AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪ್ಪಿಲ್ಲದ ಆಹಾರ, 10 ನಿಮಿಷದ ವಾಕ್; 1 ವರ್ಷದಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಮಹಿಳೆ!

ತೂಕ ಇಳಿಸಿಕೊಳ್ಳಲು ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಆದರೆ, ನಮ್ಮ ಬದ್ಧತೆ, ಆಸಕ್ತಿ, ನಿಷ್ಠೆ ಇದ್ದರೆ ತೂಕ ಇಳಿಸುವುದು ಕಷ್ಟವೇನಲ್ಲ. ಇಲ್ಲೊಬ್ಬರು ಮಹಿಳೆ ಪ್ರತಿದಿನ ಕೇವಲ 10 ನಿಮಿಷ ವಾಕ್ ಮಾಡುವ ಮೂಲಕ, ಉಪ್ಪು ಹಾಕದ ಊಟ ಸೇವಿಸುವ ಮೂಲಕ 1 ವರ್ಷದಲ್ಲಿ 23 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇದು ಹೇಗೆ ಗೊತ್ತಾ? ತೂಕವನ್ನು ಕಡಿಮೆ ಮಾಡಿಕೊಳ್ಳಲು ಯಾವೆಲ್ಲ ಮಾರ್ಗಗಳನ್ನು ಅನುಸರಿಸಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

ಉಪ್ಪಿಲ್ಲದ ಆಹಾರ, 10 ನಿಮಿಷದ ವಾಕ್; 1 ವರ್ಷದಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಮಹಿಳೆ!
ಸಾಂದರ್ಭಿಕ ಚಿತ್ರ Image Credit source: iStock
ಸುಷ್ಮಾ ಚಕ್ರೆ
|

Updated on: Mar 11, 2024 | 1:10 PM

Share

ತೂಕ ಇಳಿಸಿಕೊಳ್ಳುವುದು ಬಹಳಷ್ಟು ಜನರಿಗೆ ದೊಡ್ಡ ವಿಷಯವಲ್ಲ. ಆದರೆ, ಇನ್ನು ಕೆಲವರಿಗೆ ಸುಲಭವೂ ಅಲ್ಲ. ಕೆಲವು ಜನರು ಎಷ್ಟೇ ಪ್ರಯತ್ನಪಟ್ಟರೂ ದೇಹದ ಕೊಬ್ಬು ಕರಗಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಥೈರಾಯ್ಡ್ ಮತ್ತು PCODಯಂತಹ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವವರಿಗೆ ತೂಕ ಇಳಿಸಿಕೊಳ್ಳುವುದು ಸುಲಭದ ವಿಷಯವಲ್ಲ. ಹೆಚ್ಚೇನೂ ಡಯೆಟ್, ವರ್ಕ್​ಔಟ್ ಮಾಡದೆ ಕೇವಲ 1 ವರ್ಷದಲ್ಲಿ 23 ಕೆಜಿ ತೂಕವನ್ನು ಇಳಿಸಿಕೊಂಡ ಮಹಿಳೆಯೊಬ್ಬರ ಸಾಹಸಗಾಥೆ ಇಲ್ಲಿದೆ.

ತೂಕವನ್ನು ಇಳಿಸಿಕೊಳ್ಳುವ ಕಲ್ಪನೆಯು ನನ್ನ ಮನಸ್ಸಿನಲ್ಲಿ ಗಾಢವಾಗಿ ಕುಳಿತಿತ್ತು. ಅದರಿಂದಾಗಿ ಹಠದಿಂದ ಒಂದು ವರ್ಷದ ಅವಧಿಯಲ್ಲಿ 23 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ ಎಂದು 30 ವರ್ಷದ ಆವಂತಿಕಾ ಸರನ್ ಹೇಳಿದ್ದಾರೆ. 1 ವರ್ಷದ ಹಿಂದೆ 90 ಕೆಜಿ ತೂಕವಿದ್ದ ಆವಂತಿಕಾ ಈಗ 67 ಕೆಜಿಗೆ ಇಳಿದಿದ್ದಾರೆ. ಆವಂತಿಕಾ ಅವರು ಈಗ ಮತ್ತಷ್ಟು ಯಂಗ್ ಆಗಿ ಕಾಣುತ್ತಿದ್ದಾರೆ. ನನ್ನ ತೂಕದ ಕಾರಣದಿಂದಾಗಿ ಕಡಿಮೆ ಆತ್ಮವಿಶ್ವಾಸವನ್ನು ಅನುಭವಿಸುತ್ತಿದ್ದೆ. ತೂಕವನ್ನು ಕಳೆದುಕೊಳ್ಳುವುದು ಮತ್ತು ನನ್ನ ಆರೋಗ್ಯದ ಬಗ್ಗೆ ಗಮನ ನೀಡುವುದು ನನಗೆ ಅತ್ಯಗತ್ಯವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Black Salt: ಉತ್ತಮ ಆರೋಗ್ಯಕ್ಕೆ ಬಿಳಿ ಉಪ್ಪಿನ ಬದಲು ಕಪ್ಪು ಉಪ್ಪು ಬಳಸಿ ನೋಡಿ

“ನಾನು ಎಂದಿಗೂ ಆಹಾರಪ್ರೇಮಿಯಾಗಿರಲಿಲ್ಲ. ಹಾಗಾಗಿ ನನ್ನ ಆಹಾರಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಿದ ನಂತರ ಅದನ್ನು ನಿಭಾಯಿಸಲು ನನಗೆ ಕಷ್ಟವಾಗಲಿಲ್ಲ. ಸಾಧ್ಯವಾದಷ್ಟು ಗ್ಲುಟನ್ ಅಂಶವಿರುವ ಆಹಾರ ಸೇವನೆ ಅವಾಯ್ಡ್ ಮಾಡಿದೆ. ಮಾಮೂಲಿ ಹಾಲು ಕುಡಿಯುವ ಬದಲು ಬಾದಾಮಿ ಹಾಲು ಕುಡಿಯತೊಡಗಿದೆ. ನಾನು ಚಪಾತಿಗಳನ್ನು ಸೇವಿಸುವುದನ್ನು ನಿಲ್ಲಿಸಿದೆ. ಎರಡು ವಾರಗಳಲ್ಲಿ ಒಮ್ಮೆ ಮಾತ್ರ ಮಲ್ಟಿಗ್ರೇನ್ ಬ್ರೆಡ್ ಅನ್ನು ಸೇವಿಸುತ್ತಿದ್ದೆ” ಎಂದು ಆವಂತಿಕಾ ತಮ್ಮ ತೂಕ ಇಳಿಸುವಿಕೆಯ ಪ್ರಯಾಣದ ಬಗ್ಗೆ ಹೇಳಿದ್ದಾರೆ.

“ವಾರದಲ್ಲಿ ಎರಡು ಬಾರಿ ಉಪ್ಪು ಹಾಕದ ಊಟ ಮಾಡಬೇಕೆಂದು ನಾನು ನಿಯಮ ಮಾಡಿಕೊಂಡಿದ್ದೇನೆ. ನಾನು ಥೈರಾಯ್ಡ್ ರೋಗಿಯಾಗಿರುವುದರಿಂದ ನನ್ನ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಹೀಗಾಗಿ, ನಾನು ವಾರದಲ್ಲಿ ಕನಿಷ್ಠ 2 ದಿನಗಳ ಕಾಲ ರಾತ್ರಿಯ ಊಟದಲ್ಲಿ ಉಪ್ಪನ್ನು ಸೇವಿಸುವುದನ್ನು ಅವಾಯ್ಡ್ ಮಾಡುತ್ತೇನೆ. ನಾನು ಇಂದಿನವರೆಗೂ ಈ ನಿಯಮಕ್ಕೆ ಬದ್ಧಳಾಗಿದ್ದೇನೆ. ಅದರಿಂದ ನನಗೆ ಸಾಕಷ್ಟು ಪ್ರಯೋಜನವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Salt Side Effects: ಅತಿಯಾದ ಉಪ್ಪು ಸೇವನೆ ಕಡಿಮೆ ಮಾಡಲು ಹೀಗೆ ಮಾಡಿ

ಆವಂತಿಕಾ ಪ್ರತಿದಿನ 3.5 ಲೀಟರ್ ನೀರನ್ನು ತಪ್ಪದೆ ಸೇವಿಸುತ್ತಾರೆ. ನೀರು ಕುಡಿಯಲು ಮೊದಲು ಕಷ್ಟವಾಗುತ್ತಿದ್ದುದರಿಂದ ನೀರಿನಲ್ಲಿ ಜೀರಿಗೆ, ಮೆಂತ್ಯ ಮತ್ತು ಸೋಂಪಿನ ಕಾಳುಗಳನ್ನು ಕುದಿಸಿ ತಯಾರಿಸಿದ 1 ಲೀಟರ್ ಡಿಟಾಕ್ಸ್ ನೀರನ್ನು ಸೇವಿಸುತ್ತಿದ್ದರು. ಈಗಲೂ ಅದೇ ಅಭ್ಯಾಸ ಇಟ್ಟುಕೊಂಡಿದ್ದಾರೆ. ದಿನಕ್ಕೆ ಎರಡು ಬಾರಿ ಗ್ರೀನ್ ಚಹಾವನ್ನು ಕುಡಿಯುತ್ತಾರೆ. ದಿನಕ್ಕೆ ಒಮ್ಮೆ ಮಜ್ಜಿಗೆಯನ್ನು ಸೇವಿಸುತ್ತಾರೆ.

ದಿನವೂ ಯೋಗ ಮತ್ತು ಏರೋಬಿಕ್ಸ್‌ ಮಾಡುವ ಆವಂತಿಕಾ ಊಟವಾದ ನಂತರ 10 ನಿಮಿಷ ವಾಕ್ ಮಾಡಲು ಮರೆಯುವುದಿಲ್ಲ. ಇದು ಅವರ ತೂಕ ಇಳಿಸುವ ಪ್ರಯಾಣದಲ್ಲಿ ಸಾಕಷ್ಟು ಸಹಾಯ ಮಾಡಿದೆ. ನೀವು ಸಮಗ್ರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಬಯಸುವವರಾಗಿದ್ದರೆ 60% ಡಯಟ್ ಮತ್ತು 40% ವರ್ಕೌಟ್ ನಿಯಮವನ್ನು ಅನುಸರಿಸಿ ಎಂದು ಆವಂತಿಕಾ ಹೇಳುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ