್ರೆಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ತಜ್ಞರು ಹೇಳುತ್ತಿದ್ದರೂ, ಅವುಗಳ ಬಳಕೆಯ ಒಂದು ಅಂಶವು ಸಾವಿಗೆ ಕಾರಣವಾಗಬಹುದು ಎನ್ನಲಾಗಿದೆ. ಆದರೆ ಹೆಚ್ಚಿನ ಸಾವುಗಳು ಈ ಸಮಸ್ಯೆಗಳಿಂದ ಬಳಲುತ್ತಿರುವ ಹಾಗೂ ಲೈಂಗಿಕತೆಯನ್ನು ಹೊಂದಿರುವ ಪುರುಷರಲ್ಲಿ ಕಂಡುಬರುತ್ತವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಈ ವಯಾಗ್ರ ಮಾತ್ರೆಗಳನ್ನು ಬಳಸುವ 60 ವರ್ಷ ವಯಸ್ಸಿನ ಜನರಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ವರದಿಯಾಗಿವೆ. ಅದರಲ್ಲಿಯೂ ಶೇಕಡಾ 31ರಷ್ಟು ಜನರು ಹೃದಯಾಘಾತದಂತಹ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಮಿದುಳಿನ ರಕ್ತಸ್ರಾವದಿಂದಾಗಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ. ಈ ಮಾತ್ರೆಗಳ ಸೇವನೆಯೂ ಪಾರ್ಶ್ವವಾಯುವಿಗೂ ಕಾರಣವಾಗಿದೆ ಎನ್ನಲಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ