Alcohal Consumption: ಜೋಪಾನ ಮದ್ಯಪಾನದಿಂದ ನಿಮ್ಮ ಈ ಅಂಗಕ್ಕೆ ಹಾನಿ, ಯಶ್ ಬಿರ್ಲಾ ಹೇಳಿದ್ದೇನು?

ಆಲ್ಕೋಹಾಲ್ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ತಿಳಿದಿದ್ದರೂ ಸೇವನೆ ಮಾಡುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಒಮ್ಮೆ ಇದಕ್ಕೆ ದಾಸರಾಗಿ ಬಿಟ್ಟರೆ ಮದ್ಯಪಾನ ಸೇವನೆಯಿಂದ ಹೊರ ಬರುವುದು ಅಷ್ಟು ಸುಲಭವಲ್ಲ. ಕುಡಿತದ ಬಳಿಕ ವ್ಯಕ್ತಿಯ ಆರೋಗ್ಯದಲ್ಲಿ ಬದಲಾವಣೆ, ಅದರ ಪರಿಣಾಮ ಎದುರಿಸುವುದು ಕಷ್ಟದಾಯಕ. ಆಲ್ಕೋಹಾಲ್ ಅತಿಯಾದ ಸೇವನೆಯಿಂದ ಲಿವರ್ ಹಾನಿಗೊಳಗಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಮೆದುಳಿನ ಆರೋಗ್ಯವನ್ನು ಹದಗೆಡಿಸುತ್ತೆ ಎನ್ನುವ ವಿಚಾರವನ್ನು ಯಶ್ ಬಿರ್ಲಾರವರು ಬಹಿರಂಗ ಪಡಿಸಿದ್ದಾರೆ.

Alcohal Consumption: ಜೋಪಾನ ಮದ್ಯಪಾನದಿಂದ ನಿಮ್ಮ ಈ ಅಂಗಕ್ಕೆ ಹಾನಿ, ಯಶ್ ಬಿರ್ಲಾ ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 11, 2024 | 3:44 PM

ಆರೋಗ್ಯಕರ ಅಭ್ಯಾಸದಿಂದ ದೇಹವು ನಾನಾ ಕಾಯಿಲೆಗಳಿಗೆ ತುತ್ತಾಗದಂತೆ ನೋಡಿಕೊಳ್ಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಸೇವನೆಯು ಟ್ರೆಂಡ್ ಆಗಿ ಬಿಟ್ಟಿದೆ. ಹೀಗಾಗಿ ಕಾಲೇಜಿಗೆ ತೆರಳುವ ಯುವಕರಂತೂ ಮದ್ಯ ಕುಡಿಯುವ ಅಭ್ಯಾಸವನ್ನು ಬೆಳೆಸಿ ಕೊಂಡಿದ್ದಾರೆ. ಆಲ್ಕೋಹಾಲ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ವಿಚಾರ ತಿಳಿದಿದ್ದರೂ ಸೇವಿಸುವವರ ಸಂಖ್ಯೆಯು ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಸ್ನೇಹಿತರ ಒತ್ತಾಯಕ್ಕೆ ಒಂದೇ ಒಂದು ಪೆಗ್ ಕುಡಿಯುತ್ತೇನೆ ಎಂದು ಶುರು ಮಾಡಿದ ಈ ಅಭ್ಯಾಸದಿಂದ ದಿನವಿಡೀ ಮದ್ಯದ ಅಮಲಿನಲ್ಲಿ ಬೀಳುವವರೇ ಹೆಚ್ಚು. ಒಮ್ಮೆ ಇದರ ಹಿಂದೆ ಬಿದ್ದು ಬಿಟ್ಟರೆ ಹೊರಬರಬೇಕು ಎಂದುಕೊಂಡರೂ ಈ ಮದ್ಯವು ನಿಮ್ಮನಂತೂ ಬಿಡುವುದೇ ಇಲ್ಲ.

ಗೆಳೆಯರ ಒತ್ತಡದಿಂದ ಅಮಲು ಪದಾರ್ಥಗಳ ಸೇವನೆಯಿಂದಾಗುವ ಋಣಾತ್ಮಕ ಪರಿಣಾಮಗಳ ಬಗ್ಗೆ ಯೋಚನೆ ಮಾಡುವುದೇ ಕಡಿಮೆ. ತಮ್ಮ ಆತ್ಮೀಯರ ಮನಸ್ಸಿಗೆ ನೋವಾಗಬಾರದೆಂದು ತೆಗೆದುಕೊಳ್ಳುವ ಆಲ್ಕೋಹಾಲ್ ಗೊತ್ತೋ ಗೊತ್ತಿಲ್ಲದ್ದಂತೆ ನಾನಾ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಇದರ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಬಿರ್ಲಾ ಗುಂಪಿನ ಅಧ್ಯಕ್ಷರಾದ ಯಶ್ ಬಿರ್ಲಾ ಬಹಿರಂಗ ಪಡಿಸಿದ್ದಾರೆ.

ಮದ್ಯ ಸೇವನೆಯಿಂದ ವಿಶೇಷವಾಗಿ ಇಂದ್ರಿಯಗಳನ್ನು ಮಂದಗೊಳಿಸಿ ಆರೋಗ್ಯದ ಮೇಲೆ ಉಂಟು ಮಾಡುವ ಸಂಭಾವ್ಯ ಹಾನಿಯ ಬಗ್ಗೆ ಮಾತನಾಡಿದ್ದಾರೆ. ದೇಹಕ್ಕೆ ಏನನ್ನಾದರೂ ಮಾಡಬೇಕೆಂದು ಯೋಚಿಸಿದಾಗ, ಕೇಂದ್ರ ನರಮಂಡಲವು ದೇಹದ ಆ ಭಾಗಕ್ಕೆ ಸಂಕೇತವನ್ನು ರವಾನಿಸುತ್ತದೆ. ಆದರೆ ಆಲ್ಕೋಹಾಲ್ ಕೇಂದ್ರ ನರಮಂಡಲವನ್ನು ಹದಗೆಡಿಸುತ್ತದೆ. ವ್ಯಕ್ತಿಯು ಯೋಚಿಸಲು, ಮಾತನಾಡಲು ಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಇದನ್ನೂ ಓದಿ: ಅತಿಯಾದ ಮೂತ್ರ ವಿಸರ್ಜನೆ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು

ಇದರ ವ್ಯಾಪಕ ಬಳಕೆಯಿಂದ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆಲ್ಕೋಹಾಲ್ ಸೇವನೆಯೊಂದಿಗೆ ಸಂಬಂಧಿಸಿದ ಅರಿವಿನ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ತಮ್ಮ ಯೋಗಕ್ಷೇಮದ ಬಗ್ಗೆ ಆದ್ಯತೆ ನೀಡುವುದು ಮುಖ್ಯ ಎಂದಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ