ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆಯಿಂದ ಮುಕ್ತಿ ಹೊಂದಲು ಇಲ್ಲಿದೆ ಸುಲಭ ಮಾರ್ಗ

ಬೇಸಿಗೆ ಬಂತೆಂದರೆ ತ್ವಚೆಯ ರಕ್ಷಣೆಯತ್ತ ಹೆಚ್ಚು ಗಮನ ಕೊಡಬೇಕಾಗುತ್ತದೆ. ಸೂರ್ಯನ ಕಿರಣಗಳಿಂದ ಮೃದುವಾದ ಚರ್ಮವು ರಕ್ಷಿಸುವುದೇ ದೊಡ್ಡ ಸವಾಲು. ಸುಡು ಬಿಸಿಲಿನ ನಡುವೆ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತದೆ. ಬೆವರುಗುಳ್ಳೆಗಳು, ಚರ್ಮದ ಉರಿ ಹಾಗೂ ತುರಿಕೆಯಂತಹ ಕಾಯಿಲೆಯಿಂದ ಕೆಲವರಂತೂ ಒದ್ದಾಡಿ ಬಿಡುತ್ತಾರೆ. ಆದರೆ ಇಂತಹ ಕಾಯಿಲೆಗಳಿಗೆ ಪ್ರಾರಂಭದಲ್ಲಿಯೇ ಮನೆಯಲ್ಲಿ ಔಷಧಿ ಮಾಡಿ ಪರಿಹಾರ ಕಂಡುಕೊಳ್ಳಬಹುದು.

ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆಯಿಂದ ಮುಕ್ತಿ ಹೊಂದಲು ಇಲ್ಲಿದೆ ಸುಲಭ ಮಾರ್ಗ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 23, 2024 | 12:52 PM

ಬೇಸಿಗೆಗಾಲವೆಂದರೆ ಬಹಳಷ್ಟು ಕಿರಿಕಿರಿ. ಹೀಗಾಗಿ ಬೇಸಿಗೆಯನ್ನು ಅಷ್ಟಾಗಿ ಯಾರು ಕೂಡ ಇಷ್ಟ ಪಡುವುದಿಲ್ಲ. ಪ್ರಾರಂಭದಲ್ಲಿ ನಮ್ಮ ದೇಹವು ಚಳಿಗಾಲದಿಂದ ಬೇಸಿಗೆ ಕಾಲದ ಹವಾಮಾನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚಿನವರಿಗೆ ಆರೋಗ್ಯವು ಕೈ ಕೊಡುತ್ತದೆ. ಈ ಸಮಯದಲ್ಲಿ ವಿಪರೀತ ಬಿಸಿಲಿನಿಂದ ಚರ್ಮದ ಸಮಸ್ಯೆಗಳು ಕಾಡುವುದು ಸರ್ವೇ ಸಾಮಾನ್ಯ. ದೇಹದಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು ಎದ್ದು, ಕೀವು ತುಂಬಿಕೊಳ್ಳುತ್ತದೆ, ಇಲ್ಲದಿದ್ದರೆ ವಿಪರೀತ ತುರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಸಮಸ್ಯೆಯಿಂದ ಮುಕ್ತರಾಗಲು ಮನೆ ಮದ್ದನ್ನು ಪ್ರಯತ್ನಿಸಬಹುದು

* ತೊಳೆದ ಅಕ್ಕಿಯ ನೀರಿನಿಂದ ಮೈಯನ್ನು ತೊಳೆದುಕೊಳ್ಳುವುದರಿಂದ ಬೆವರು ಗುಳ್ಳೆಗಳು ಕಡಿಮೆಯಾಗುತ್ತದೆ.

* ಬದನೆಕಾಯಿ ನೆನೆಹಾಕಿದ ನೀರಿನಲ್ಲಿ ಕೈಕಾಲು ಮುಖ ತೊಳೆಯುತ್ತಿದ್ದರೆ ಗುಳ್ಳೆಯಂತಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

* ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಗುಳ್ಳೆಯ ಮೇಲೆ ಲೇಪಿಸುತ್ತಿದ್ದರೆ ಬಹುಬೇಗನೆ ಶಮನವಾಗುತ್ತದೆ.

* ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಬೆವರು ಸಾಲೆಯ ಮೇಲೆ ದಿನಕ್ಕೆ ಒಂದೆರಡು ಬಾರಿ ಹಚ್ಚಿದರೆ ಗುಳ್ಳೆಗಳು ಇಲ್ಲದಂತಾಗುತ್ತದೆ.

* ಬಿಸಿ ನೀರಿಗೆ ಕಲ್ಲು ಉಪ್ಪು ಬೆರೆಸಿ ಸ್ನಾನ ಮಾಡಿದರೆ ಚರ್ಮದ ಸೋಂಕು ಸೇರಿದಂತೆ ಬೆವರುಗುಳ್ಳೆಗಳಿಗೆ ಪರಿಣಾಮಕಾರಿಯಾದ ಮನೆ ಮದ್ದಾಗಿದೆ.

* ಪ್ರತಿ ದಿನವೂ ತಣ್ಣೀರು ಸ್ನಾನ ಮಾಡಿದರೆ ಈ ಸಮಸ್ಯೆಯು ದೂರವಾಗುತ್ತದೆ.

* ನೆಲ್ಲಿಕಾಯಿಯನ್ನು ಜಜ್ಜಿ ತೆಗೆದ ರಸವನ್ನು ಮೈಗೆ ಹಚ್ಚುತ್ತಿದ್ದರೆ ಬೆವರುಗುಳ್ಳೆಗಳೂ ಇಲ್ಲದಂತಾಗುತ್ತದೆ.

* ತೆಂಗಿನ ಎಣ್ಣೆಯನ್ನು ಸೌತೆಕಾಯಿ ರಸದೊಂದಿಗೆ ಬೆರೆಸಿ ಈ ಬೆವರು ಗುಳ್ಳೆಗಳ ಮೇಲೆ ಹಚ್ಚಿದರೆ ಗುಣಮುಖವಾಗುತ್ತದೆ.

* ರೋಸ್ ವಾಟರ್‌ಗೆ ಶ್ರೀಗಂಧದ ಪುಡಿ, ಲಾವಂಚದ ಪುಡಿ ಈ ಎಲ್ಲವನ್ನು ಸಮಪ್ರಮಾಣದಲ್ಲಿ ಸೇರಿಸಿಮಿಶ್ರಣ ಮಾಡಿ, ಬೆವರು ಗುಳ್ಳೆಗಳ ಮೇಲೆ ಲೇಪಿಸುವುದರಿಂದ ಪರಿಣಾಮಕಾರಿಕಾರಿ ಔಷಧಿಯಾಗಿದೆ.

* ತುಳಸಿ ರಸ ಮತ್ತು ಶುಂಠಿಯನ್ನು ಸೇರಿಸಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಇದನ್ನು ಪ್ರತಿ ದಿನ ಹಚ್ಚುತ್ತ ಬರುವುದರಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತದೆ.

* ಅರಶಿನ ಮತ್ತು ಶುಂಠಿಯನ್ನು ಚೆನ್ನಾಗಿ ರುಬ್ಬಿಕೊಂಡು, ಈ ಮಿಶ್ರಣವನ್ನು ನೇರವಾಗಿ ಗುಳ್ಳೆಯ ಮೇಲೆ ಹಚ್ಚುವುದು ಪರಿಣಾಮಕಾರಿ.

* ಬೇಯಿಸಿದ ಮೊಟ್ಟೆಯ ಬಿಳಿ ಭಾಗವನ್ನು ನೆನಸಿ, ಅದನ್ನು ಗುಳ್ಳೆಯ ಮೇಲೆ ಇಡುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗುವುದು ಸುಲಭ.

ಇದನ್ನೂ ಓದಿ: ಬೇಸಿಗೆಯಲ್ಲಿ ಆರೋಗ್ಯಕ್ಕೆ ಹಿತಕರ ಈ ದಾಳಿಂಬೆ ಜ್ಯೂಸ್​​​, ಈ ಐಟಂ ಇದ್ದರೆ ಸಾಕು ಮಾಡೋದು ಕಷ್ಟವೇನಲ್ಲ

* ಕುದಿಯುವ ಬಿಸಿನೀರಿಗೆ ಜೋಳದ ಹಿಟ್ಟು ಹಾಕಿ ಮಿಶ್ರಣ ಮಾಡಿ, ಇದನ್ನು ಬೆವರು ಗುಳ್ಳೆಯ ಮೇಲೆ ಹಚ್ಚುತ್ತ ಬರುವುದರಿಂದ ಸಮಸ್ಯೆಯು ನಿವಾರಣೆಯಾಗುತ್ತದೆ.

* ತಣ್ಣೀರಿಗೆ ಜೀರಿಗೆಪುಡಿ ಹಾಕಿ ಸ್ನಾನ ಮಾಡುವುದರಿಂದ ಬೆವರು ಗುಳ್ಳೆಗಳು ಕಡಿಮೆಯಾಗುತ್ತದೆ.

ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಬಳಿ ಚರ್ಚಿಸುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Fri, 23 February 24

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ