ಅಡುಗೆಗೆ ಬಳಸುವ ತೆಂಗಿನೆಣ್ಣೆಯಲ್ಲಿದೆ ಸೌಂದರ್ಯದ ಗುಟ್ಟು

ಪರಿಮಳಯುಕ್ತ ತೆಂಗಿನೆಣ್ಣೆಯನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ, ಎಲ್ಲಾ ಕಡೆಗಳಲ್ಲಿ ಅಡುಗೆಯಲ್ಲಿ ಈ ತೆಂಗಿನೆಣ್ಣೆಯನ್ನು ಬಳಸುವುದಿಲ್ಲ. ಆದರೆ ಹೆಚ್ಚಿನವರು ತಮ್ಮ ಆಹಾರದ ರುಚಿ ಹಾಗೂ ಘಮ ಹೆಚ್ಚಿಸಲು ಒಗ್ಗರಣೆಗೆ ತೆಂಗಿನೆಣ್ಣೆಯನ್ನೇ ಬಳಸುತ್ತಾರೆ. ಕರಾವಳಿ ಭಾಗಗಳಲ್ಲಿ ತೆಂಗು ಹೆಚ್ಚಾಗಿ ಬೆಳೆಯುವ ಕಾರಣ ಅಡುಗೆಯಲ್ಲಿ ತೆಂಗಿನೆಣ್ಣೆಯ ಪರಿಮಳವು ಇರಲೇಬೇಕು. ಅದಲ್ಲದೇ ವೈದ್ಯರು ಅಡುಗೆಯಲ್ಲಿ ಈ ತೆಂಗಿನೆಣ್ಣೆ ಬಳಸಿ ಎನ್ನುವ ಸಲಹೆಯನ್ನೇ ನೀಡುತ್ತಾರೆ. ಇದನ್ನು ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ಆಹಾರವು ರುಚಿಯಾಗುವುದಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇನ್ನು ದೇಹ ಹಾಗೂ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಲಾಭಗಳೇ ಅಧಿಕವೇ ಎನ್ನಬಹುದು.

ಅಡುಗೆಗೆ ಬಳಸುವ ತೆಂಗಿನೆಣ್ಣೆಯಲ್ಲಿದೆ ಸೌಂದರ್ಯದ ಗುಟ್ಟು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 23, 2024 | 10:56 AM

ಅನಾದಿ ಕಾಲದಿಂದಲೂ ಭಾರತೀಯರು ಬಳಸುವ ಎಣ್ಣೆಗಳಲ್ಲಿ ಈ ತೆಂಗಿನ ಎಣ್ಣೆ ಕೂಡ ಒಂದು. ಕೆಲವು ಕಡೆಗಳಲ್ಲಿ ತೆಂಗಿನೆಣ್ಣೆ ಇಲ್ಲದೆ ಯಾವ ಅಡುಗೆಯೂ ರುಚಿಸುವುದೇ ಇಲ್ಲ. ಹೀಗಾಗಿ ಅಡುಗೆಗೆ ಹಾಗೂ ಕೂದಲಿನ ಆರೈಕೆಗೆ ಮಾತ್ರವಲ್ಲದೇ ದೇಹಕ್ಕೆ ಹಚ್ಚಿದರೂ ಇದರಿಂದಾಗುವ ಲಾಭಗಳು ಅಧಿಕವೇ ಎನ್ನಬಹುದು. ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಸಮೃದ್ಧವಾಗಿದ್ದು, ಈ ತೆಂಗಿನ ಎಣ್ಣೆಯು ಆರೋಗ್ಯಕರ ಎಣ್ಣೆಯೆಂದು ಪರಿಗಣಿಸಲಾಗುತ್ತದೆ. ಈ ಎಣ್ಣೆಯಲ್ಲಿ ಕ್ಯಾಲರಿಗಳು, ವಿಟಮಿನ್ ಇ ಹೇರಳವಾಗಿದ್ದು, ಅನಾರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಕೆಲಸ ಮಾಡುತ್ತದೆ.

* ಚರ್ಮದ ಹಾನಿಯನ್ನು ಸರಿಪಡಿಸುತ್ತದೆ : ಕೊಬ್ಬರಿ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲ ಕ್ಯಾಪ್ರಿಕ್ ಮತ್ತು ಲಾರಿಕ್ ಆಸಿಡ್ ಚರ್ಮವನ್ನು ನಯವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ..ತೆಂಗಿನ ಎಣ್ಣೆಯಲ್ಲಿರುವ ಆಂಟಿಮೈಕ್ರೋಬಿಯಲ್ ಗುಣಗಳು ಚರ್ಮದ ಪದರದ ಮೇಲೆ ಬೆಳೆಯುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ.

* ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ : ಒಣಗಿದ ಚರ್ಮಕ್ಕೆ ಈ ತೆಂಗಿನ ಎಣ್ಣೆಯು ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ಈ ಎಣ್ಣೆಯು ತೇವಾಂಶವನ್ನು ಉಳಿಸಿಕೊಳ್ಳಲು ನೈಸರ್ಗಿಕ ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಒಣ ಹಾಗೂ ಒರಟು ಚರ್ಮವನ್ನು ತೇವಾಂಶಭರಿತವಾಗಿಸಿರುತ್ತದೆ.

* ಚರ್ಮದ ಆರೋಗ್ಯವು ಸುಧಾರಿಸುತ್ತದೆ : ಅಡುಗೆಗೆ ಬಳಸುವ ಈ ತೆಂಗಿನ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ದೇಹ ಹಾಗೂ ಮುಖದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಿ ಚರ್ಮವನ್ನು ಬಿಳುಪಾಗಿಸುತ್ತದೆ. ಉರಿಯೂತ ಹಾಗೂ ಮುಖದ ಮೇಲಿನ ಕೆಂಪಾದ ಬಣ್ಣವನ್ನು ಶಮನಗೊಳಿಸಿ ಸುಂದರವಾಗಿ ಕಾಣಿಸುವಂತೆ ಮಾಡುತ್ತದೆ. ತೆಂಗಿನೆಣ್ಣೆಯು ಕಾಲಜನ್ ನೈಸರ್ಗಿಕ ಉತ್ಪಾದನೆಯನ್ನು ಹೆಚ್ಚುವುದಲ್ಲದೆ, ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ.

* ಚರ್ಮದ ದುರಸ್ತಿಗೆ ಸಹಾಯಕ: ಈ ತೆಂಗಿನ ಎಣ್ಣೆಯು ಚರ್ಮವನ್ನು ಸರಿಪಡಿಸಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆ ದೇಹದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಕಾಲಜನ್ ಮಟ್ಟವನ್ನು ಹೆಚ್ಚಿಸುತ್ತದೆ. ಜೀವಕೋಶಗಳ ಪುನರುತ್ಪಾದನೆ ಹಾಗೂ ಚರ್ಮದ ದುರಸ್ತಿ ಪ್ರಕ್ರಿಯೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ: ಮಕ್ಕಳು ಓದಿದ್ದೆಲ್ಲವೂ ಮರೆತು ಬಿಡಲು ಈ ರೀತಿಯ ಅಭ್ಯಾಸವೇ ಕಾರಣ, ಹೆತ್ತವರೇ ಒಮ್ಮೆ ಗಮನಿಸಿ

* ಮೊಡವೆಗೆ ಅತ್ಯುತ್ತಮ ಔಷಧಿ : ತೆಂಗಿನ ಎಣ್ಣೆಯಲ್ಲಿರುವ ಉರಿಯೂತದ ಗುಣಗಳು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಮತ್ತು ಕ್ಯಾಪ್ರಿಕ್ ಆಸಿಡ್ ಚರ್ಮದ ಮೇಲೆ ಉಂಟುಮಾಡುವ ಬ್ಯಾಕ್ಟಿರಿಯಾವನ್ನು ನಾಶ ಪಡಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ