Healthy Food: ಈ 8 ಆಹಾರಗಳನ್ನು ರಾತ್ರಿ 8 ಗಂಟೆಯಾದ ಮೇಲೇ ಸೇವಿಸಿ
ರಾತ್ರಿ ನಾವು ಸೇವಿಸುವ ಆಹಾರ ನಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ, ರಾತ್ರಿಯ ಹೊತ್ತಿನಲ್ಲಿ ಭೂರೀ ಭೋಜನ ಮಾಡುವುದು ಒಳ್ಳೆಯದಲ್ಲ. ಆದಷ್ಟು ಲಘು ಆಹಾರ ಸೇವಿಸುವುದು ಉತ್ತಮ. ಕಿವಿ, ಚೆರಿ ಹಣ್ಣುಗಳು, ಹಾಲು, ಮೀನು, ನಟ್ಸ್ ಮತ್ತು ಅನ್ನ ಸೇವಿಸುವುದರಿಂದ ರಾತ್ರಿಯ ವೇಳೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಈ 8 ಆಹಾರಗಳನ್ನು ರಾತ್ರಿ 8 ಗಂಟೆಯಾದ ನಂತರ ತಿನ್ನುವುದು ಒಳ್ಳೆಯದು. ಯಾಕೆ ಅಂತೀರಾ?
ಆರೋಗ್ಯಕರ ನಿದ್ರೆ ಬರಬೇಕೆಂದರೆ ಮಲಗುವ ಮೊದಲು ಕೆಫೀನ್, ಆಲ್ಕೋಹಾಲ್ (Alcohol) ಮತ್ತು ಭಾರೀ ಊಟವನ್ನು ತಪ್ಪಿಸಬೇಕು. ಸಮತೋಲಿತ ಆಹಾರ ಕೂಡ ನಿದ್ರೆಯ (Sleep) ಮೇಲೆ ಪರಿಣಾಮ ಬೀರುತ್ತದೆ. ಕೆಲವು ಆಹಾರಗಳು ನಿಮಗೆ ನಿದ್ರೆ ಬರುವಂತೆ ಮಾಡಬಹುದು ಅಥವಾ ಉತ್ತಮ ನಿದ್ರೆಯನ್ನು ಉತ್ತೇಜಿಸಬಹುದು. ಇನ್ನು ಕೆಲವು ನಿಮ್ಮ ನಿದ್ರೆಯನ್ನು ಹಾಳು ಮಾಡಬಹುದು. ಹೀಗಾಗಿ, ರಾತ್ರಿ 8 ಗಂಟೆಯ ನಂತರ ಮಾತ್ರ ಸೇವಿಸಬೇಕಾದ 8 ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಗ್ರೀಕ್ ಮೊಸರು:
ಗ್ರೀಕ್ ಮೊಸರು ಕ್ಯಾಲ್ಸಿಯಂನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ದಿನವೂ ಮೊಸರು ತಿನ್ನಲು ಮರೆಯಬೇಡಿ. ಇದು ಸಕ್ಕರೆ ಮುಕ್ತವಾಗಿರುತ್ತದೆ. ಮೊಸರಿಗೆ ಸಕ್ಕರೆ ಹಾಕಿ ತಿನ್ನಬೇಡಿ. ಹಣ್ಣುಗಳು, ನಟ್ಸ್ ಮತ್ತು ಜೇನುತುಪ್ಪದೊಂದಿಗೆ ಮೊಸರನ್ನು ಸವಿಯಬಹುದು.
ಕುಂಬಳಕಾಯಿ ಬೀಜಗಳು:
ಕುಂಬಳಕಾಯಿಯು ಟ್ರಿಪ್ಟೊಫಾನ್ ಅನ್ನು ಹೊಂದಿರುತ್ತದೆ. ಇದು ನಿಯಂತ್ರಿತ ಮತ್ತು ತಡೆರಹಿತ ನಿದ್ರೆಗೆ ಕೊಡುಗೆ ನೀಡುತ್ತದೆ. ಕುಂಬಳಕಾಯಿ ಬೀಜಗಳು ಸತು, ರಂಜಕ, ಪೊಟ್ಯಾಸಿಯಮ್, ಸೆಲೆನಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿವೆ. ಇದು ಉರಿಯೂತಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಎದುರಿಸಲು ಇದು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನಿಮ್ಮ ಮಗು ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ?; ನಿರ್ಲಕ್ಷ್ಯ ಮಾಡಬೇಡಿ
ಬಾಳೆಹಣ್ಣು:
ಬಾಳೆ ಹಣ್ಣುಗಳು ಆಹಾರದ ಮೆಲಟೋನಿನ್‌ನ ಉತ್ತಮ ಮೂಲವಾಗಿದೆ. ಸಂಜೆ ತಡವಾಗಿ ಬಾಳೆಹಣ್ಣು ತಿನ್ನುವುದರಿಂದ ಹಣ್ಣನ್ನು ತಿಂದ 2 ಗಂಟೆಗಳ ನಂತರ ಸೀರಮ್ ಮೆಲಟೋನಿನ್ ಮಟ್ಟವು 4 ಪಟ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಅಲ್ಲದೆ, ಬಾಳೆ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಅಂಶವು ಸ್ನಾಯು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದ ಕೆಲವು ಜನರು ಮಲಗಲು ಪ್ರಯತ್ನಿಸುವಾಗ ಸಮಸ್ಯೆ ಎದುರಿಸುತ್ತಾರೆ.
ಚೆರಿ ಹಣ್ಣು:
ಚೆರಿಗಳು ನಿಮ್ಮ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ನಿದ್ರೆಗೆ ಪ್ರಚೋದಿಸುವ ಟ್ರಿಪ್ಟೊಫಾನ್ ಲಭ್ಯತೆಯನ್ನು ಹೆಚ್ಚಿಸುತ್ತವೆ. ಚೆರಿ ಹಣ್ಣುಗಳು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ.
ಧಾನ್ಯಗಳು:
ಧಾನ್ಯಗಳನ್ನು ಸಾಮಾನ್ಯವಾಗಿ ಬೆಳಗಿನ ಉಪಾಹಾರಕ್ಕಾಗಿ ಕಾಯ್ದಿರಿಸಲಾಗುತ್ತದೆ. ಆದರೆ ರಾತ್ರಿ 8 ಗಂಟೆಯ ಊಟದ ನಂತರವೂ ಅವುಗಳನ್ನು ತಿನ್ನಲು ಉತ್ತಮವಾಗಿರುತ್ತವೆ. ಅವು ಹೆಚ್ಚಿನ ಗ್ಲೈಸೆಮಿಕ್ ಕಾರ್ಬೋಹೈಡ್ರೇಟ್‌ಗಳಾಗಿರುವುದರಿಂದ, ಧಾನ್ಯಗಳು ನಿಮಗೆ ಬೇಗ ನಿದ್ರೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹಕ್ಕೆ ನಿಮಗೆ ಬೇಕಾದ ವಿಶ್ರಾಂತಿಯನ್ನು ನೀಡುತ್ತದೆ.
ಡಾರ್ಕ್ ಚಾಕೊಲೇಟ್:
ಡಾರ್ಕ್ ಚಾಕೊಲೇಟ್ ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿದ ಆರೋಗ್ಯಕರ ತಿಂಡಿಯಾಗಿದೆ. ಆದರೆ ಮಿತವಾಗಿ ಇದನ್ನು ಸೇವಿಸಿ. ಏಕೆಂದರೆ ಇದರಲ್ಲಿ ಕೆಫೀನ್ ಕೂಡ ಇದೆ. ಇದರಿಂದ ರಾತ್ರಿ ಪದೇಪದೆ ಎಚ್ಚರವಾಗಬಹುದು.
ಇದನ್ನೂ ಓದಿ: Snoring: ಸಂಗಾತಿಯ ಗೊರಕೆಯಿಂದ ನಿದ್ರೆ ಮಾಡಲು ಆಗುತ್ತಿಲ್ಲವೇ? ಹೀಗೆ ಮಾಡಿ
ಚಿಕನ್:
ಕೋಳಿ ಮಾಂಸದಂತಹ ನೇರ ಮಾಂಸವು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ಟ್ರಿಪ್ಟೊಫಾನ್ ಅಮೈನೋ ಆಮ್ಲವನ್ನು ಹೊಂದಿರುತ್ತದೆ. ಇದು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ನರಗಳಿಗೆ ವಿಶ್ರಾಂತಿ ನೀಡುತ್ತದೆ.
ಕಾಟೇಜ್ ಚೀಸ್:
ಕಾಟೇಜ್ ಚೀಸ್ ಅಥವಾ ಪನೀರ್ ಪ್ರೋಟೀನ್‌ನಿಂದ ತುಂಬಿರುತ್ತದೆ. ಇದು ನಿಮ್ಮನ್ನು ಪೂರ್ಣವಾಗಿರಿಸಲು ಸಹಾಯ ಮಾಡುತ್ತದೆ. ಇದರ ಕ್ಯಾಸೀನ್ ಅಂಶವು ಅಮೈನೋ ಆಮ್ಲಗಳ ನಿಧಾನಗತಿಯ ಬಿಡುಗಡೆಯನ್ನು ಖಾತ್ರಿಗೊಳಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ