Eating With Hands: ಭಾರತೀಯ ಸಂಸ್ಕೃತಿಯಲ್ಲಿ ಕೈಯಲ್ಲಿಯೇ ಊಟ ಮಾಡುವ ಸಂಪ್ರದಾಯ ರೂಢಿಯಲ್ಲಿದೆ; ಇದರ ಹಿಂದೆಯೂ ಇದೆ ವೈಜ್ಞಾನಿಕ ಕಾರಣ
ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಕೈಯಲ್ಲಿಯೇ ಊಟ ಮಾಡುವ ಸಂಪ್ರದಾಯ ಜಾರಿಯಲ್ಲಿದೆ. ಆದರೆ ಆಧುನಿಕತೆಯ ನೆಪ ಹೇಳಿ ಇಂದು ಹೆಚ್ಚಿನವರು ಸ್ಟೈಲ್ ಆಗಿ ಸ್ಪೂನ್ ಅಲ್ಲಿಯೇ ಊಟ ಸವಿಯುತ್ತಾರೆ. ಮತ್ತು ಕೈಯಲ್ಲಿ ಊಟ ಮಾಡುವವರನ್ನು ಇವನ್ಯಾರಪ್ಪಾ ಹಳ್ಳಿ ಗಮಾರ ಎಂಬಂತೆ ನೋಡುತ್ತಾರೆ. ಆದರೆ ಕೈಯಲ್ಲಿ ಊಟ ಮಾಡುವ ಅಭ್ಯಾಸವು ಕೇವಲ ಸಂಪ್ರದಾಯವಷ್ಟೇ ಅಲ್ಲ. ಇದು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.
ಇಂದಿನ ದಿನಗಳಲ್ಲಿ ಆಧುನಿಕತೆ, ಪಾಶ್ಚಾತ್ಯ ಸಂಸ್ಕೃತಿ ನೆಪದಲ್ಲಿ ಚಮಚದಲ್ಲಿ ಊಟ ಮಾಡುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಹೌದು ಅದೆಷ್ಟೋ ಭಾರತೀಯರು ಹೋಟೇಲ್, ರೆಸ್ಟೋರೆಂಟ್ ಮಾತ್ರವಲ್ಲದೆ ಮನೆಗಳಲ್ಲಿಯೂ ಸ್ಟೈಲ್ ಆಗಿ ಸ್ಪೂನ್ ಅಲ್ಲಿಯೇ ಊಟ ಸವಿಯುತ್ತಾರೆ. ಯಾರಾದರೂ ಕೈಯಲ್ಲಿ ಊಟ ಮಾಡಿದರೆ ಇವನ್ಯಾರಪ್ಪಾ ಹಳ್ಳಿ ಗಮಾರ ಎಂಬಂತೆ ನೋಡುವವರೂ ಸಹ ಇದ್ದಾರೆ. ಆದರೆ ಇಂದಿನ ಪೀಳಿಗೆಯ ಅದೆಷ್ಟೋ ಜನರಿಗೆ ಗೊತ್ತಿಲ್ಲ, ಕೈಯಿಂದ ಊಟ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆಯೆಂದು. ಹೌದು ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಪ್ರತಿಯೊಂದು ಆಚರಣೆ, ಪದ್ದತಿಯ ಹಿಂದೆಯೂ ಒಂದೊಂದು ವೈಜ್ಞಾನಿಕ ಕಾರಣವಿದೆ. ಅದೇ ರೀತಿ ಕೈಯಿಂದ ಊಟ ಮಾಡುವ ಸಂಪ್ರದಾಯದ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆ. ಈ ಬಗ್ಗೆ ಮಯೂರ್ ಕಾರ್ತಿಕ್ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅದ್ಭುತವಾಗಿ ವಿವರಣೆಯನ್ನು ನೀಡಿದ್ದಾರೆ.
ಕೈಗಳಿಂದ ಊಟ ಮಾಡುವುದರಿಂದ ಲಭಿಸುವ ಪ್ರಯೋಜನಗಳು:
- ಮೊದಲನೆಯದಾಗಿ ಕೈಗಳಿಂದ ಆಹಾರವನ್ನು ಸ್ಪರ್ಶಿಸಿದಾಗ ನಮ್ಮ ಮೆದುಳು ಹೊಟ್ಟೆಗೆ ಸೂಚನೆಗಳನ್ನು ರವಾನಿಸುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಅಂಗಾಂಗಗಳು ಆಹಾರವನ್ನು ಜೀರ್ಣಿಸಲು ಪೂರ್ವ ತಯಾರಿ ಮಾಡಿಕೊಳ್ಳಲು ಸುಲಭವಾಗುತ್ತದೆ. ಮತ್ತು ಇದರಿಂದ ಹೊಟ್ಟೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
- ಎರಡನೆಯದಾಗಿ ನಾವು ಊಟ ಮಾಡುವಾಗ ಎಲ್ಲಾ ಬೆರಳುಗಳು ಒಂದು ಮುದ್ರೆಯಾಕಾರ ಪಡೆಯುತ್ತದೆ. ಇದನ್ನು ರಮಣ ವಾಯು ಮುದ್ರೆ ಅಂತಾ ಕರಿತಾರೆ. ಈ ಮುದ್ರೆಯು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಹಲವಾರು ಕಾಯಿಲೆಗಳಿಗೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
- ಮೂರನೆಯದಾಗಿ ಇದು ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಾವು ಕೈಯಿಂದ ಊಟವನ್ನು ಮಾಡಿದಾಗ ಆಹಾರ ಎಷ್ಟು ಬಿಸಿಯಾಗಿದೆ ಎಂದು ಅದರ ತಾಪಮಾನವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ನಾಲಿಗೆ ಸುಡುವುದನ್ನು ತಪ್ಪಿಸಬಹುದು.
- ನಾಲ್ಕನೆಯದಾಗಿ ಕೈಗಳಿಂದ ಊಟ ಮಾಡಿದಾಗ ಇದು ನಮ್ಮ ಮನಸ್ಸನ್ನು ಆಹಾರದ ಶಕ್ತಿಯೊಂದಿಗೆ ಸಂಪರ್ಕಿಸುವ ಮೂಲಕ ಆಹಾರದ ಜಾಗೃತಿಯನ್ನು ಹೆಚ್ಚಿಸುತ್ತದೆ. ಹೀಗೆ ಕೈಯಿಂದ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗುವುದು ಮಾತ್ರವಲ್ಲದೆ, ನಾವು ತಿನ್ನುವ ಆಹಾರದ ಸುವಾಸನೆ, ರುಚಿ ಎಲ್ಲವನ್ನು ಚೆನ್ನಾಗಿ ಆಸ್ವಾದಿಸಬಹುದು. ಜೊತೆಗೆ ನೀವು ಎಷ್ಟು ತಿಂದಿದ್ದೀರಾ ಎಂಬುದರ ಅಂದಾಜು ಕೂಡಾ ಸಿಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ