AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಬೆವರಿನ ದುರ್ನಾತದಿಂದ ಮೂಗು ಮುಚ್ಚಿಕೊಳ್ತಿದ್ದೀರಾ, ಇಲ್ಲಿದೆ ಸರಳ ಮನೆ ಮದ್ದು

ಸುಡು ಬಿಸಿಲು ಜೋರಾಗಿದೆ, ಹೊರಗಡೆ ಹೋಗಿ ಬಂದರಂತೂ ಕೇಳುವುದೇ ಬೇಡ ತಲೆ ಸಿಡಿದೇ ಹೋಗುತ್ತದೆ. ಬೆವರಿನಿಂದಾಗಿ ಕೆಟ್ಟ ವಾಸನೆಯೂ ಬರಲು ಶುರುವಾಗುತ್ತದೆ. ಈ ಸಮಸ್ಯೆಯೂ ಬೇಸಿಗೆಯಲ್ಲಿ ಹೆಚ್ಚಿನವರಲ್ಲಿ ಕಾಡುವುದಿದೆ. ಹೀಗಾದಾಗ ಸಾರ್ವಜನಿಕ ಸ್ಥಳ ಗಳಲ್ಲಿ ಎಲ್ಲರೊಂದಿಗೆ ಬೆರೆಯುವುದಕ್ಕೆ ಕಷ್ಟವಾಗುತ್ತದೆ. ಯಾರು ಏನು ಅಂದುಕೊಳ್ತಾರೆ ಎನ್ನುವ ಮುಜುಗರದಲ್ಲೇ ಇರಬೇಕಾಗುತ್ತದೆ. ಹೀಗಾಗಿ ಈ ಸಮಸ್ಯೆಗೆ ಮನೆ ಮದ್ದಿನ ಮೂಲಕ ಮುಕ್ತಿ ಹೊಂದಬಹುದು.

Health Tips: ಬೆವರಿನ ದುರ್ನಾತದಿಂದ ಮೂಗು ಮುಚ್ಚಿಕೊಳ್ತಿದ್ದೀರಾ, ಇಲ್ಲಿದೆ ಸರಳ ಮನೆ ಮದ್ದು
Sweat Smell
ಸಾಯಿನಂದಾ
| Edited By: |

Updated on:Mar 10, 2024 | 4:21 PM

Share

ಕೆಲವರು ಈ ಬೇಸಿಗೆಯಲ್ಲಿ ಅತಿಯಾಗಿ ಬೆವರುತ್ತಾರೆ, ಇದು ಸಹಜ ಕೂಡ. ಸೂರ್ಯನ ಕಿರಣಕ್ಕೆ ಮೈಯೊಡ್ಡಿ ನಿಂತರೆ, ಸ್ವಲ್ಪ ಕೆಲಸವನ್ನೆದಾರೂ ಮಾಡಿದರೆ ಸಾಕು ಬೆವರಲು ಶುರುವಾಗುತ್ತದೆ. ದೇಹದಲ್ಲಿನ ನೀರಿನ ಅಂಶವು ಹೊರಗೆ ಹೋಗುವುದು ಸಹಜ ಪ್ರಕ್ರಿಯೆಯೇ. ಕೆಲವೊಮ್ಮೆ ಯಾಕಾದ್ರೂ ಇಷ್ಟು ಬೆವರುತ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುವುದಿದೆ. ಈ ರೀತಿಯಾಗಲು ಆಹಾರ ಪದ್ಧತಿ, ಜೀವನ ಶೈಲಿ ಹಾಗೂ ಹಾರ್ಮೋನ್ ಬದಲಾವಣೆ ಹೀಗೆ ಕಾರಣಗಳು ನೂರೆಂಟು ಇದ್ದರೂ ಯಾರೊಂದಿಗೂ ಬೆರೆಯಲು ಆಗುವುದೇ ಇಲ್ಲ.

ಬೆವರಿನ ಕೆಟ್ಟವಾಸನೆಗೆ ಸರಳ ಮನೆ ಮದ್ದುಗಳು:

  1. ದೇಹ ಅತಿಯಾಗಿ ಬೆವರುತ್ತಿದ್ದರೆ ಅಳಲೆಕಾಯಿ ಸಿಪ್ಪೆಯನ್ನು ಬಿಸಿನೀರಿನಲ್ಲಿ ನುಣ್ಣಗೆ ಅರೆದು ಮೈಗೆ ಹಚ್ಚಿಕೊಂಡು, ಒಂದು ಗಂಟೆ ಬಿಟ್ಟು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಈ ಸಮಸ್ಯೆಯೂ ನಿಲ್ಲುತ್ತದೆ.
  2. ಬದನೆಕಾಯಿ ಹೋಳುಗಳನ್ನು ನೆನೆಸಿದ ನೀರಿನಲ್ಲಿ ಮೈ ಕೈ ತೊಳೆಯುತ್ತಿದ್ದರೆ ಬೆವರುವುದು ಕಡಿಮೆಯಾಗುತ್ತದೆ.
  3. ಬೆವರಿನ ದುರ್ವಾಸನೆಗೆ ಆಲೂಗಡ್ಡೆಯನ್ನು ತುಂಡರಿಸಿ 10 ನಿಮಿಷಗಳ ಕಾಲ ಕಂಕುಳಿನ ಭಾಗದಲ್ಲಿ ಉಜ್ಜುವುದು ಪರಿಣಾಮಕಾರಿಯಾಗಿದೆ.
  4. ಅತಿ ಹೆಚ್ಚು ಬೆವರುವ ಜಾಗಗಳಿಗೆ ರೋಸ್ ವಾಟರ್ ಹಚ್ಚಿ ಹತ್ತು ನಿಮಿಷಗಳ ನಂತರ ಸ್ನಾನ ಮಾಡುವುದು ಒಳ್ಳೆಯದು.
  5. ಅಡುಗೆ ಸೋಡವನ್ನು ನೀರಿಗೆ ಬೆರೆಸಿ ಬೆವರುವ ಜಾಗಕ್ಕೆ ಹಚ್ಚಿಕೊಳ್ಳುವುದು ಉತ್ತಮ.
  6. ಮುಳ್ಳು ಸೌತೆಯ ಹೋಳುಗಳನ್ನು ಬೆವರುವ ಜಾಗವನ್ನು ಉಜ್ಜಿಕೊಳ್ಳುತ್ತ ಇದ್ದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
  7. ನಿಂಬೆ ಹಣ್ಣಿನ ಹೋಳುಗಳಿಂದ ಕಂಕುಳ ಭಾಗವನ್ನು ಉಜ್ಜಿಕೊಳ್ಳುತ್ತಿದ್ದರೆ ಬೆವರಿನ ಕೆಟ್ಟ ವಾಸನೆ ಹಾಗೂ ಕಪ್ಪು ಕಲೆಯೂ ನಿವಾರಣೆಯಾಗುತ್ತದೆ.
  8. ಟೊಮೊಟೊ ರಸವನ್ನು ಕೈಯ ಕೆಳಭಾಗಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಕೆಟ್ಟ ವಾಸನೆಯೂ ದೂರವಾಗುತ್ತದೆ.
  9. ಅಲೋವೆರಾ ಜೆಲ್ ತೆಗೆದುಕೊಂಡು ರಾತ್ರಿಯಲ್ಲಿ ಕಂಕುಳ ಭಾಗಕ್ಕೆ ಹಚ್ಚಿ ಮರುದಿನ ಬೆಳಗ್ಗೆ ತೊಳೆಯುವುದರಿಂದ ಬೆವರಿನ ವಾಸನೆಯಿಂದ ಮುಕ್ತಿ ಹೊಂದಬಹುದು.
  10. ಗ್ರೀನ್ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು, ಈ ನೀರನ್ನು ಕಂಕುಳ ಭಾಗಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಿದರೆ ಬೆವರಿನ ದುರ್ನಾತವು ದೂರವಾಗುತ್ತದೆ.
  11.  ಅರಿಶಿನ ಪುಡಿಗೆ ನೀರು ಬೆರೆಸಿ ಮಿಶ್ರಣವನ್ನು ಮಾಡಿ ಕಂಕುಳಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯುವುದರಿಂದ ಪರಿಣಾಮಕಾರಿ ಔಷಧಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Sun, 10 March 24

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ