AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳು ಓದಿದ್ದೆಲ್ಲವೂ ಮರೆತು ಬಿಡಲು ಈ ರೀತಿಯ ಅಭ್ಯಾಸವೇ ಕಾರಣ, ಹೆತ್ತವರೇ ಒಮ್ಮೆ ಗಮನಿಸಿ

ಈಗಿನ ಮಕ್ಕಳಿಗೆ ಪರೀಕ್ಷೆ ಎಂದರೆ ಅಗ್ನಿಪರೀಕ್ಷೆ. ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಮಕ್ಕಳ ಪರೀಕ್ಷೆ ತಯಾರಿಯು ಜೋರಾಗಿಯೇ ಇರುತ್ತದೆ. ಈ ಸಮಯದಲ್ಲಿ ತಾಯಂದಿರು ಓದು ಓದು ಎಂದು ಮಕ್ಕಳ ಹಿಂದೆಯೇ ಸುತ್ತುತ್ತಿರುತ್ತಾರೆ. ಆದರೆ ಕೆಲವು ಮಕ್ಕಳಿಗೆ ಎಷ್ಟು ಓದಿದರೂ ನೆನಪಿನಲ್ಲಿ ಉಳಿಯುವುದೇ ಇಲ್ಲ. ಕೆಲ ಮಕ್ಕಳಂತೂ ಚೆನ್ನಾಗಿ ಓದಿಕೊಂಡಿದ್ದರೂ ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣವೇ ಬ್ಲಾಂಕ್ ಆಗಿ ಬಿಡುತ್ತಾರೆ. ಓದಿದ್ದೆಲ್ಲವು ಮರೆತು ಹೋಗಲು ಕಾರಣಗಳು ಹಲವಾರಾಗಿದ್ದರೂ, ಆರಾಮದಾಯಕವಾಗಿ ಪರೀಕ್ಷೆ ಎದುರಿಸುವತ್ತ ಗಮನ ಹರಿಸಬೇಕು.

ಮಕ್ಕಳು ಓದಿದ್ದೆಲ್ಲವೂ ಮರೆತು ಬಿಡಲು ಈ ರೀತಿಯ ಅಭ್ಯಾಸವೇ ಕಾರಣ, ಹೆತ್ತವರೇ ಒಮ್ಮೆ ಗಮನಿಸಿ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 22, 2024 | 6:00 PM

Share

ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆ ಸಣ್ಣ ಮಕ್ಕಳಿಂದ ಹಿಡಿದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುತ್ತದೆ. ಈ ಸಮಯದಲ್ಲಿ ಪೂರ್ವ ತಯಾರಿಯು ಚೆನ್ನಾಗಿ ನಡೆಸಿದರೆ ಪರೀಕ್ಷೆಗೆ ಭಯ ಪಡಬೇಕಾದ ಅಗತ್ಯವಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪರೀಕ್ಷೆ ಎಂದರೆ ಹೆತ್ತವರ ಒತ್ತಡ ಹಾಗೂ ಸಂಬಂಧಿಕರು ಭಯ ಪಡಿಸುವುದು ಹೆಚ್ಚಾಗಿದೆ. ಒತ್ತಡದಿಂದ ಮಕ್ಕಳು ತಯಾರಿಯ ವೇಳೆ ಹಾಗೂ ಪರೀಕ್ಷೆ ಸಮಯದಲ್ಲಿ ಹೆದರಿಕೊಳ್ಳುತ್ತಾರೆ. ಕೆಲವರೂ ಚೆನ್ನಾಗಿ ಓದಿ ಕೊಂಡಿದ್ದರೂ ಪರೀಕ್ಷೆಯನ್ನು ಒಂದೆರಡು ಘಂಟೆಗಳ ಮುಂಚೆ ಓದಿದ ವಿಷಯಗಳು ನೆನಪಿಗೆ ಬರುವುದೇ ಇಲ್ಲ.

ಓದಿದ್ದೆಲ್ಲವೂ ಮರೆತು ಹೋಗಲು ಕಾರಣಗಳಿವು

* ಭಯ ಪಡುವುದು : ಪರೀಕ್ಷೆ ಎಂದರೇನೇ ಭಯ. ಈ ಸಮಯದಲ್ಲಿ ಕಡಿಮೆ ಅಂಕ ಬಂದರೆ, ಫೇಲ್ ಆದರೆ ಹೀಗೆ ನಾನಾ ರೀತಿಯ ಆಲೋಚನೆಗಳು ಓದುವ ಸಮಯದಲ್ಲಿ ಬರುತ್ತದೆ. ಹೀಗಾದಾಗ ಓದಿದ್ದೆಲ್ಲವು ನೆನಪಿನಲ್ಲಿ ಉಳಿಯುವುದೇ ಇಲ್ಲ. ಪರೀಕ್ಷೆ ಕೊಠಡಿಗೊಳಗೇ ಹೋದಾಗಲು ಮಕ್ಕಳಲ್ಲಿ ಭಯವೇ ಇದ್ದರೆ ಓದಿದ್ದೆಲ್ಲವು ನೆನಪಿಲ್ಲದ್ದಂತಾಗುತ್ತದೆ.

* ಬಾಯಿಪಾಠ ಮಾಡುವ ಅಭ್ಯಾಸ: ಹೆಚ್ಚಿನ ಮಕ್ಕಳು ವಿಷಯವು ಅರ್ಥವಾಗುವುದಿಲ್ಲ ಎಂದು ಇಲ್ಲವಾದರೆ ಓದಿದ್ದೆಲ್ಲವೂ ನೆನಪಿನಲ್ಲಿ ಉಳಿಯಬೇಕು ಎಂದು ಬಾಯಿಪಾಠ ಮಾಡುತ್ತಾರೆ. ಈ ರೀತಿಯಾಗಿ ಅಭ್ಯಾಸ ಮಾಡಿದರೆ ಓದಿದ್ದೆಲ್ಲವು ನೆನಪಿನಲ್ಲಿ ಉಳಿಯುವುದು ಕಷ್ಟ. ಹೀಗಾಗಿ ಓದುವ ಸಮಯದಲ್ಲಿ ವಿಷಯವನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತರೆ ಒಳ್ಳೆಯದು.

* ಓದುವ ವೇಳೆ ಮೊಬೈಲ್ ಬಳಕೆ : ಇಂದಿನ ಮಕ್ಕಳಿಗೆ ಓದುವ ಸಮಯದಲ್ಲಿಯು ಮೊಬೈಲ್ ಹತ್ತಿರ ಇರಲೇಬೇಕು. ಓದುತ್ತ ಮೊಬೈಲ್ ನೋಡುವುದು, ಹೀಗೆ ಮೊಬೈಲ್ ಬಳಕೆ ಮಾಡುವುದರಿಂದ ಓದಿನ ಕಡೆಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾದಾಗ ಓದಿದ ಯಾವ ವಿಷಯವು ನೆನಪಿರದೆ ಮರೆತು ಬಿಡುತ್ತಾರೆ.

ಇದನ್ನೂ ಓದಿ: ದೇಶದ ಅಬಕಾರಿ ಇಲಾಖೆಯ ನೌಕರರ ಕೆಲಸವನ್ನು ಶ್ಲಾಘಿಸುವ ದಿನ

* ಮುಖ್ಯ ವಿಷಯಗಳನ್ನು ನೋಟ್ ಮಾಡಿಕೊಳ್ಳದೇ ಇರುವುದು : ಪರೀಕ್ಷಾ ಪೂರ್ವ ತಯಾರಿಯ ಸಮಯದಲ್ಲಿ ಬಹಳ ಮುಖ್ಯವಾದ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು. ಓದಿದ್ದೆಲ್ಲವು ಮರೆತುಹೋದಾಗ ಟಿಪ್ಪಣಿ ಮಾಡಿಕೊಂಡ ಅಂಶಗಳನ್ನು ಗಮನಿಸಿದಾಗ ಆ ವಿಷಯಗಳನ್ನು ಮತ್ತೆ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ:

* ವಾತಾವರಣವು ಪ್ರಶಾಂತವಾಗಿಲ್ಲದಿರುವುದು : ಮಕ್ಕಳು ಓದುವ ಸ್ಥಳವು ಕೂಡ ಓದಿದ್ದೆಲ್ಲವು ನೆನಪಿನಲ್ಲಿ ಉಳಿಯಲು ಕಾರಣವಾಗುತ್ತದೆ. ಗಲಾಟೆ, ಗದ್ದಲಗಳಿಂದ ಕೂಡಿದ ವಾತಾವರಣದಲ್ಲಿ ಓದಿದರೆ ಯಾವ ವಿಷಯವು ತಲೆಗೆ ಹತ್ತುವುದೇ ಇಲ್ಲ. ಹೀಗಾಗಿ ಸುತ್ತಲಿನ ವಾತಾವರಣವು ಪ್ರಶಾಂತವಾಗಿರುವುದು ಮುಖ್ಯವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!