Health Tips: ಅತಿಯಾದ ಮೂತ್ರ ವಿಸರ್ಜನೆ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು

ಆರೋಗ್ಯವು ಚೆನ್ನಾಗಿದ್ದು ಬಿಟ್ಟರೆ ಏನು ಬೇಕಾದರೂ ಸಾಧಿಸಬಹುದು. ಉತ್ತಮವಾದ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಪೌಷ್ಟಿಕಾಂಶಯುಕ್ತ ಆಹಾರ, ನೀರು ಸೇವನೆ ಹಾಗೂ ಸರಿಯಾದ ನಿದ್ದೆ ಮುಖ್ಯವಾಗುತ್ತದೆ. ಅದಲ್ಲದೇ ಪ್ರಕೃತಿಯ ಕರೆಗಳನ್ನು ಸರಿಯಾದ ಸಮಯಕ್ಕೆ ಆಗಿಬಿಟ್ಟರೆ ಆರೋಗ್ಯವು ಪರಿಪೂರ್ಣವಾಗಿರುತ್ತದೆ. ಆದರೆ ಕೆಲವರಿಗೆ ಮೂತ್ರವಿಸರ್ಜನೆ ಮಾಡುವುದೆಂದರೆ ಅಲಸ್ಯ. ಹೀಗಾಗಿ ಹೆಚ್ಚಿನವರು ಮೂತ್ರವನ್ನು ಕಟ್ಟಿಕೊಂಡೆ ಇರುತ್ತಾರೆ. ಅದಲ್ಲದೇ ಕೆಲವರನ್ನು ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆಯು ಕಾಡುತ್ತಿರುತ್ತದೆ. ಹಾಗಾದ್ರೆ ಈ ಸಮಸ್ಯೆಯಿಂದ ಮುಕ್ತಿಹೊಂದಲು ಕೆಲವು ಮನೆ ಮದ್ದನ್ನು ಸೇವಿಸಬಹುದು.

Health Tips: ಅತಿಯಾದ ಮೂತ್ರ ವಿಸರ್ಜನೆ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 11, 2024 | 11:11 AM

ಮೂತ್ರ ವಿಸರ್ಜನೆಯೆನ್ನುವುದು ನೈಸರ್ಗಿಕ ಕರೆಯಾಗಿದ್ದು, ಕೆಲವರಲ್ಲಿ ಅತಿಯಾದ ಮೂತ್ರವಿಸರ್ಜನೆಯ ಸಮಸ್ಯೆಯು ಕಾಡುತ್ತಿದೆ. ದೇಹದ ಉಷ್ಣವು ಅಧಿಕವಾಗಿ, ನೀರಿನ ಪ್ರಮಾಣವು ಕಡಿಮೆಯಾಗಿ ಉರಿ ಮೂತ್ರ ರೋಗ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಶುಭ ಕಾರ್ಯಗಳು ಹಾಗೂ ಸಮಾರಂಭಗಳಿಗೆ ತೆರಳಿದಾಗ ಪದೇ ಪದೇ ಶೌಚಾಲಯದ ಕಡೆಗೆ ಹೋಗುವುದು ಮುಜುಗರಕ್ಕೀಡು ಮಾಡುತ್ತದೆ. ಮೂತ್ರ ವಿಸರ್ಜನೆಗೆ ಸಂಬಂಧ ಪಟ್ಟಂತೆ ಸಮಸ್ಯೆಯು ಪ್ರಾರಂಭವಾದ ತಕ್ಷಣವೇ ಮನೆಯಲ್ಲೇ ಪರಿಹಾರವನ್ನು ಕಂಡುಕೊಂಡರೆ ಸೂಕ್ತ.

ಮೂತ್ರ ವಿಸರ್ಜನೆ ಸಮಸ್ಯೆಗೆ ಸರಳ ಮನೆ ಮದ್ದುಗಳು:

  • ಹೆಚ್ಚು ಮೂತ್ರವಿಸರ್ಜನೆ ಆಗುತ್ತಿದ್ದರೆ ದಾಲ್ಚಿನಿ ಪುಡಿಯನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿದರೆ ಗುಣಮುಖವಾಗುತ್ತದೆ.
  • ಒಂದು ಬಟ್ಟಲು ಎಳನೀರಿಗೆ ಸ್ವಲ್ಪ ಬೆಲ್ಲ, ಅರ್ಧ ಚಮಚ ಕೊತ್ತಂಬರಿ ಬೀಜದ ಪುಡಿ ಬೆರೆಸಿ ದಿನಕ್ಕೆ ಎರಡು ಬಾರಿ ಸೇವನೆ ಮಾಡುವುದು ಪರಿಣಾಮಕಾರಿಯಾಗಿದೆ.
  • ಜೀರಿಗೆ ಕಷಾಯ ಮಾಡಿ ಕುಡಿಯುವುದರಿಂದಲೂ ಉರಿ ಮೂತ್ರ ಸಮಸ್ಯೆಯು ದೂರವಾಗುತ್ತದೆ.
  • ಊಟದ ನಂತರ ನಿಯಮಿತವಾಗಿ ಜೇನುತುಪ್ಪವನ್ನು ಸೇವಿಸುತ್ತಿದ್ದರೆ ಬಹುಮೂತ್ರ ರೋಗವೂ ನಿವಾರಣೆಯಾಗುತ್ತದೆ.
  • ಏಲಕ್ಕಿ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಮೂತ್ರ ವಿಸರ್ಜನೆಗೆ ಸಂಬಂಧ ಪಟ್ಟ ಸಮಸ್ಯೆಗಳು ಶಮನವಾಗುತ್ತದೆ.
  • ಬಾಳೆಹೂವಿನ ರಸವನ್ನು ಸೌತೆಕಾಯಿ ರಸದೊಂದಿಗೆ ಸೇರಿಸಿ ಕುಡಿದರೆ ಮೂತ್ರ ವಿಸರ್ಜನೆಯು ಸರಿಯಾಗಿ ಆಗುತ್ತದೆ.
  • ಬಿಳಿದ್ರಾಕ್ಷಿಯನ್ನು ತಿನ್ನುವುದರಿಂದ ಉರಿ ಮೂತ್ರರೋಗ ಬರುವುದಿಲ್ಲ.
  • ಎಳೆನೀರಿಗೆ ನಿಂಬೆರಸವನ್ನು ಬೆರೆಸಿ ಕುಡಿದರೆ ಮೂತ್ರ ವಿಸರ್ಜನೆಯು ಸಲೀಸಾಗಿ ಆಗುತ್ತದೆ.
  • ಸೋಂಪು ಕಾಳನ್ನು ನುಣ್ಣಗೆ ಅರೆದು, ಹೊಟ್ಟೆಯ ಮೇಲೆ ಹಚ್ಚಿಕೊಂಡರೆ ಮೂತ್ರ ತಡೆಯು ಕಡಿಮೆಯಾಗುತ್ತದೆ.
  • ಸೋಂಪಿನ ಕಾಳಿನ ಕಷಾಯವನ್ನು ಜೇನುತುಪ್ಪದೊಂದಿಗೆ ಸೇರಿಸಿ, ಸೇವಿಸುವುದರಿಂದ ಮೂತ್ರವಿಸರ್ಜನೆ ಸಲೀಸಾಗಿ ಆಗುವುದು.
  • ನೀರಿಗೆ ನಿಂಬೆರಸ, ಉಪ್ಪು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರರೋಗವು ಮಾಯಾವಾಗುತ್ತದೆ.
  • ಕುದಿಸಿ ಆರಿಸಿದ ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ಉರಿ ಮೂತ್ರ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ.
  • ಕಬ್ಬಿನ ಹಾಲು, ಎಳನೀರು, ಹಸಿಯ ಶುಂಠಿರಸ, ನಿಂಬೆರಸ ಈ ಎಲ್ಲವನ್ನು ಬೆರೆಸಿ ಸೇವಿಸುತ್ತ ಬಂದರೆ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಮಾಯಾವಾಗುತ್ತದೆ.
  • ಮೊಸರನ್ನಕ್ಕೆ ಬೆಲ್ಲ ಮತ್ತು ಹುರಿದ ಕರಿ ಮೆಣಸು ಪುಡಿಯನ್ನು ಸೇರಿಸಿ, ಊಟ ಮಾಡುವುದು ಉತ್ತಮ ಔಷಧವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ