ಬೇಸಿಗೆಯಲ್ಲಿ ಆರೋಗ್ಯಕ್ಕೆ ಹಿತಕರ ಈ ದಾಳಿಂಬೆ ಜ್ಯೂಸ್​​​, ಈ ಐಟಂ ಇದ್ದರೆ ಸಾಕು ಮಾಡೋದು ಕಷ್ಟವೇನಲ್ಲ

ಬೇಸಿಗೆ ಬಂತೆಂದರೆ ಸಾಕು ಬಿಸಿಲಿನ ಝಳಕ್ಕೆ ವಿಪರೀತವಾದ ಬಾಯಾರಿಕೆಯಾಗುತ್ತದೆ. ಎಷ್ಟು ನೀರು ಕುಡಿದರೂ ಕೂಡ ದಾಹ ತೀರುವುದಿಲ್ಲ. ಈ ಸಮಯದಲ್ಲಿ ತಂಪುಪಾನೀಯಗಳ ಮೊರೆ ಹೋಗುವವರೇ ಹೆಚ್ಚು. ಸುಡುವ ಬಿಸಿಲಿನ ನಡುವೆ ತಣ್ಣನೆಯ ಪಾನೀಯವನ್ನು ಕುಡಿದರೇ ದೇಹ ಮಾತ್ರವಲ್ಲದೇ ಮನಸ್ಸಿಗೂ ಹಿತವೆನಿಸುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕೆಲವರು ಮನೆಯಲ್ಲಿ ನಾನಾ ಬಗೆಯ ಹಣ್ಣಿನ ಪಾನೀಯಗಳನ್ನು ತಯಾರಿಸುತ್ತಾರೆ. ನಿಮ್ಮ ಮನೆಯಲ್ಲಿ ದಾಳಿಂಬೆ ಹಣ್ಣಿದ್ದರೆ, ಇದರಿಂದ ಆರೋಗ್ಯಕರವಾದ ತಂಪು ಪಾನೀಯ ಮನೆಯಲ್ಲೇ ಸುಲಭವಾಗಿ ಮಾಡಿ ಸೇವಿಸಬಹುದು. ಇದೀಗ, ಸೋಶಿಯಲ್ ಮೀಡಿಯಾದಲ್ಲಿ ದಾಳಿಂಬೆ ಹಣ್ಣಿನ ತಂಪು ಪಾನೀಯ ಮಾಡುವ ವಿಧಾನವೊಂದನ್ನು ಶೇರ್ ಮಾಡಿಕೊಂಡಿದ್ದು ಪಾನೀಯ ಪ್ರಿಯರ ಮನಸ್ಸನ್ನು ಗೆದ್ದುಕೊಂಡಿದೆ.

ಬೇಸಿಗೆಯಲ್ಲಿ ಆರೋಗ್ಯಕ್ಕೆ ಹಿತಕರ ಈ ದಾಳಿಂಬೆ ಜ್ಯೂಸ್​​​, ಈ ಐಟಂ ಇದ್ದರೆ ಸಾಕು ಮಾಡೋದು ಕಷ್ಟವೇನಲ್ಲ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 23, 2024 | 11:23 AM

ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಸಿಲಿನ ಝಳವು ಜೋರಾಗಿದೆ. ಹೀಗೆ ಮುಂದುವರೆದರೆ ಮುಂದಿನ ಎರಡು ಮೂರು ತಿಂಗಳಲ್ಲಿ ಬಿಸಿಲು ಹಾಗೂ ಸೆಕೆಯನ್ನು ತಡೆಯಲು ಸಾಧ್ಯವಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ತಂಪುಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಸಮಯದಲ್ಲಿ ತಂಪಾದ ಪಾನೀಯ ಸೇವಿಸಲು ಮನಸ್ಸು ಬಯಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಜ್ಯೂಸ್ ಗಳನ್ನು ಸೇವಿಸುವ ಬದಲು ಮನೆಯಲ್ಲಿಯೇ ಸರಳವಾದ ದಾಳಿಂಬೆ ಹಣ್ಣಿನ ಪಾನೀಯ ಮಾಡಿ ಕುಡಿಯುವುದು ಆರೋಗ್ಯಕ್ಕೂ ಹಿತಕರ.

ಕೆಂಬಣ್ಣದ ದಾಳಿಂಬೆ ಹಣ್ಣಿನಿಂದ ಜ್ಯೂಸ್ ಮಾಡಿ ಕುಡಿಯುವುದು ಕಷ್ಟದ ಕೆಲಸವಲ್ಲ. ಕೆಂಪು ಕಾಳುಗಳನ್ನು ಹೊಂದಿರುವ ಈ ಹಣ್ಣು ನೋಡುವುದಕ್ಕೆ ಎಷ್ಟು ಚಂದವೋ, ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಆರೋಗ್ಯಕರ ಕೊಬ್ಬು, ನೈಸರ್ಗಿಕ ಸಕ್ಕರೆ, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಫೋಲೇಟ್ ಸೇರಿದಂತೆ ಇನ್ನಿತ್ತರ ಪೋಷಕಾಂಶಗಳು ಹೇರಳವಾಗಿದೆ. ಇದೀಗ ಯಮ್ಮಿ ರೆಸಿಪಿ ಖಜಾನ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಾಳಿಂಬೆ ಹಣ್ಣಿನ ಪಾನೀಯದ ಸಿಂಪಲ್ ರೆಸಿಪಿಯನ್ನು ಶೇರ್ ಮಾಡಿಕೊಳ್ಳಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋದ ಪ್ರಾರಂಭದಲ್ಲಿ ಒಂದು ಮಿಕ್ಸಿ ಜಾರಿಗೆ ಸ್ವಲ್ಪ ಪ್ರಮಾಣದಲ್ಲಿ ದಾಳಿಂಬೆ, ಪುದಿನ ಎಲೆ, ಉಪ್ಪು, ಚಾಟ್ ಮಸಾಲಾ ಹಾಗೂ ನಿಂಬೆ ರಸಕ್ಕೆ ಸ್ವಲ್ಪ ಪ್ರಮಾಣದಲ್ಲಿ ನೀರು ಸೇರಿಸಿ ರುಬ್ಬಿಕೊಳ್ಳಲಾಗಿದೆ. ಆ ಬಳಿಕ ಒಂದು ಲೋಟಕ್ಕೆ ನಾಲ್ಕೈದು ಐಸ್ ತುಂಡುಗಳನ್ನು ಹಾಕಿ, ಈಗಾಗಲೇ ರುಬ್ಬಿದ ಮಿಶ್ರಣವನ್ನು ಸೇರಿಸಲಾಗಿದೆ. ಕೊನೆಗೆ ಬೇಕಾದಷ್ಟು ನೀರು ಸೇರಿಸಿದ್ದು ಆರೋಗ್ಯಯುತವಾದ ದಾಳಿಂಬೆಹಣ್ಣಿನ ತಂಪು ಪಾನೀಯ ಸವಿಯಲು ಸಿದ್ಧವಾಗಿದೆ.

ಇದನ್ನೂ ಓದಿ: ಟೈಮ್ ಪಾಸ್​​​ಗೆಂದು ಮೊಬೈಲ್ ಬಳಸುವ ಗರ್ಭಿಣಿಯರೇ, ಇದು ಅತಿಯಾದರೆ ಹೀಗೂ ಆಗಬಹುದು ಜೋಕೆ!

ಈ ವಿಡಿಯೋವು 34 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿದ ಬಳಕೆದಾರರೊಬ್ಬರು, ರುಚಿಕರ ಹಾಗೂ ಆರೋಗ್ಯಕರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಐಸ್ ಕ್ಯೂಬ್ ಹಾಕುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ. ಇನ್ನೊಬ್ಬರು ರಿಫ್ರೆಶಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:15 am, Fri, 23 February 24