Holi 2024: ಹೋಳಿ ಹಬ್ಬಕ್ಕೆ ನಿಮ್ಮ ಮನೆಯನ್ನು ಕಲರ್ಫುಲ್ ಆಗಿಸಲು ಹೀಗೆ ಮಾಡಿ
ಈ ಹೋಳಿ ಹಬ್ಬದಲ್ಲಿ ನಾವು ನಮ್ಮ ಮನೆಯ ಸುತ್ತಲಿನ ವಸ್ತುಗಳನ್ನು ಬಳಸಿ ಮತ್ತು ಸುಂದರವಾಗಿ ಕಾಣುವಂತೆ ಹೇಗೆ ಮಾಡಬಹುದು? ಯಾವ ರೀತಿಯ ವಸ್ತುಗಳನ್ನು ಬಳಸಬಹುದು? ಹೋಳಿ ಹಬ್ಬದಂದು ನಿಮ್ಮ ಮನೆಯನ್ನು ಕಲರ್ಫುಲ್ ಆಗಿಸುವುದು ಹೇಗೆಂಬುದರ ಕುರಿತು ವಿವರ ಇಲ್ಲಿದೆ.
ನಿಮ್ಮ ಮನೆಯ ಅಲಂಕಾರದಲ್ಲಿ ವರ್ಣರಂಜಿತ ಹೂವುಗಳನ್ನು ಬಳಸುವುದರಿಂದ ಜಾಗವನ್ನು ಬೆಳಗಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮನೆಯಲ್ಲಿ ತುಂಬಾ ಸಂತೋಷ ಮತ್ತು ಪ್ರೀತಿಯನ್ನು ತುಂಬುತ್ತದೆ. ನಿಮ್ಮ ಮನೆ ಹೋಳಿ ಹಬ್ಬಕ್ಕೆ (Holi Celebration) ಸಿದ್ಧವಾಗಿದೆಯೇ? ಹೆಚ್ಚಿನ ಸಮಯವಿಲ್ಲದೆ ನಿಮ್ಮ ಮನೆಯನ್ನು ಸುಲಭವಾಗಿ ಕಲರ್ಫುಲ್ ಆಗಿಸುವುದು ಹೇಗೆ? ಪರಿಸರಸ್ನೇಹಿಯಾಗಿ ಮನೆಯನ್ನು ಸಿಂಗರಿಸುವುದು ಹೇಗೆಂದು ಯೋಚಿಸುತ್ತಿದ್ದೀರಾ? ಅದಕ್ಕೆ ಪರಿಹಾರ ಇಲ್ಲಿದೆ.
ಬಣ್ಣದ ದುಪಟ್ಟಾಗಳೊಂದಿಗೆ ಗೋಡೆ ಅಲಂಕರಿಸಿ:
ಹೋಳಿ ಹಬ್ಬಕ್ಕೆ ನಿಮ್ಮ ಮನೆಯ ಗೋಡೆಗಳಿಗೆ ಕಲರ್ ಕಲರ್ ದುಪಟ್ಟಾಗಳನ್ನು ಇಳಿಬಿಟ್ಟು ಸಿಂಗರಿಸಿ. ಇದು ಗೋಡೆಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತದೆ.
ವರ್ಣರಂಜಿತ ರಗ್‌ಗಳು, ಕುಶನ್‌ಗಳು ಮತ್ತು ಕರ್ಟನ್‌ಗಳು:
ನಿಮ್ಮ ಮನೆಯಲ್ಲಿ ಬಣ್ಣಗಳನ್ನು ಸೇರಿಸಲು ನೀವು ವರ್ಣರಂಜಿತ ಮಿಶ್ರಣವನ್ನು ಆಯ್ಕೆ ಮಾಡಬಹುದು. ಕುಶನ್‌ಗಳು, ಕರ್ಟನ್‌ಗಳು ಮತ್ತು ರಗ್‌ಗಳನ್ನು ಬಳಸಬಹುದು. ಇವು ನಿಮ್ಮ ಮನೆಯಲ್ಲಿ ರೋಮಾಂಚಕ ವಾತಾವರಣವನ್ನು ಸೃಷ್ಟಿಸುತ್ತವೆ.
ಇದನ್ನೂ ಓದಿ: ಉಪ್ಪಿಲ್ಲದ ಆಹಾರ, 10 ನಿಮಿಷದ ವಾಕ್; 1 ವರ್ಷದಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಮಹಿಳೆ!
ಕರಕುಶಲ ಹೂವುಗಳು ಮತ್ತು ಲ್ಯಾಂಪ್ ಶೇಡ್‌ಗಳು:
ನಿಮ್ಮ ಮುಖ್ಯ ಬಾಗಿಲಿನ ಪ್ರವೇಶದ್ವಾರದಲ್ಲಿ ನೇತಾಡುವ ವರ್ಣರಂಜಿತ ಹೂವುಗಳು ಮತ್ತು ಲ್ಯಾಂಪ್‌ಶೇಡ್‌ಗಳನ್ನು ಹಾಕಬಹುದು. ನೀವು ಅವುಗಳನ್ನು ವರ್ಣರಂಜಿತ ಕರಕುಶಲ ಕಾಗದಗಳನ್ನು ಬಳಸಿ ಸುಂದರವಾಗಿ ಮಾಡಬಹುದು ಮತ್ತು ಅವುಗಳನ್ನು ಉದ್ದನೆಯ ದಾರದಲ್ಲಿ ಕಟ್ಟಬಹುದು. ಅವುಗಳನ್ನು ಬಾಗಿಲುಗಳು, ಬಾಲ್ಕನಿಗಳು ಅಥವಾ ಕಿಟಕಿಗಳ ಮೇಲೆ ಹಾಕಬಹುದು.
ಕಲಾತ್ಮಕ ವಾಲ್ ಹ್ಯಾಂಗಿಂಗ್‌ಗಳು:
ನಿಮ್ಮ ಪ್ರಾಪಂಚಿಕವಾಗಿ ಕಾಣುವ ಗೋಡೆಗಳಿಗೆ ಗ್ಲಾಮರ್ ಸೇರಿಸಲು ವರ್ಣರಂಜಿತ ಕಲಾತ್ಮಕ ವಾಲ್ ಹ್ಯಾಂಗಿಂಗ್‌ಗಳನ್ನು ಹಾಕುವ ಮೂಲಕ ನಿಮ್ಮ ಹೋಳಿ ಪಾರ್ಟಿಗೆ ರಾಯಲ್ ಸ್ಪರ್ಶವನ್ನು ನೀಡಿ.
ಇದನ್ನೂ ಓದಿ: ನಿಮ್ಮ ಅಡುಗೆಮನೆಯನ್ನು ಪರಿಸರಸ್ನೇಹಿಯಾಗಿಸಬೇಕೆಂದರೆ ಮರದ ಪಾತ್ರೆ ಬಳಸಿ
ವರ್ಣರಂಜಿತ ಹೂದಾನಿಗಳು:
ಮನೆಯ ಮೂಲೆಗಳಲ್ಲಿ ಬಣ್ಣಬಣ್ಣದ ಹೂದಾನಿಗಳನ್ನು ಇಡುವ ಮೂಲಕ ನಿಮ್ಮ ಮನೆಯ ನೋಟವನ್ನು ಸುಂದರಗೊಳಿಸಬಹುದು. ನಿಮ್ಮ ಮಣ್ಣಿನ ಮಡಕೆಗಳನ್ನು ಅಕ್ರಿಲಿಕ್ ಬಣ್ಣಗಳಿಂದ ಅಲಂಕರಿಸುವುದು ಮತ್ತು ನಿಮ್ಮ ಲಿವಿಂಗ್ ರೂಮಿನಲ್ಲಿ ಬಣ್ಣಗಳ ರಷ್ ಅನ್ನು ತರುವುದು ಒಳ್ಳೆಯದು.
ಹೂವಿನ ದಳಗಳೊಂದಿಗೆ ರಂಗೋಲಿ:
ರಂಗೋಲಿ ಯಾವುದೇ ಜಾಗವನ್ನು ಹೆಚ್ಚು ಸುಂದರಗೊಳಿಸುತ್ತದೆ. ಹೋಳಿ ಬಣ್ಣಗಳು ಮತ್ತು ಹೂವಿನ ದಳಗಳನ್ನು ಬಳಸಿಕೊಂಡು ಮನೆಬಾಗಿಲಲ್ಲಿ ರಂಗೋಲಿ ವಿನ್ಯಾಸಗಳನ್ನು ಹಾಕಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Tue, 19 March 24