Marriage Preparation Tips : ನಿಮ್ಮ ಮ್ಯಾರೇಜ್ ಫಿಕ್ಸ್ ಆಗಿದ್ಯಾ, ಹಾಗಾದ್ರೆ ಮಾನಸಿಕ ಸಿದ್ಧತೆ ಹೀಗಿರಲಿ

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆ. ಒಂದು ಹೆಣ್ಣಿಗೆ ಒಂದು ಗಂಡು ಎಂದು ಬರೆದಿರುತ್ತಾನೆ. ಆದರೆ ಈ ಮದುವೆಯ ಬಳಿಕ ಗಂಡಿರಲಿ ಹೆಣ್ಣಿರಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕಬೇಕಾಗುತ್ತದೆ. ಒಬ್ಬರು ಮೇಲೆ ಇನ್ನೊಬ್ಬರು ಕೆಳಗೆ ಎನ್ನುವ ಭಾವವನ್ನು ಮರೆತು ಇಬ್ಬರೂ ಸಮಾನರು ಎನ್ನುವ ಹಾಗೆ ಜೀವನ ನಡೆಸಬೇಕು. ಆದರೆ ಗಂಡಿಗಿಂತ ಹೆಣ್ಣಿಗೆ ಹೊಂದಾಣಿಕೆಯೆನ್ನುವುದು ಕಷ್ಟವೆನಿಸಬಹುದು. ಮದುವೆಗೆ ಅದ್ದೂರಿಯಾದ ತಯಾರಿ ಹೇಗೆ ಮುಖ್ಯವೋ ಮಾನಸಿಕ ತಯಾರಿಯು ಅಷ್ಟೇ ಅಗತ್ಯ. ಹೀಗಾಗಿ ಹೆಣ್ಣು ಗಂಡು ಇಬ್ಬರೂ ಈ ಟಿಪ್ಸ್ ಪಾಲಿಸಿದರೆ ಸಂಸಾರವೆನ್ನುವುದು ಆನಂದ ಸಾಗರವಾಗುವುದರಲ್ಲಿ ಎರಡು ಮಾತಿಲ್ಲ.

Marriage Preparation Tips : ನಿಮ್ಮ ಮ್ಯಾರೇಜ್ ಫಿಕ್ಸ್ ಆಗಿದ್ಯಾ, ಹಾಗಾದ್ರೆ ಮಾನಸಿಕ ಸಿದ್ಧತೆ ಹೀಗಿರಲಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 11, 2024 | 6:16 PM

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಪ್ರಮುಖ ಘಟ್ಟ. ಎಲ್ಲರೂ ಕೂಡ ತಮ್ಮ ತಮ್ಮ ಮದುವೆಯ ಬಗ್ಗೆ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಅದಕ್ಕೆ ಬೇಕಾಗುವ ತಯಾರಿಯನ್ನು ಜೋರಾಗಿ ಮಾಡುತ್ತಾರೆ. ಆದರೆ ಮದುವೆಗೂ ಮುನ್ನ ಗಂಡು ಹೆಣ್ಣು ಇಬ್ಬರೂ ಮಾನಸಿಕವಾಗಿ ಸಿದ್ದರಾಗಿರಬೇಕು. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಕೆಲವು ವಿವಾಹ ಪೂರ್ವ ಬದಲಾವಣೆ ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ತಮ್ಮ ಜೀವನ ಸಂಗಾತಿಯ ಗುಣ ಅವಗುಣಗಳನ್ನು ಒಪ್ಪಿ ಸಂಸಾರ ಸಾಗಿಸಬೇಕಾಗುತ್ತದೆ.

ವಿವಾಹಪೂರ್ವ ಮಾನಸಿಕ ಸಿದ್ಧತೆ ಹೀಗಿರಲಿ:

  1. ನಾನು ಎನ್ನುವ ಬದಲಾಗಿ ನಾವು ಎನ್ನುವ ಬಳಕೆ ಇರಲಿ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಾನು ಎನ್ನುವ ಪದ ಬಳಕೆಯು ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಅದಲ್ಲದೇ ನಿಮ್ಮನ್ನೆ ನಂಬಿ ಬಂದ ಸಂಗಾತಿಯೊಂದಿಗೆ ನಾನು ನನ್ನದು ಎನ್ನುವುದು ಬೇಡ. ಏನೇ ಮಾಡಿದರೂ ನಮಗಾಗಿ ಎಂದು ರೂಢಿಸಿಕೊಂಡರೆ ಸಂಸಾರವು ಸುಖಕರವಾಗಿರುತ್ತದೆ. ವಿವಾಹ ಪೂರ್ವವೇ ಈ ರೀತಿಯ ತಯಾರಿಯನ್ನು ಮೊದಲು ಮಾಡಿಕೊಳ್ಳಬೇಕು.
  2. ಆದರ್ಶ ದಂಪತಿಯನ್ನು ಮಾದರಿಯಾಗಿ ತೆಗೆದುಕೊಳ್ಳಿ : ಸಂಸಾರವೆಂದ ಮೇಲೆ ಸಣ್ಣ ಪುಟ್ಟ ಮುನಿಸು, ಮನಸ್ತಾಪ, ಜಗಳ ಸರ್ವೇ ಸಾಮಾನ್ಯ. ಈ ಸಂದರ್ಭಗಳು ಎದುರಾದಾಗ ಎಲ್ಲವನ್ನು ನಿಭಾಯಿಸುವ ಕಲೆ ಹೇಗೆ ಎಂದು ತಿಳಿಯುವುದು ಮುಖ್ಯ. ನಿಮ್ಮ ಸುತ್ತ ಯಾರಾದರೂ ಆದರ್ಶ ದಂಪತಿಗಳಿದ್ದರೆ ಅವರ ಸಾಂಸರಿಕ ಜೀವನವನ್ನು ಮಾದರಿಯಾಗಿ ತೆಗೆದುಕೊಳ್ಳಬಹುದು.
  3. ವಿವಾಹ ಪೂರ್ವ ಕೋರ್ಸ್ ಗಳಿಗೆ ಸೇರಿ : ಹೊಸ ಜೀವನಕ್ಕೆ ಕಾಲಿಡುವ ಗಂಡು ಹೆಣ್ಣು ತಮ್ಮ ಮುಂದಿನ ಜೀವನವನ್ನು ಹೇಗೆ ನಿರ್ವಹಿಸುವುದು ಹೇಗೆ ಎನ್ನುವ ಭಯವಿರುತ್ತದೆ. ಕೆಲವರ ಮನೆಯಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣವು ಇರುವುದಿಲ್ಲ. ಹೀಗಾಗಿ ವಿವಾಹ ಪೂರ್ವ ಕೋರ್ಸ್ ಗಳಿಗೆ ತೆರಳಿ ಅಲ್ಲಿ ಸಲಹೆಗಾರರಲ್ಲಿ ತಮ್ಮ ಗೊಂದಲ ಹಾಗೂ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದು.
  4. ಹಣಕಾಸಿನ ಬಗ್ಗೆ ಗಮನ ಕೊಡಿ : ಸಂಸಾರಿಯಾದ ಮೇಲೆ ಖರ್ಚುಗಳು ತುಂಬಾ. ಮದುವೆ ಫಿಕ್ಸ್ ಆಗುತ್ತಿದ್ದಂತೆ ಹಣಕಾಸಿನ ಬಗ್ಗೆ ಸ್ವಲ್ಪ ಗಮನ ಕೊಡಿ. ಜೀವನ ಸಂಗಾತಿಯ ಜೊತೆಗೆ ಭವಿಷ್ಯದಲ್ಲಿ ಹೇಗೆಲ್ಲಾ ಉಳಿತಾಯವನ್ನು ಮಾಡಿ ಆರ್ಥಿಕವಾಗಿ ನಿಭಾಯಿಸಬಹುದು ಎಂದೆಲ್ಲಾ ಚರ್ಚಿಸಿ. ಈ ರೀತಿ ಬದಲಾವಣೆ ಮಾಡಿಕೊಂಡರೆ ನಿಮ್ಮ ಸಂಗಾತಿಗೆ ನೀವು ಭವಿಷ್ಯದಲ್ಲಿ ಆರ್ಥಿಕವಾಗಿ ಉತ್ತಮವಾಗಿರಲು ಯೋಚಿಸಿದ್ದೀರಾ ಎನ್ನುವುದು ಅರ್ಥ ವಾಗುತ್ತದೆ.
  5. ತರೆದ ಮನಸ್ಸನ್ನು ಇಟ್ಟುಕೊಳ್ಳಿ : ಮದುವೆಗೆ ಮುನ್ನ ನೀವು ಹೇಗೆ ಇದ್ದರೂ ವೈವಾಹಿಕ ಜೀವನದ ಬಳಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗೆ ಒಗ್ಗಿಕೊಳ್ಳಬೇಕಾಗುತ್ತದೆ. ಸಂಗಾತಿಗಳಿಬ್ಬರು ನಿರೀಕ್ಷೆಗಳ ಜೊತೆಗೆ ಜೀವನದ ಏರಿಳಿತವನ್ನು ನಿಭಾಯಿಸಿಕೊಂಡು ಹೋಗುವುದನ್ನು ಕಲಿಯುವುದು ಮುಖ್ಯವಾಗಿರುತ್ತದೆ. ಹೀಗಾಗಿ ವಿವಾಹ ಪೂರ್ವದಲ್ಲೇ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್