ಟೈಮ್ ಪಾಸ್​​​ಗೆಂದು ಮೊಬೈಲ್ ಬಳಸುವ ಗರ್ಭಿಣಿಯರೇ, ಇದು ಅತಿಯಾದರೆ ಹೀಗೂ ಆಗಬಹುದು ಜೋಕೆ!

ಸ್ಮಾರ್ಟ್ ಯುಗದಲ್ಲಿರುವ ನಾವುಗಳು ತಂತ್ರಜ್ಞಾನಗಳ ಬಳಕೆಯಲ್ಲಿ ಒಂದು ಹೆಜ್ಜೆ ಮುಂದೆಯೇ ಇದ್ದೇವೆ. ಈ ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಫೋನ್​​​ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಈಗಿನ ಸ್ಮಾರ್ಟ್ ಫೋನ್ ಯುಗದಲ್ಲಿ ಮೊಬೈಲ್ ಫೋನ್ ಬಳಸದ ಜನರೇ ಇಲ್ಲ. ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎನ್ನುವುದು ತಿಳಿದಿದ್ದರೂ ಬಳಕೆ ಮಾಡುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಆದರೆ ಗರ್ಭ ಧರಿಸಿದ ಮಹಿಳೆಯರು ಮೊಬೈಲ್ ಫೋನ್ ಬಳಸುವುದು ಅಪಾಯಕಾರಿ ಎನ್ನಲಾಗಿದೆ. ಈ ಅಭ್ಯಾಸವು ತಾಯಿ ಹಾಗೂ ಮಗುವಿಗೂ ನಾನಾ ರೀತಿಯ ತೊಂದರೆಯನ್ನು ಉಂಟು ಮಾಡುತ್ತದೆ.

ಟೈಮ್ ಪಾಸ್​​​ಗೆಂದು ಮೊಬೈಲ್ ಬಳಸುವ ಗರ್ಭಿಣಿಯರೇ, ಇದು ಅತಿಯಾದರೆ ಹೀಗೂ ಆಗಬಹುದು ಜೋಕೆ!
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 23, 2024 | 11:11 AM

ಒಂದು ಹೆಣ್ಣು ತಾಯಿಯಾಗುವುದು ಎಂದರೆ ಸಂತೋಷದ ವಿಚಾರ. ಮನೆಗೆ ಹೊಸ ಅತಿಥಿಯ ಆಗಮನದ ಸಂಭ್ರಮವಾದರೆ, ಹೆಣ್ಣು ಮಗುವಿಗಾಗಿ ಈ ಸಮಯದಲ್ಲಿ ಸಾಕಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆಹಾರಕ್ರಮ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಆಹಾರ ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದು ಮಗುವಿನ ಮೇಲೆ ಪರಿಣಾಮವನ್ನು ಬೀರಬಹುದು. ಹೆಣ್ಣು ಗರ್ಭಧರಿಸಿದ ಸಮಯದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಗರ್ಭಿಣಿ ಮಹಿಳೆಯರು ಎಚ್ಚರ ವಹಿಸಿ ಮೊಬೈಲ್ ಬಳಕೆ ಇತಿಮಿತಿಯಲ್ಲಿರಿಸಿಕೊಂಡರೆ ಅಪಾಯದಿಂದ ಪಾರಾಗಬಹುದು.

*ಅತಿಯಾಗಿ ಮೊಬೈಲ್ ಬಳಕೆ ಮಾಡುವುದರಿಂದ ನಿದ್ರಾಹೀನತೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.

* ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲವೆಂದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾಡಲು ಶುರುವಾಗುತ್ತದೆ. ರಾತ್ರಿ ವೇಳೆಯಲ್ಲಿ ಮೊಬೈಲ್ ನೋಡದೇನೇ ಬೇಗನೇ ಮಲಗುವುದರಿಂದ ತಾಯಿ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.

* ಅತಿ ಹೆಚ್ಚು ಸಮಯದವರೆಗೆ ಮೊಬೈಲ್ ಬಳಕೆ ಮಾಡುವುದರಿಂದ ಅತಿಯಾಗಿ ವಿಕಿರಣವು ಹೀರಿಕೊಂಡು, ಮೆದುಳಿನ ಕ್ರಿಯೆ ಮತ್ತು ನಿದ್ರೆಗೆ ಹಾನಿಯನ್ನುಂಟು ಮಾಡುತ್ತದೆ.

* ಮೊಬೈಲ್ ಬಳಕೆಯು ಅತಿಯಾದರೆ ನಿಶ್ಯಕ್ತಿ, ಆತಂಕ, ನೆನಪಿನ ಕೊರತೆ ಹಾಗೂ ದೇಹವುಬಳಲಿದಂತಾಗುತ್ತದೆ.

* ಮೊಬೈಲ್ ನೋಡುವುದರಿಂದ ಕಣ್ಣಿಗೆ ವಿಶ್ರಾಂತಿಯಿಲ್ಲದೆ ಕಣ್ಣುಗಳಿಗೂ ಹಾನಿಯಾಗುವ ಸಾಧ್ಯತೆಯೇ ಹೆಚ್ಚು.

* ಗರ್ಭಿಣಿ ಮಹಿಳೆಯರು ದೀರ್ಘಕಾಲ ಮೊಬೈಲ್ ಬಳಕೆ ಮಾಡಿದರೆ ಮಗುವಿನ ಮಾನಸಿಕ ಆರೋಗ್ಯವು ಕೆಡಬಹುದು.

* ವಿಕಿರಣದಿಂದ ದೇಹದಲ್ಲಿನ ಕೋಶೀಯ ಗ್ರಾಹಕಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಅಧಿಕವಾಗಿದ್ದು, ಇದರಿಂದ ಕ್ಯಾನ್ಸರ್ ನಂತಹ ಕಾಯಿಲೆಯು ಆಹ್ವಾನ ಕೊಟ್ಟಂತಾಗುತ್ತದೆ.

ಇದನ್ನೂ ಓದಿ: ಅಡುಗೆಗೆ ಬಳಸುವ ತೆಂಗಿನೆಣ್ಣೆಯಲ್ಲಿದೆ ಸೌಂದರ್ಯದ ಗುಟ್ಟು

* ಗರ್ಭಿಣಿ ಮಹಿಳೆಯರು ಮೊಬೈಲ್ ಹೆಚ್ಚು ಬಳಕೆ ಮಾಡುವುದರಿಂದ ಮಕ್ಕಳಲ್ಲಿ ಅತಿಯಾದ ಆಕ್ರಮಣಕಾರಿ ಪ್ರವೃತ್ತಿಯು ಬೆಳೆಯುತ್ತದೆ.

* ಗರ್ಭದಲ್ಲಿ ಬೆಳೆಯುವ ಮಕ್ಕಳಿಗೆ ಅಧಿಕ ರಕ್ತದೊತ್ತಡ ಕಾಯಿಲೆಯು ಬರುವ ಸಂಭವ ಹೆಚ್ಚು.

* ಹೆಚ್ಚು ಸಮಯದವರೆಗೆ ಮೊಬೈಲ್ ಬಳಕೆ ಮಾಡುವುದರಿಂದ ಮಗುವಿನ ಜ್ಞಾಪಕಶಕ್ತಿ, ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ